ವೆಲ್ವೆಟ್ ಸೀರೆಯಲ್ಲಿ ಮಿಂಚಿದ ಸಪ್ತಮಿ: ಕಾಂತಾರ ಸುಂದರಿಯ ಫೋಟೋಗಳು ವೈರಲ್​! Sapthami Gowda

ಕಾಂತಾರ ಬ್ಯೂಟಿ ಸಪ್ತಮಿ
ಕಾಂತಾರ ಬ್ಯೂಟಿ ಸಪ್ತಮಿ
Published on
Sapthami Gowda

ಕಾಂತಾರ ಬ್ಯೂಟಿ ಸಪ್ತಮಿ

ನಟಿ ಸಪ್ತಮಿ ಗೌಡ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ಅದರಲ್ಲೂ 2022ರಲ್ಲಿ ತೆರೆಕಂಡ ಕಾಂತಾರ ಸಿನಿಮಾ ಮೂಲಕ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು.
Sapthami Gowda

ಪ್ಯಾನ್ ಇಂಡಿಯಾ ನಟಿ

ಪ್ರಾದೇಶಿಕ ಚಿತ್ರವಾಗಿ ಕನ್ನಡ ಭಾಷೆಯಲ್ಲಿ ಮೊದಲು ಬಿಡುಗಡೆಯಾದ 'ಕಾಂತಾರ' ಸಿನಿಮಾ, ನಂತರ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಹಿಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ಸಪ್ತಮಿ ಗೌಡ ಹೆಸರು ಎಲ್ಲರಿಗೂ ಪರಿಚಯವಾಯಿತು.
Sapthami Gowda

ಮುಂದಿನ ಸಿನಿಮಾಗಳು

ಕಾಂತಾರ ಚಿತ್ರದ ನಂತರ ಯುವರಾಜ್​ ಕುಮಾರ್​ ನಟನೆಯ ಯುವ ಸಿನಿಮಾದಲ್ಲಿ ನಟಿಸಿದರು. ಪ್ರಸ್ತುತ, ಶೋಧ ಮತ್ತು ದಿ ರೈಸ್​ ಆಫ್​ ಅಶೋಕ ಸಿನಿಮಾದಲ್ಲಿ ನಟಿಸಿದ್ದಾರೆ.
Sapthami Gowda

ತೆಲುಗಿನಲ್ಲಿ ಕೈಕೊಟ್ಟ ಲಕ್​

ಇತ್ತೀಚೆಗೆ ನಾಯಕ ನಿತಿನ್ ನಟನೆಯ 'ತಮ್ಮುಡು' ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೂ ಸಪ್ತಮಿ ಗೌಡ ಪದಾರ್ಪಣೆ ಮಾಡಿದರು. ಆದರೆ, ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡಲಿಲ್ಲ.
Sapthami Gowda

ಜಾಲತಾಣದಲ್ಲಿ ಹೈಪರ್ ಆಕ್ಟಿವ್

ಸಿನಿಮಾ ಹೊರತುಪಡಿಸಿದರೆ ಸಾಮಾಜಿಕ ಜಾಲತಾಣದಲ್ಲಿ ಸಪ್ತಮಿ ಅವರು ಹೈಪರ್ ಆಕ್ಟಿವ್ ಆಗಿರುತ್ತಾರೆ. ಅವರು ಆಗಾಗ ಹಾಟ್​ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
Sapthami Gowda

ವೆಲ್ವೆಟ್ ಸೀರೆಯಲ್ಲಿ ಸಪ್ತಮಿ ಸೊಬಗು

ಇತ್ತೀಚೆಗೆ, ಸಪ್ತಮಿ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ನೀಲಿ ವೆಲ್ವೆಟ್ ಸೀರೆಯಲ್ಲಿ ಮುದ್ದಾದ ನಗುವಿನೊಂದಿಗೆ ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವೆಲ್ವೆಟ್​ ಸೀರೆಯಲ್ಲಿ ಸಪ್ತಮಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅದನ್ನು ನೋಡಿದ ಅಭಿಮಾನಿಗಳು ಸಪ್ತಮಿ ಸೌಂದರ್ಯವನ್ನು ಹೊಗಳುವ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net