ನೀವು ನಿತ್ಯ ಬಳಕೆ ಮಾಡುವ ಅರಿಶಿನ ಎಷ್ಟು ಶುದ್ಧ?: ಈ ಸಿಂಪಲ್​ ಟಿಪ್ಸ್​ ಬಳಸಿ ಕಲಬೆರಕೆ ಪತ್ತೆ ಹಚ್ಚಿ!..Yellow clay in Turmeric

Yellow clay in Turmeric
Yellow clay in Turmeric
Published on

ಪ್ರಮುಖ ಮುಖ್ಯಾಂಶಗಳು

  • ಅರಿಶಿನಕ್ಕೆ ಹಳದಿ ಜೇಡಿಮಣ್ಣನ್ನು ಬೆರೆಸಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ
  • ಯಾವುದೇ ಲ್ಯಾಬ್ ಅಗತ್ಯವಿಲ್ಲದೆ ಕೇವಲ ಒಂದು ಲೋಟ ನೀರಿನಿಂದ ಪರೀಕ್ಷೆ ಮಾಡಬಹುದು
  • ಜೇಡಿಮಣ್ಣಿನ ಕಲಬೆರಕೆಯು ಅರಿಶಿನದ ಗುಣಮಟ್ಟವನ್ನು ಕುಂದಿಸುತಯ್ತದೆ
Yellow clay in Turmeric: ಭಾರತದಲ್ಲಿರುವ ಪ್ರತಿಯೊಬ್ಬರು ಅಡುಗೆ ಮತ್ತು ದೇಹದ ಚರ್ಮದ ಕಾಂತಿಗೆ ಅರಿಶಿನ (Turmeric)ಬಳಕೆ ಮಾಡುತ್ತಾರೆ. ಮಾಡದೆ ಉಳಿದುಕೊಂಡವರ ಸಂಖ್ಯೆ ತೀರಾ ಕಡಿಮೆ. ಈ ಮುಂಚೆ, ಕಾಲಿಗೆ ಗಾಯವಾದರೆ ಅರಿಶಿನ ಹಚ್ಚಲಾಗುತ್ತಿತ್ತು. ಅದರಲ್ಲಿ ಔಷಧೀಯ ಗುಣವಿದೆ ಎಂದು ನಂಬಲಾಗಿದೆ. ಹಾಗೆಯೇ ಮುಟ್ಟಿನ ಹೊಟ್ಟೆ ನೋವಿಗೆ ನೀರು ಕುದಿಸಿ, ಅರಿಶಿನ ಹಾಕಿ ಕುಡಿದರೆ ನಿರಾಳ. ಬಾದಾಮಿ ಪೌಡರ್​ ಖರೀದಿ ಮಾಡಲು ಸಾಧ್ಯವಾಗದವರು ಅರಿಶಿನ ಹಾಲಿಗೆ ಹಾಕಿ ಅದನ್ನೇ ಬಾದಾಮಿ ಹಾಲು ಎಂದು ನಂಬಿಸುವ ಕಾಲವಿತ್ತು. ಜೊತೆಗೆ ಮುಖದ ಕಾಂತಿ ಹೆಚ್ಚಿಸಲು ಅರಿಶಿನ ಪ್ರಮುಖ ಪಾತ್ರವಹಿಸುತ್ತದೆ.
ನಾನಾ ರೀತಿಯಲ್ಲಿ ಬಳಕೆಯಾಗುವ ಅರಿಶಿನದಲ್ಲಿ ಜೇಡಿ ಮಣ್ಣನ್ನು ಬೆರೆಸಲಾಗುತ್ತಿದೆ ಎಂದು Food Safety and Standards Authority of India(FSSAI) ಹೇಳಿದೆ. ಈಗ ಎಲ್ಲವೂ ಕಲಬೆರಕೆ ಕಾಫಿ, ಟೀಗೆ ಪಪ್ಪಾಯದ ಬೀಜ, ರಾಗಿ, ಅಕ್ಕಿಗೆ ಮೈದಾ, ಅಡುಗೆ ಎಣ್ಣೆ ಜೊತೆ ಹೊಂಗೆ ಎಣ್ಣೆ ಮಿಕ್ಸ್​ ಮಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಅಂಗಡಿಯಲ್ಲಿ ಖರೀದಿ ಮಾಡುವ ಅರಿಶಿನವನ್ನು ಕಲಬೆರಕೆಯೋ ಅಥವಾ ಇಲ್ಲವೋ ಅನ್ನೋದನ್ನ ಪತ್ತೆ ಹಚ್ಚ ಬಹುದಾಗಿದೆ.

ಕಲಬೆರಕೆ ಪತ್ತೆಗೆ ಬೇಕಾದ ವಸ್ತುಗಳು ಯಾವುದು?

  • ಗಾಜಿನ ಒಂದು ಲೋಟ
  • ಅರಿಶಿನ
  • ನೀರು

ಕಲಬೆರಕೆ ಪತ್ತೆ ಹಚ್ಚೋದು ಹೇಗೆ?

ಒಂದು ಗ್ಲಾಸ್​ಗೆ ಅರಿಶಿನವನ್ನು ಒಂದು ಟೇಬಲ್​ ಸ್ಪೂನ್​ನಷ್ಟು ಹಾಕಿ ಚೆನ್ನಾಗಿ ಬೆರಸಿ. ಅದಾದ ನಂತರ ಕೆಲವು ನಿಮಿಷಗಳ ಕಾಲ ಅದನ್ನು ಹಾಗೇಯೇ ಬಿಡಿ.

ಯಾವುದು ಶುದ್ಧ ಅರಿಶಿನ ಯಾವುದು ಕಲಬೆರಕೆ?

  • ಅರಿಶಿನ ನೀರಿನಲ್ಲಿ ಬೆರೆತು, ಲೋಟದ ತಳದಲ್ಲಿ ಯಾವುದೇ ಕಣಗಳು ಉಳಿದುಕೊಳ್ಳದೇ ಇದ್ದರೆ ಅದು ಶುದ್ಧ ಅರಿಶಿನ. ನೀರು ತಿಳಿ ಹಳದಿಗೆ ತಿರುಗಿದರೆ ಅದು ಕಲಬೆರಕೆಯದ್ದಲ್ಲ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೇಳಿದೆ
  • ನೀರಿನಲ್ಲಿ ಜೇಡಿ ಮಣ್ಣು ಇದ್ದರೆ ಅದು ಕರಗುವುದಿಲ್ಲ ಬದಲಾಗಿ ಲೋಟದ ತಳ ಭಾಗದಲ್ಲಿ ಶೇಖರಣೆಯಾಗುತ್ತದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಚ್ಚರಿಸಿದೆ.

ಎಚ್ಚೆತ್ತುಕೊಳ್ಳಿ

ದಿನನಿತ್ಯ ಅರಿಶಿನವನ್ನು ದೇವರಿಗಾಗಿ, ಮುಖದ ಕಾಂತಿಗಾಗಿ ಬಳಕೆ ಮಾಡೋದಿಲ್ಲ. ಬದಲಾಗಿ, ಆರೋಗ್ಯ, ಔಷಧಿ ವಿಚಾರವಾಗಿ ಬಳಕೆಯಾಗುತ್ತದೆ. ರಾಸಾಯನಿಕ ಬಣ್ಣ ಮತ್ತು ಮಣ್ಣು ಬೆರೆಸಿದಾಗ ಅರಿಶಿನದ ನಿಜವಾದ ನೈಸರಗಿಕ ಗುಣವನ್ನು ನಾಶಪಡಿಸುತ್ತವೆ. ಈ ಸರಳ ಪರೀಕ್ಷೆಯು ಸಾಮಾನ್ಯ ಗ್ರಾಹಕರು ತಾವು ಬಳಸುವ ಆಹಾರದ ಬಗ್ಗೆ ಜಾಗೃತರಾಗಲು ಸಹಾಯ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net