ಪ್ರತಿ ವ್ಯಕ್ತಿಯ ಕರುಳಿನಲ್ಲಿರುವ ಆರೋಗ್ಯಕರ ಸೂಕ್ಷ್ಮಜೀವಿಗಳಿಗೆ ನಾರಿನಾಂಶವುಳ್ಳ ಪದಾರ್ಥಗಳು ಇಂಧನದಂತೆ. ಹೀಗಾಗಿ ನಿತ್ಯ ಹಣ್ಣುಗಳು, ತರಕಾರಿಗಳು, ಓಟ್ಸ್, ಬೀಜಗಳನ್ನು ಸೇವಿಸಬೇಕು. ಈ ಧಾನ್ಯಗಳಲ್ಲಿರುವ ಫೈಬರ್ ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆಯನ್ನು ತಡೆಯುವುದಲ್ಲದೆ, ಲಿವರ್ ಮತ್ತು ಕರುಳಿನ ಕ್ಯಾನ್ಸರ್ ಕಡಿಮೆ ಮಾಡುತ್ತದೆ.