ಸತತ ಮೂರನೇ ಬಾರಿಗೆ ಪ್ರಶಸ್ತಿ ಸುತ್ತಿಗೇರುವ ವಿಶ್ವಾಸದಲ್ಲಿರುವ ಫ್ರಾನ್ಸ್ ತಂಡ ಫಿಫಾ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನದಲ್ಲಿದ್ದು, ಸೆನೆಗಲ್ 16ನೇ ಸ್ಥಾನದಲ್ಲಿದೆ. 80,545 ಪ್ರೇಕ್ಷಕರಿಂದ ತುಂಬಿದ್ದ ಕ್ರೀಡಾಂಗಣದ ಕೆಲ ಆಸನಗಳು ಖಾಲಿ ಉಳಿದಿದ್ದವು. ಡಿಸೆಂಬರ್ನಲ್ಲಿ ಕನಿಷ್ಠ 20 ರಿಂದ 58 ಸಾವಿರ ರೂ. ಬೆಲೆ ಹೊಂದಿದ್ದ ಟಿಕೆಟ್ ಬೆಲೆ, ಪಂದ್ಯ ಆರಂಭಕ್ಕೆ 2 ಗಂಟೆಗೆ ಮುನ್ನ 6,512 ಸಾವಿರಕ್ಕೆ ಕುಸಿತ ಕಂಡಿತ್ತು.