ವೈಭವ್ ಕೈಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್, "ತಮ್ಮ ಅವಕಾಶಗಳನ್ನು ವೈಭವ್ ಖಂಡಿತ ಪಡೆಯುತ್ತಾರೆ. ಈಗಾಗಲೇ ರನ್ ಗಳಿಸುತ್ತಿರುವ ವ್ಯಕ್ತಿಯನ್ನು ಕೈಬಿಡಬೇಕು ಎಂಬ ನಿರ್ಧಾರ ನನಗೆ ಇಷ್ಟವಿಲ್ಲ. ಅಸಲಿಗೆ ಅದು ಸರಿಯೂ ಅಲ್ಲ" ಎಂದು ತಿಳಿಸಿದ್ದಾರೆ. ಮೊದಲ ಪಂದ್ಯದಿಂದ ವೈಭವ್ರನ್ನು ಕೈಬಿಟ್ಟಿರುವ ಮ್ಯಾನೇಜ್ಮೆಂಟ್ ಭಾನುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಅವರಿಗೆ ಅವಕಾಶ ಕೊಡಲಿದೆ ಎಂಬ ನಂಬಿಕೆಯಿದೆ,(ಏಜೆನ್ಸೀಸ್).