ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಭಾರತೀಯ ಕ್ರಿಕೆಟ್ನಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ 'ವೈಯಕ್ತಿಕ ದಾಖಲೆಗಳ ಆರಾಧನೆ'ಗೆ ಅಂತ್ಯ ಹಾಡಲು ಕರೆ ನೀಡಿದ್ದಾರೆ. "ನನ್ನ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ತತ್ವ ಒಂದೇ; ನಮಗೆ ಶತಕ ಅಥವಾ ಅರ್ಧಶತಕದಂತಹ ಮೈಲಿಗಲ್ಲುಗಳು ಮುಖ್ಯವಲ್ಲ, ನಮಗೆ ಬೇಕಿರುವುದು ಟ್ರೋಫಿಗಳು ಮಾತ್ರ. ಭಾರತೀಯ ಕ್ರಿಕೆಟ್ನಲ್ಲಿ ತುಂಬಾ ಕಾಲದಿಂದ ನಾವು ವೈಯಕ್ತಿಕ ದಾಖಲೆಗಳ ಬಗ್ಗೆಯೇ ಮಾತನಾಡಿದ್ದೇವೆ. ಆದರೆ ನಾನು ಕೋಚ್ ಆಗಿರುವವರೆಗೂ ಮೈಲಿಗಲ್ಲುಗಳ ಚರ್ಚೆಗೆ ಇಲ್ಲಿ ಅವಕಾಶವಿಲ್ಲ," ಎಂದು ಅವರು ಕಟ್ಟುನಿಟ್ಟಾಗಿ ಹೇಳಿದ್ದಾರೆ.