ಕೊನೆಯ ಸೂಪರ್-8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 97 ರನ್ಗಳ ಅದ್ಭುತ ಇನ್ನಿಂಗ್ಸ್ ನೀಡಿದ ಸಂಜು, ತಂಡವನ್ನು ಸೆಮೀಫೈನಲ್ಗೆ ಕೊಂಡೊಯ್ಯುವಲ್ಲಿ ದೊಡ್ಡ ಪಾತ್ರ ವಹಿಸಿದರು. ಬಹಳ ಕೂಲ್ ಆಗಿ ತಮ್ಮ ಇನ್ನಿಂಗ್ಸ್ ಆಡಿದ ಸ್ಯಾಮ್ಸನ್, ಆಂಗ್ಲರ ಎದುರು ಕೂಡ ಅಷ್ಟೇ ಕೂಲ್ ಅಂಡ್ ಸ್ಮಾರ್ಟ್ ಆಗಿ ಬ್ಯಾಟಿಂಗ್ ಮಾಡಿದ್ದು ವಿಶೇಷ. ಈ ನಿಟ್ಟಿನಲ್ಲಿ ತಮ್ಮ ಪ್ರದರ್ಶನ ಹಾಗೂ ನೆಗೆಟಿವ್ ವರದಿಗಳ ಬಗ್ಗೆ ಮೌನಮುರಿದ ಸ್ಯಾಮ್ಸನ್, ಕಳೆದ ಒಂದಷ್ಟು ವರ್ಷಗಳಿಂದ ನನ್ನ ದೇಶಕ್ಕೆ ಇಂತಹ ಕೊಡುಗೆ ಕೊಡಬೇಕು ಎಂದು ತುಂಬ ಶ್ರಮಿಸುತ್ತಿದ್ದೆ ಎಂದಿದ್ದಾರೆ.