37 ವರ್ಷಗಳ ಹಿಂದಿನ ದಾಖಲೆ ಮುರಿದ ಹಿಟ್​ಮ್ಯಾನ್​! ಭಾರತ ಪರ ಏಕದಿನ ಆಡಿದ ಅತ್ಯಂತ ಹಿರಿಯ ರೋಹಿತ್​

ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮ
ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮ
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಕ್ಯಾಪ್ಟನ್​ ರೋಹಿತ್ ಶರ್ಮ ಹೆಸರಿಗೆ ಮತ್ತೊಂದು ಐತಿಹಾಸಿಕ ದಾಖಲೆ
  • ಏಕದಿನ ಪಂದ್ಯವಾಡಿದ ಅತ್ಯಂತ ಹಿರಿಯ ಆಟಗಾರ ಪಟ್ಟ
  • ಹಿರಿಯ ಆಟಗಾರನ ದಾಖಲೆ ಮುರಿದ ರೋಹಿತ್ ಶರ್ಮ
ಹಿಮಾಚಲ ಪ್ರದೇಶ: ಕ್ರಿಕೆಟ್​ ದಿಗ್ಗಜ, ಮಾಜಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದ್ದು, ಭಾರತ ಪರ ಏಕದಿನ ಕ್ರಿಕೆಟ್​ ಆಡುತ್ತಿರುವ ಅತ್ಯಂತ ಹಿರಿಯ ಆಟಗಾರ ಎಂಬ ರೆಕಾರ್ಡ್​ಗೆ ಸಾಕ್ಷಿಯಾಗಿದ್ದಾರೆ.
ಮಳೆಯಿಂದ 25 ಓವರ್​ಗೆ ಇಳಿದ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದ ರೋಹಿತ್​ ಶರ್ಮ, ರನ್​ಔಟ್​ ಆಗಿ ಪೆವಿಲಿಯನ್​ ಸೇರಿದರು. ಇದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದೇ ಆದರೂ ರೋಹಿತ್​ ಹೆಸರಿಗೆ ಸೇರಿದ ಮತ್ತೊಂದು ಐತಿಹಾಸಿಕ ದಾಖಲೆ ಖುಷಿ ತಂದಿದೆ. ಈ ಹಿಂದೆ ಇದೇ ದಾಖಲೆಯನ್ನು ಹೊಂದಿದ್ದ ಹಿರಿಯ ಆಟಗಾರನ ರೆಕಾರ್ಡ್​ ಈಗ ರೋಹಿತ್ ಹಿಂದಿಕ್ಕಿದ್ದಾರೆ.
39 ವರ್ಷ 75 ದಿನಗಳಲ್ಲಿ ರೋಹಿತ್, ಭಾರತದ ಮಾಜಿ ಆಲ್‌ರೌಂಡರ್ ಮೊಹಿಂದರ್ ಅಮರ್‌ನಾಥ್ ಅವರ ದೀರ್ಘಕಾಲದ ದಾಖಲೆಯನ್ನು ಮುರಿದಿದ್ದಾರೆ. 1989ರಲ್ಲಿ ಟೀಮ್ ಇಂಡಿಯಾ ಪರ ತಮ್ಮ ಕೊನೆಯ ಏಕದಿನ ಪಂದ್ಯ ಆಡಿದಾಗ ಮೊಹಿಂದರ್​ ಅವರ ವಯಸ್ಸು 39 ವರ್ಷ 36 ದಿನಗಳು. ಆದರೀಗ, ಹಿಟ್​ಮ್ಯಾನ್​ ಹಿರಿಯ ಕ್ರಿಕೆಟಿಗನ ದಾಖಲೆಯನ್ನು ಸರಿಗಟ್ಟಿದ್ದು, ಹೊಸ ಮೈಲಿಗಲ್ಲು ತಲುಪಿದ್ದಾರೆ.
ಆದಾಗ್ಯೂ, ರೋಹಿತ್ ಏಕದಿನ ಪಂದ್ಯವಾಡಿದ ಮೊದಲ ಅತ್ಯಂತ ಹಿರಿಯ ಭಾರತೀಯ ಆಟಗಾರ ಅಲ್ಲ! ಅಸಲಿಗೆ, ಈ ದಾಖಲೆ ಭಾರತದ ಮಾಜಿ ಮಹಿಳಾ ವೇಗಿ ಜೂಲನ್ ಗೋಸ್ವಾಮಿ ಅವರ ಹೆಸರಿನಲ್ಲಿದೆ ಎಂಬುದು ಇಲ್ಲಿ ಗಮನಾರ್ಹ. 2022ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಜೂಲನ್​ ಆಡಿದಾಗ ಅವರಿಗೆ 39 ವರ್ಷ ಮತ್ತು 303 ದಿನಗಳು. ವಿಶೇಷ ಎಂದರೆ, ಇಲ್ಲಿಯವರೆಗೆ ಯಾವುದೇ ಭಾರತೀಯ ಕ್ರಿಕೆಟಿಗ 40 ವರ್ಷ ವಯಸ್ಸು ಮೀರಿ ಏಕದಿನ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿಲ್ಲ. ಅದೇ 2027ರಲ್ಲಿ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಪರ ರೋಹಿತ್ ಆಡಿದರೆ, ಈ ದಾಖಲೆ ಅವರ ಮುಡಿಗೇರುವುದು ಖಚಿತ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net