ಕೆಕೆಆರ್ ತಂಡ ಎಡಗೈ ವೇಗದ ಬೌಲಿಂಗ್ ಆಯ್ಕೆಯ ಯೋಚಿಸುವುದಾದರೆ ಫಜಲ್ ಹಕ್ ಫಾರೂಕಿ ಉತ್ತಮ ಆಯ್ಕೆ. 2026 ರ ಟಿ 20 ವಿಶ್ವಕಪ್‌ಗಾಗಿ ಅಫ್ಘಾನಿಸ್ತಾನ ತಂಡದಲ್ಲಿ ಸ್ಥಾನ ಪಡೆದಿರುವ ಫಾರೂಕಿ, ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದು, 12 ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇಲ್ಲಿಯವರೆಗೆ 51 ಟಿ20 ಐಗಳಲ್ಲಿ 63 ವಿಕೆಟ್‌ಗಳನ್ನು ಕಬಳಿಸಿದ್ದು, ಇತ್ತೀಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ ಮಾರಾಟವಾಗಲಿಲ್ಲ.