ಬೆಂಗಳೂರು: ಇತ್ತೀಚಿನ ಕಾಲಮಾನದಲ್ಲಿ ಎಲ್ಲರೂ ಆನ್ಲೈನ್ ಪಾವತಿಯನ್ನೇ ಹೆಚ್ಚು ಬಳಕೆ ಮಾಡುವುದು. ಒಂದು ರೂಪಾಯಿಗೆ ಖರೀದಿಸುವ ಚಾಕೋಲೇಟ್ನಿಂದ ಹಿಡಿದು, ಹತ್ತು, ಹದಿನೈದು ಸಾವಿರದವರೆಗೂ ಆನ್ಲೈನ್ ವಹಿವಾಟನ್ನೇ ನೆಚ್ಚಿಕೊಂಡಿದ್ದೇವೆ. ಕೆಲವೊಮ್ಮೆ ತಿಂಗಳ ಅಂತ್ಯದಲ್ಲಿ ಹಣ ಖಾಲಿಯಾಗಿ ಸ್ನೇಹಿತರು, ಸಂಬಂಧಿಕರ ಬಳಿ ಸಾಲ ಕೇಳಲು ಹಿಂದೇಟು ಹಾಕುತ್ತೇವೆ. ಅಂತಹ ಇಂಟ್ರೋವರ್ಟ್ ಪರ್ಸನ್ಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಪ್ರಮುಖ ಡಿಜಿಟಲ್ ಪಾವತಿ ಸಂಸ್ಥೆ 'ಭಾರತ್ಪೇ', ಯೆಸ್ ಬ್ಯಾಂಕ್ ಸಹಯೋಗದೊಂದಿಗೆ 'ಭಾರತ್ಪೇ ಫ್ಲೆಕ್ಸ್' ಎಂಬ ವಿನೂತನ ಸೇವೆಯನ್ನು ಆರಂಭಿಸಿದೆ.