ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ಮತ್ತು ಟೀಸರ್ ನೋಡುವುದಾದರೆ, ಸಿಗ್ಮಾ ಒಂದು ಪಕ್ಕಾ ಆ್ಯಕ್ಷನ್, ಕಾಮಿಡಿ ಮತ್ತು ಡ್ರಾಮಾ ಒಳಗೊಂಡಿರುವ ಕ್ರೈಮ್ ಥ್ರಿಲ್ಲರ್ ಸಿನಿಮಾ ಎಂಬುದು ಗೊತ್ತಾಗುತ್ತದೆ. ಸಿನಿಮಾದಲ್ಲಿ ವರ್ಸಟೈಲ್ ನಟ ಸಂದೀಪ್ ಕಿಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿವಾರ್ಯವಾಗಿ ಅಪರಾಧ ಲೋಕದ ಜಾಲದಲ್ಲಿ ಸಿಕ್ಕಿಬೀಳುವ ನಾಯಕ, ಆ ನಂತರ ನಿಧಿ ಹುಡುಕಾಟದಂತಹ (Treasure Hunt) ಕಾರ್ಯಾಚರಣೆಗೆ ಇಳಿಯುವ ರೋಚಕ ಕಥೆ ಇಲ್ಲಿದೆ ಎನ್ನಲಾಗಿದೆ. ಕಳೆದ ವರ್ಷ ರಿಲೀಸ್ ಆಗಿದ್ದ ಸಿನಿಮಾದ ಟೀಸರ್, ಸಸ್ಪೆನ್ಸ್ ಮತ್ತು ಮನರಂಜನೆಯ ಪ್ಯಾಕೇಜ್‌ನಂತೆ ಕಾಣಿಸಿದ್ದು ಸಿನಿಮಾ ಪ್ರೇಮಿಗಳಲ್ಲಿ ಭರವಸೆ ಮೂಡಿಸಿದೆ.