ಇತ್ತೀಚೆಗೆ ನಡೆದ ಪ್ರಶಸ್ತಿ ಸಮಾರಂಭವೊಂದರಲ್ಲಿ ನಟ ಪಾರ್ಥಿಬನ್ ಅವರು ತ್ರಿಶಾ ಅವರ ಫೋಟೋ ನೋಡಿ, "ಈ ಕುಂದವೈಯನ್ನು (ಪೊನ್ನಿಯಿನ್ ಸೆಲ್ವನ್ ಪಾತ್ರ) ಕೆಲವು ದಿನ ಮನೆಯಲ್ಲೇ ಕೂರಿಸಬೇಕು, ಆಚೆ ಬಿಡಬಾರದು" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಎಕ್ಸ್ (X) ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ ತ್ರಿಶಾ, "ಮೈಕ್ರೋಫೋನ್ ಸಿಕ್ಕ ತಕ್ಷಣ ಆಡುವ ಮಾತು ಬುದ್ಧಿವಂತಿಕೆಯಿಂದ ಕೂಡಿರುವುದಿಲ್ಲ, ಅದು ನಿಮ್ಮ ಮೂರ್ಖತನವನ್ನು ಎತ್ತಿ ತೋರಿಸುತ್ತದೆ" ಎಂದು ತಿರುಗೇಟು ನೀಡಿದ್ದರು. ನಂತರ ಪಾರ್ಥಿಬನ್ ಕ್ಷಮೆಯಾಚಿಸಿದ್ದಾರೆ.