ಜಮೀಲ್ ಪಾತ್ರ ನಬಿಲ್ ಗೊಬೊಲ್ರಿಂದ ಸ್ಫೂರ್ತಿ ಪಡೆದಿಲ್ಲ ಎಂಬ ವಾದದ ಬಳಿಕ ಇದೀಗ ಮತ್ತೊಂದು ಹೆಸರು ಕೇಳಿಬಂದಿದೆ. ಅದುವೇ ಅಲ್ತಾಫ್ ಹುಸೈನ್. ಹೌದು, ಜಮೀಲ್ ಜಮಾಲಿ ಪಾತ್ರ ಪಾಕಿಸ್ತಾನದ ಮತ್ತೊಬ್ಬ ರಾಜಕಾರಣಿ ಅಲ್ತಾಫ್ ಹುಸೈನ್ ಜತೆ ತಳುಕು ಹಾಕಿಕೊಂಡಿದೆ. ಅಂದಹಾಗೆ, ಈ ಹುಸೈನ್ ಬೇರೆ ಯಾರೂ ಅಲ್ಲ ನಬಿಲ್ ಗೊಬೊಲ್ ಅವರ ಪಕ್ಷಕ್ಕೆ ಸೇರಿದವರು. ಹೇಳಬೇಕೆಂದರೆ, ಮುತ್ತಹಿದಾ ಕ್ವಾಮಿ ಮೂವ್ಮೆಂಟ್ ( MQM ) ಪಕ್ಷದ ಸಂಸ್ಥಾಪಕರೇ ಈ ಹುಸೈನ್. ಸದ್ಯ ಪಾಕಿಸ್ತಾನದಿಂದ ಗಡಿಪಾರಾಗಿರುವ ಹುಸೈನ್, ಯುನೈಟೆಡ್ ಕಿಂಗ್ಡಮ್ನಲ್ಲಿ ನೆಲೆಸಿದ್ದಾರೆ.