'ಮಹಾರಾಣಿ ಕುಂದವೈ' ಎಂದು ತ್ರಿಷಾಗೆ ಜೈಕಾರ ಹಾಕಿದ್ದ ವಿಜಯ್: ವಿಚ್ಛೇದನ ವದಂತಿಯ ನಡುವೆ ಮತ್ತೆ ಸದ್ದು ಮಾಡುತ್ತಿದೆ ಹಳೇ ವಿಡಿಯೋ! Vijay About Trisha

ಲಿಯೋ ಸಕ್ಸ್​ಸ್​ ಮೀಟ್​ನಲ್ಲಿ ವಿಜಯ್​ ಮತ್ತು ತ್ರಿಷಾ ಕೃಷ್ಣನ್​
ಲಿಯೋ ಸಕ್ಸ್​ಸ್​ ಮೀಟ್​ನಲ್ಲಿ ವಿಜಯ್​ ಮತ್ತು ತ್ರಿಷಾ ಕೃಷ್ಣನ್​
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನಲ್ಲಿ ಸಖತ್​ ಸುದ್ದಿ ಮಾಡುತ್ತಿರುವ ದಳಪತಿ ಡಿವೋರ್ಸ್​
  • 25 ವರ್ಷಗಳ ದಾಂಪತ್ಯದಿಂದ ಮುಕ್ತಿ ಬೇಡಿದ ಪತ್ನಿ ಸಂಗೀತಾ
  • ಲಿಯೋ ಸಕ್ಸ್​ಸ್​ ಮೀಟ್​ನಲ್ಲಿ ನಟಿ ತ್ರಿಷಾಗೆ ರಾಣಿ ಎಂದು ಹೊಗಳಿದ್ದ ವಿಜಯ್​
ತಮಿಳನಾಡು: ಸದ್ಯ ತಮಿಳುನಾಡಿನಲ್ಲಿ ಮುಂಬರುವ ಚುನಾವಣೆಗಿಂತ ದಳಪತಿ ವಿಜಯ್​ ಅವರ ವಿಚ್ಛೇಧನದ ವಿಚಾರವೇ ಭಾರಿ ಸದ್ದು ಮಾಡುತ್ತಿದೆ. ವಿಜಯ್​ ಪತ್ನಿ ಸಂಗೀತಾ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ದಿನದಿಂದ ವಿಜಯ್​ ಮತ್ತು ನಟಿ ತ್ರಿಷಾ (Vijay About Trisha) ನಡುವಿನ ಸಂಬಂಧದ ಕುರಿತು ಚರ್ಚೆಗೆ ವೇದಿಕೆ ನಿರ್ಮಿಸಿದಂತಾಗಿದೆ.

ತ್ರಿಷಾಳನ್ನು ರಾಣಿ ಎಂದು ಕರೆದಿದ್ದ ವಿಜಯ್​!

ವಿಜಯ್​ ವಿಚ್ಛೇಧನದ ಕುರಿತು ಮಾಹಿತಿ ಹೊರ ಬೀಳುತ್ತಿದ್ದಂತೆ, ಈ ಹಿಂದೆ ನಟ ವಿಜಯ್​ ಮತ್ತು ನಟಿ ತ್ರಿಷಾ ನಡುವೆ ನಡೆದಿದ್ದ ಘಟನೆಗಳು ಮುನ್ನಲೆಗೆ ಬರುತ್ತಿವೆ. ಇಂತಹದ್ದೆ ಒಂದು ಘಟನೆ, ವಿಜಯ್​ ಹಾಗೂ ತ್ರಿಷಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಲಿಯೋ(LEO) ಸಿನಿಮಾದ ಸಕ್ಸ್​ಸ್​ ಮೀಟ್​ನಲ್ಲಿ ವಿಜಯ್​, ತ್ರಿಷಾ ಕುರಿತು ನೀಡಿದ್ದ ಹೇಳಿಕೆ ಈಗ ಸಖತ್​ ವೈರಲ್​ ಆಗುತ್ತಿದೆ.
ಲಿಯೋ ಸಿನಿಮಾದ ಬಗ್ಗೆ ಮಾತನಾಡುತ್ತಾ ವಿಜಯ್​, ಇಪ್ಪತ್ತು ವರ್ಷದ ಹುಡುಗಿಯೊಬ್ಬಳು ಖ್ಯಾನ ನಟಿ, ಯಶಸ್ವಿ ನಟಿ ಎನ್ನಿಸಿಕೊಳ್ಳುವುದು ಇಂದಿಗೆ ದೊಡ್ಡ ಮಾತಲ್ಲ. ಆದರೆ ಒಬ್ಬ ನಟಿ ಸತತ ಇಪ್ಪತ್ತು ವರ್ಷಗಳಿಂದ ಅದೇ ಎಸರ್ಜಿ ಮತ್ತು ಸೌಂದರ್ಯದೊಂದಿಗೆ ಯಶಸ್ವಿ ನಟಿ ಎನ್ನಿಸಿಕೊಳ್ಳುವುದು ಸಾಧನೆಯೇ ಸರಿ.
ನಾನು ಈ ಮಾತನ್ನು ಯಾರಿಗೆ ಹೇಳುತ್ತಿದ್ದೆನೆ ಎನ್ನುವುದು ನಿಮಗೆಲ್ಲಾ ಗೊತ್ತು ಎಂದು ನನಗೂ ಗೊತ್ತು. ನಿವೆಲ್ಲರು ನಿಮ್ಮ ಕೈಯನ್ನು ಸಾಮಾನ್ಯ ಜನರಂತೆ ಸನ್ನೆ ಮಾಡಿದರೆ, ಆಕೆ ರಾಣಿಯಂತೆ ಕೈ ಸನ್ನೆ ಮಾಡುತ್ತಿದ್ದಾಳೆ. ಅವಳು ಬೇರೆ ಯಾರು ಅಲ್ಲ ಮಹಾರಾಣಿ ಕುಂದವೈ (ತ್ರಿಷಾ ಅಭಿನಯಿಸಿದ್ದ ಪಾತ್ರ) ಎಂದು ಹೇಳಿದ್ದ ವಿಡಿಯೋ ಈಗ ಫುಲ್​ ವೈರಲ್​ ಆಗುತ್ತಿದೆ.

25 ವರ್ಷಗಳ ದಾಂಪತ್ಯದಲ್ಲಿ ಬಿರುಕು

ವಿಜಯ್ ಮತ್ತು ಸಂಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಮಾರು 25 ವರ್ಷ ಕಳೆದಿದೆ. ಜುಲೈ 1998ರಲ್ಲಿ ರಿಜಿಸ್ಟರ್ ಆಗಿ, 1999ರಲ್ಲಿ ಚೆನ್ನೈನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದ ಈ ಜೋಡಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಆದರೆ, ಈಗ ಸಂಗೀತಾ ಅವರು ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ಗಂಭೀರ ಆರೋಪಗಳಿವೆ. 2021 ರಿಂದ ವಿಜಯ್ ಭಾವನಾತ್ಮಕವಾಗಿ ದೂರವಾಗಿದ್ದಾರೆ ಮತ್ತು ವೈವಾಹಿಕ ಜೀವನದಲ್ಲಿ ಅಗೌರವ ತೋರಿಸುತ್ತಿದ್ದಾರೆ ಎಂಬುದು ಸಂಗೀತಾ ಅವರ ಆರೋಪ. ಏಪ್ರಿಲ್ 20, 2026 ಕ್ಕೆ ಈ ಪ್ರಕರಣದ ವಿಚಾರಣೆ ನಡೆಯಲಿದೆ.

ಕಾರಿನಲ್ಲಿ ಒಟ್ಟಿಗೆ ಬಂದಿದ್ದೇ ವಿವಾದ

ಇತ್ತೀಚೆಗೆ ನಿರ್ಮಾಪಕ ಕಲ್ಪತಿ ಸುರೇಶ್ ಅವರ ಮಗನ ವಿವಾಹ ಆರತಕ್ಷತೆಯಲ್ಲಿ ವಿಜಯ್ ಮತ್ತು ತ್ರಿಷಾ ಒಂದೇ ಕಾರಿನಲ್ಲಿ ಬಂದು, ವೇದಿಕೆಯ ಮೇಲೆ ಒಟ್ಟಿಗೆ ಪೋಸ್ ನೀಡಿದ್ದು, ಇವರಿಬ್ಬರ ಸಂಬಂಧಕ್ಕೆ ಪುಷ್ಟಿ ನೀಡಿದಂತಾಗಿದೆ. ಇದು ಸಂಗೀತಾ ಅವರ ಕೋಪಕ್ಕೆ ಕಾರಣವಾಗಿದ್ದು, ಈ ಸಂಬಂಧ ತಮ್ಮ ಮಕ್ಕಳಿಗೆ ಮುಜುಗರ ತರುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಒಟ್ಟಿನಲ್ಲಿ, ವಿಜಯ್ ಅವರ ವೈಯಕ್ತಿಕ ಜೀವನ ಇದೀಗ ಕವಲು ದಾರಿಯಲ್ಲಿದೆ. ಕೋರ್ಟ್ ವಿಚಾರಣೆ ಏಪ್ರಿಲ್‌ಗೆ ಮುಂದೂಡಲ್ಪಟ್ಟಿದ್ದರೂ, ಸಾರ್ವಜನಿಕವಾಗಿ ಈ ಚರ್ಚೆ ಮಾತ್ರ ತಣ್ಣಗಾಗುವ ಲಕ್ಷಣಗಳೇ ಇಲ್ಲ. ತಾರಾ ಜೋಡಿಯ ಈ ವೈಯಕ್ತಿಕ ಸಂಘರ್ಷ ಅಂತಿಮವಾಗಿ ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net