ಈ ತಿಂಗಳು, ಮುಂದಿನ ತಿಂಗಳಲ್ಲಿ ವಿಜಯ್ ಕೊನೆ ಸಿನಿಮಾ ತೆರೆಗೆ ಬರಬಹುದು ಎಂದು ಸಿನಿಪ್ರಿಯರು ಮತ್ತು ದಳಪತಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಚಿತ್ರತಂಡ ಮಾತ್ರ ಇಲ್ಲಿಯವರೆಗೆ ಯಾವುದೇ ಸ್ಪಷ್ಟ ಮಾಹಿತಿಯನ್ನೂ ಹಂಚಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣ, ಸೆನ್ಸಾರ್ ಮಂಡಳಿ ಚಿತ್ರತಂಡಕ್ಕೆ ನೀಡದ ರಿಲೀಸ್ ಭಾಗ್ಯ. ಸಿಬಿಎಫ್ಸಿ ನಡೆಯಿಂದ ಕುಗ್ಗಿರುವ 'ಜನ ನಾಯಗನ್' ತಯಾರಕರು, ಬ್ಯಾಕ್ ಟು ಬ್ಯಾಕ್ ರಿಲೀಸ್ ಡೇಟ್ಗಳನ್ನು ಬದಲಿಸಿದ್ದರು. ಆದರೀಗ, ಏಪ್ರಿಲ್ನಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ ಎನ್ನುವ ಮಾತು ಸಂಪೂರ್ಣ ಬದಲಾಗಿದೆ.