ಇದು ಸೌತ್ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ.....ನಟಿಯರಿಗೆ ತಮ್ಮ ಮೇಲೆ ಹಿಡಿತವಿರಬೇಕು: ಪೆದ್ದಿಯಲ್ಲಿ ಜಾನ್ವಿ ಅಂಗ ಪ್ರದರ್ಶನಕ್ಕೆ ನಿತ್ಯಾ ಮೆನನ್ ಗರಂ! Nithya Menen on Janhvi Kapoor
ದಕ್ಷಿಣ ಚಿತ್ರರಂಗದ ಪರ ನಿಂತ ನಿತ್ಯಾ ಮೆನನ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
'ಪೆದ್ದಿ' ಸಿನಿಮಾದಲ್ಲಿ ಜಾನ್ವಿ ಕಪೂರ್ ಅಂಗಪ್ರದರ್ಶನ ವಿವಾದ
ದಕ್ಷಿಣ ಚಿತ್ರರಂಗದ ಪರ ನಿಂತ ನಿತ್ಯಾ ಮೆನನ್
ನಟಿಯರಿಗೆ ತಮ್ಮ ಮೇಲೆ ಹಿಡಿತವಿರಬೇಕು: ನಟಿ
ಸಿನಿಮಾ: ತೆಲಗು ಚಿತ್ರರಂಗದ ಸೂಪರ್ ಸ್ಟಾರ್ ರಾಮ್ ಚರಣ್, ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಟನೆಯ ಹಾಗೂ ಬುಚ್ಚಿ ಬಾಬು ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಪೆದ್ದಿ ಬಿಡುಗಡೆ ಕಂಡಿದೆ.
ತೆರೆಕಂಡ ದಿನದಿಂದ ಜಾನ್ವಿ ಕಪೂರ್ಳನ್ನು ಕೇವಲ ದೇಹ ಸೌಂದರ್ಯ ಪ್ರದರ್ಶಕಿ ರೀತಿ ಚಿತ್ರಿಸಿದ ಕಾರಣ ಸಿನಿ ವಿಮರ್ಶಕರ ಕೆಂಗಣ್ಣಿಗೆ ಚಿತ್ರ ಗುರಿಯಾಗಿದೆ. ಈಗ ಈ ವಿವಾದಕ್ಕೆ ದಕ್ಷಿಣ ಭಾರತದ ಹಾಗೂ ಬಹುಭಾಷಾ ನಟಿ ನಿತ್ಯಾ ಮೆನನ್ (Nithya Menen on Janhvi Kapoor) ತಮ್ಮ ರಿಯಾಕ್ಷನ್ ನೀಡಿದ್ದಾರೆ.
ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್ಳನ್ನು ಕೇವಲ ಲೈಂಗಿಕ, ಶಾರೀರಿಕ ಸೌಂದರ್ಯ ಪ್ರದರ್ಶಿಸಲು ಬಳಸಿಕೊಂಡಿದ್ದಕ್ಕೆ, ಕೆಲ ವಿಮರ್ಶಕರು, ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಣ್ಣನ್ನು ಈ ರೀತಿ ಕೀಳಾದಿ ತೋರಿಸುತ್ತಾರೆಂದು ಹೇಳಿದ್ದರು.
ಈ ಮಾತಿಗೆ ಕೌಂಟರ್ ಕೊಟ್ಟಿರುವ ನಿತ್ಯಾ ಮೆನನ್, ಈ ಸಂಸ್ಕೃತಿ ಕೇವಲ ದಕ್ಷಿಣದ ಸಿನಿಮಾಗಳಿಗೆ ಸೀಮಿತವಾಗಿದೆ ಎನ್ನುವುದನ್ನು ನಾನು ಖಂಡಿತವಾಗಿ ಒಪ್ಪುವುದಿಲ್ಲ. ಇದು ಬಹುತೇಕ ಎಲ್ಲಾ ಸಿನಿಮಾ ರಂಗದಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಸಿನಿಮಾಗಳಲ್ಲಿ ಮಿರ್ಚ್-ಮಸಾಲಾ ಇದ್ದರೆ ಮಾತ್ರ ಸಿನಿಮಾ ಕಮರ್ಷಿಯಲ್ ಸಕ್ಸಸ್ ಕಾಣುತ್ತದೆ ಎಂಬ ಕಾರಣಕ್ಕಾಗಿ ಬಹುತೇಕ ಎಲ್ಲಾ ಸಿನಿಮಾಗಳು ಒಂದೇ ದಾರಿ ಹಿಡಿದು ಬಿಟ್ಟಿವೆ. ಮತ್ತು ಜನ ಕೂಡ ಇದನ್ನೇ ಇಷ್ಟ ಪಡುತ್ತಿದ್ದಾರೆ, ಆದರೆ ನಮಗೆ ನಮ್ಮ ಮೇಲೆ ಹಿಡಿತವಿರಬೇಕು ಎಂದು ನಟಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಈ ರೀತಿಯ ಸಿನಿಮಾಗಳು ಅಥವಾ ಸಿನಿಮಾದಲ್ಲಿ ತಮ್ಮ ಪಾತ್ರ ಯಅವ ರೀತಿ ಇರುತ್ತದೆ ಎಂದು ಎಲ್ಲಾ ನಟ-ನಟಿಯರಿಗೆ ತಿಳಿದಿರುತ್ತದೆ. ಹೀಗಾಗಿ ಸಿನಿಮಾದಲ್ಲಿ ನಟಿಸಬೇಕೆ? ಬೇಡವೇ? ಅಥವಾ ಈ ಪಾತ್ರದಿಂದ ವೈಯಕ್ತಿಕ ಹಾನಿಯನ್ನು ಹೇಗೆ ತಪ್ಪಿಸಿಕೊಳ್ಳಬೇಕೆಂದು ಎಲ್ಲರಿಗೆ ತಿಳಿದಿರುತ್ತದೆ ಎಂದು ಮೆನನ್ ಹೇಳಿದ್ದಾರೆ.
ನಾನು ಕೆಲವೊಂದು ದೃಶ್ಯಗಳಲ್ಲಿ ನಟಿಸುವುದಿಲ್ಲ!
ನಾನು ಸಿನಿಮಾ ರಂಗಕ್ಕೆ ಕಾಲಿಟ್ಟ ದಿನದಿಂದ ಕೆಲವೊಂದು ಸನ್ನಿವೇಶಗಳನ್ನು, ಪಾತ್ರಗಳನ್ನು ಮಾಡುವುದಿಲ್ಲ ಎಂದು ನಿರ್ಧರಿಸಿದ್ದೇನೆ. ಹೀಗಾಗಿ ಯಾವ ಪಾತ್ರವನ್ನು ನಿರ್ವಹಿಸಲು ನನಗೆ ಅಸುಖಕರ (Uncomfortable) ಎನ್ನಿಸುತ್ತದೆಯೋ ಆ ಪಾತ್ರವನ್ನು ನಾನು ಮಾಡಿಲ್ಲ, ಮುಂದು ಮಾಡುವುದಿಲ್ಲ ಎಂದು ನಿತ್ಯಾ ಮೆನನ್ ಸ್ಪಷ್ಟ ಪಡಿಸಿದ್ದಾರೆ.
ನೀವು ನಟಿಯರನ್ನು ಬಯ್ಯಬೇಡಿ, ಈ ರೀತಿ ಮಾಡಿದರೆ ಮಾತ್ರ ಸಿನಿಮಾ ಮಾರಾಟವಾಗುತ್ತೆ ಎಂದು ಭಾವಿಸುವ ನಿರ್ಮಾಪಕರನ್ನು ಮತ್ತು ವ್ಯವಸ್ಥೆ ಮೇಲೆ ಆಕ್ರೋಶ ಹೊರಹಾಕಿ. ನಟರು ತಮಗೆ ದೊರೆಯುವ ಪಾತ್ರವನ್ನು, ಅವಕಾಶವನ್ನು ಬಳಸಿಕೊಳ್ಳುತ್ತಾರೆ, ದೊಡ್ಡ ಸಿನಿಮಾದ ಭಾಗವಾಗಿ ವಿಶಾಲ ಪ್ರೇಕ್ಷಕರನ್ನು ತಲುಪುವುದು ಎಲ್ಲಾ ನಟ/ನಟಿಯರ ಆಸೆಯಾಗಿರುತ್ತದೆ.
ಸಿನಿಮಾದಲ್ಲಿ ಮಹಿಳೆಯ ಪಾತ್ರ ಕೆಳ ಮಟ್ಟದಲ್ಲಿ ಮೂಡಿಬಂದಿದೆ ಎಂದರೆ, ಅಲ್ಲಿ ನಟಿಯ ತಪ್ಪಿರುವುದಿಲ್ಲ, ಬದಲಾಗಿ ಸ್ಕ್ರಿಪ್ಟ್ ಬರವಣಿಗೆ, ನಿರ್ದೇಶದನ ವೈಫಲ್ಯ ಎಂದು ಹೇಳಬೇಕಾಗುತ್ತದೆ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಆಶಿಕಾ ರಂಗನಾಥ್ ಬರೆದುಕೊಂಡಿದ್ದಾರೆ, (ಏಜನ್ಸೀಸ್).