ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ವಿಜಯ್​ ಪತ್ನಿ: ಇಳಯ ದಳಪತಿ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ್ರಾ ಆ ನಟಿ? Thalapathy Vijay

ಪತ್ನಿ ಸಂಗೀತಾ ಜೊತೆ ದಳಪತಿ ವಿಜಯ್​
ಪತ್ನಿ ಸಂಗೀತಾ ಜೊತೆ ದಳಪತಿ ವಿಜಯ್​
Published on

ಪ್ರಮುಖ ಮುಖ್ಯಾಂಶಗಳು

  • ದಳಪತಿ ವಿಜಯ್​ಗೆ ವಿಚ್ಛೇದನ ನೀಡಲು ಮುಂದಾದ ಪತ್ನಿ ಸಂಗೀತಾ
  • 27 ವರ್ಷಗಳ ದಾಂಪತ್ಯ ಜೀವನಕ್ಕೆ ಬೀಳಲಿದೆಯಾ ಪೂರ್ಣವಿರಾಮ?
  • ಆ ನಟಿ ಸಂಪರ್ಕದಿಂದಲೇ ಈ ಪರಿಸ್ಥಿತಿ ಎದುರಾಗಿದ್ದು ಎಂದಿದ್ದೆಕೆ ನೆಟ್ಟಿಗರು?
  • ಅಷ್ಟಕ್ಕೂ ಆ ನಟಿಯಾದರೂ ಯಾರು ಗೊತ್ತೇ??
ತಮಿಳುನಾಡು: ತಮಿಳು ಚಿತ್ರರಂಗದ ಖ್ಯಾತ ನಟ ಮತ್ತು ತಮಿಳಿಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ (Thalapathy Vijay)​ ಅವರಿಗೆ ಅವರ ಹೆಂಡತಿ ಸಂಗೀತಾ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೇಟ್ಟಿಲೇರಿದ ಸುದ್ದಿ ಸದ್ಯ ಎಲ್ಲಾ ಕಡೆ ವೈರಲ್​ ಆಗುತ್ತಿದೆ.
ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದ ವಿಜಯ್​ಗೆ ಮತ್ತು ಆತನ ಲಕ್ಷಾಂತರ ಅಭಿಮಾನಿಗಳಿಗೆ ಈ ಸುದ್ದಿ ಭರ ಸಿಡಿಲಿನ ಹೊಡೆತವನ್ನು ಕೊಟ್ಟಿದೆ ಎಂದರೆ ತಪ್ಪಾಗದು.
ವಿಜಯ್​ಗೆ ಅವರ ಪತ್ನಿ ಸಂಗೀತಾ ವಿಚ್ಛೇದನ ನೀಡುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ರಾಜಕೀಯ ಮತ್ತು ಸಿನಿಮಾರಂಗದಲ್ಲಿ ಭಾರಿ ಕೋಲಾಹಲ ಉಂಟಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಹ ಭಾರಿ ಚರ್ಚೆ-ವಿಚರ್ಚೆ ನಡೆಯುತ್ತಿದ್ದು, ವಿಜಯ್​ಗೆ, ಸಂಗೀತಾ ವಿಚ್ಛೇದನ ಕೇಳಲು ಕಾರಣವೇನು ಎಂಬುದರ ಕುರಿತು ನಾನಾ ರೀತಿಯ ವದಂತಿಗಳು ಕೇಳಿ ಬರುತ್ತಿವೆ.

ವಿಚ್ಛೇದನಕ್ಕೆ ಆ ನಟಿಯ ಸಂಪರ್ಕವೇ ಕಾರಣ!

ನಟ ವಿಜಯ್​ ಅವರಿಗೆ ಅವರ ಹೆಂಡತಿ ವಿಚ್ಛೇದನ ಕೇಳಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಶುರುವಾದಾಗ ಬಹುತೇಕ ಜನರು.. ವಿಜಯ್​ ಆ ನಟಿ ಹಿಂದೆ ಹೋಗಿಯೇ ಹೀಗೆ ಆಗಿದ್ದು. ಹೇಗೂ ಸಂಗೀತಾಳನ್ನು ಮದುವೆಯಾಗಿದ್ದ, ದಾಂಪತ್ಯ ಜೀವನ ಸಾಂಗವಾಗಿ ನಡೆಯುತ್ತಿತ್ತು. ಸುಖಭರಿತ ಸಂಸಾರ ಎನ್ನಲಿಕ್ಕೆ ಎರಡು ಮಕ್ಕಳನ್ನು ಸಹ ಈ ದಂಪತಿಗಳು ಪಡೆದಿದ್ದರು.
ಇಷ್ಟೆಲ್ಲಾ ಇದ್ದು ವಿಜಯ್​ ಆಕೆ ಆ ನಟಿಯ ಮಾಯಾಜಾಲಕ್ಕೆ ಸಿಲುಕಿಕೊಂಡ, ಅವನಿಗೆ ಆಕೆ ಹಿಂದೆ ಹೋಗುವ ಅಗತ್ಯವಾದರು ಏನಿತ್ತು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಆ ನಟಿಗೂ ವಿಜಯ್​ಗೂ ಏನು ಸಂಬಂಧ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿ ಪ್ರಕಾರ ತಮಿಳು ನಟ ವಿಜಯ್​ ಹಾಗೂ ತಮಿಳು ನಟಿ ತ್ರಿಷಾ ಕೃಷ್ಣನ್​ ಇವರಿಬ್ಬರೂ ಬಹುಕಾಲದಿಂದ ಪರಸ್ಪರರು ಪ್ರೀತಿಯಲ್ಲಿದ್ದಾರೆ ಎಂಬ ವದಂತಿ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ.
ವಿಜಯ್​ ಮೇಲೆ ಅವಳಿಗೆ ಮನಸ್ಸಿರುವ ಕಾರಣಕ್ಕಾಗಿಯೇ ಆಕೆ ನಲವತ್ತು ದಾಟಿದರೂ ಇನ್ನೂ ಮದುವೆಯಾಗಿಲ್ಲ ಎಂಬ ಸುದ್ದಿ ನಿನ್ನೆ ಮೊನ್ನೆಯದಲ್ಲ. ಆದರೆ ಈ ಕುರಿತು ನಟ ವಿಜಯ್​ ಆಗಲಿ ಅಥವಾ ನಟಿ ತ್ರಿಷಾ ಆಗಲಿ ಯಾವತ್ತು ತಮ್ಮ ನಡುವೆ ಯಾವ ರೀತಿಯ ಸಂಬಂಧವಿದೆ ಎಂದು ಎಲ್ಲಿಯೂ ಹೇಳಿಲ್ಲ. ಹಾಗೂ ಹೀಗೆ ಹಬ್ಬತ್ತಿರುವ ವದಂತಿ ಎಲ್ಲಾ ಸುಳ್ಳು ಎನ್ನುವ ಹೇಳಿಕೆ ಸಹ ನೀಡಿಲ್ಲ.

ರಾಜಕೀಯಲ್ಲಿ ಸಹ ತ್ರಿಷಾ ಹೆಸರಿನ ಬಳಕೆ

ನಟ ವಿಜಯ್​ ಹಾಗೂ ನಟಿ ತ್ರಿಷಾ ಅವರ ಸಂಬಂಧದ ವದಂತಿ ಕೇವಲ ಸಿನಿಮಾ ರಂಗಕ್ಕೆ ಸೀಮಿತವಾಗಿರದೆ ರಾಜಕೀಯದಲ್ಲಿ ವಿಜಯ್​ ಅವರನ್ನು ಮಣಿಸಲು ಬಳಸಲಾಗಿದೆ.
ಕೆಲ ದಿನಗಳ ಹಿಂದೆ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್​ ನಾಗೇಂದ್ರನ್​, ವಿಜಯ್​ ರಾಜಕೀಯಕ್ಕೆ ಹೊಸಬ, ಅವನಿಗೆ ರಾಜಕೀಯ ಏನೆಂದು ತಿಳಿದಿಲ್ಲ. ರಾಜಕೀಯ ಏನೆಂದು ತಿಳಿದಕೊಳ್ಳುವ ಮೊದಲು ಆ ನಟಿ ತ್ರಿಷಾ ಮನೆಯಿಂದ ಮೊದಲು ಹೊರಬರಬೇಕು ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿ, ತ್ರಿಷಾ ಅವರ ವಕೀಲರು ಈ ಹೇಳಿಕೆಯನ್ನು ಹೊರ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದ ನಂತರ ನಾಗೇಂದ್ರ ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೆನೆ ಎಂದು ಹೇಳಿದ್ದರು.

27 ವರ್ಷಗಳ ಬಳಿಕ ವಿಚ್ಛೇದನಕ್ಕೆ ಅರ್ಜಿ

ನಟ ವಿಜಯ್​ ಮತ್ತು ಸಂಗೀತಾ ಮದುವೆಯಾಗಿ 27 ವರ್ಷ ಸಂಸಾರವನ್ನು ನಡೆಸಿದ್ದಾರೆ. ಈ ದಂಪತಿಗಳಿಗೆ 25 ವರ್ಷದ ಸಂಜಯ್​ ಎಂಬ ಮಗ ಮತ್ತು 20 ವರ್ಷದ ದಿವ್ಯಾ ಸಾಶಾ ಎಂಬ ಒಬ್ಬ ಮಗಳಿದ್ದಾಳೆ. ಈ ವಿಚ್ಛೇದನದ ಅರ್ಜಿ ಕುರಿತು ಇಲ್ಲಿವರೆಗೆ ವಿಜಯ್​ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಫೆಬ್ರವರಿ 24 ರಂದು ಈ ವಿಚ್ಛೇದನದ ಅರ್ಜಿಯನ್ನು ಸಲ್ಲಿಸಲಾಗಿದ್ದು ಇ ಅರ್ಜಿಯನ್ನು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯವು ಏಪ್ರಿಲ್​ 20 ರಂದು ವಿಚಾರಣೆ ನಡೆಸಲಿದ್ದು, ಆ ದಿನ ನಟ ವಿಜಯ್​ ಖುದ್ದಾಗಿ ಹಾಜರಾಗುವಂತೆ ನ್ಯಾಯಾಲಯ ಅದೇಶಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net