ಬಾದ್‌ಶಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ 'ತಟೀರಿ' ಹಾಡು ರಿಲೀಸ್ ಆದ ಕೆಲವೇ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಆದರೆ, ಹಾಡಿನಲ್ಲಿದ್ದ ದೃಶ್ಯಗಳು ಮಾತ್ರ ಭಾರೀ ವಿವಾದಕ್ಕೆ ಕಾರಣವಾಯಿತು. ಶಾಲಾ ಸಮವಸ್ತ್ರ ಧರಿಸಿದ ಬಾಲಕಿಯರು ಹರಿಯಾಣ ರೋಡ್‌ವೇಸ್ ಬಸ್‌ನಲ್ಲಿ ನೃತ್ಯ ಮಾಡುವುದು, ಆಕ್ಷೇಪಾರ್ಹ ಸನ್ನೆಗಳನ್ನು ಮಾಡುವುದು ಮತ್ತು ಶಾಲೆಗಿಂತ ಮೋಜಿನ ಕಡೆಗೆ ಗಮನ ಹರಿಸುವ ದೃಶ್ಯಗಳು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.