ಯುವಪ್ರತಿಭೆಗಳಿಗೆ ಕಿರುಚಿತ್ರೋತ್ಸವ ವೇದಿಕೆ: ನಟ ನವೀನ್​ ಶಂಕರ್​ ಅಭಿಮತ! Jain University Short Film Festival

ಯುವಪ್ರತಿಭೆಗಳಿಗೆ ಕಿರುಚಿತ್ರೋತ್ಸವ ವೇದಿಕೆ: ನಟ ನವೀನ್​ ಶಂಕರ್​ ಅಭಿಮತ! Jain University Short Film Festival
ಯುವಪ್ರತಿಭೆಗಳಿಗೆ ಕಿರುಚಿತ್ರೋತ್ಸವ ವೇದಿಕೆ: ನಟ ನವೀನ್​ ಶಂಕರ್​ ಅಭಿಮತ! Jain University Short Film Festival
Published on

ಪ್ರಮುಖ ಮುಖ್ಯಾಂಶಗಳು

  • ನಟ ನವೀನ್ ಶಂಕರ್ ಅವರಿಂದ ಜೈನ್ ವಿವಿ ಕಿರುಚಿತ್ರೋತ್ಸವಕ್ಕೆ ಅಧಿಕೃತ ಚಾಲನೆ
  • ದ್ಯಾರ್ಥಿಗಳ ಸೃಜನಶೀಲತೆ ಅನ್ವೇಷಿಸಲು ಮತ್ತು ಚಿತ್ರರಂಗಕ್ಕೆ ಅಣಿಗೊಳಿಸಲು ಇದು ಉತ್ತಮ ವೇದಿಕೆ
  • ಈ ವರ್ಷದ ಚಿತ್ರೋತ್ಸವಕ್ಕೆ ಭಾರತದಾದ್ಯಂತ 90ಕ್ಕೂ ಹೆಚ್ಚು ಕಿರುಚಿತ್ರಗಳ ನೋಂದಣಿ
  • ತ್ರರಂಗದಲ್ಲಿ ಬೆಳೆಯಲು ಕ್ರಿಯಾತ್ಮಕ ಅಂಶಗಳು ಮತ್ತು ಕಾಲೇಜು ಮಟ್ಟದ ಪ್ರಯತ್ನಗಳು ಮುಖ್ಯ ಎಂದು ಗಣ್ಯರ ಅಭಿಮತ
ಬೆಂಗಳೂರು: ಕಿರುಚಿತ್ರೋತ್ಸವಗಳು ( Jain University Short Film Festival ) ವಿದ್ಯಾರ್ಥಿಗಳನ್ನು ಕಾಲೇಜು ಮಟ್ಟದಿಂದಲೇ ಚಿತ್ರರಂಗಕ್ಕೆ ಅಣಿಗೊಳಿಸಲು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಟ ನವೀನ್ ಶಂಕರ್ ಹೇಳಿದ್ದಾರೆ.
ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 'ಜೈನ್ ಯೂನಿವರ್ಸಿಟಿ ಕಿರುಚಿತ್ರೋತ್ಸವ- 2026' ಮೂರನೇ ಆವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನಲ್ಲಿ ಸಣ್ಣ ಪ್ರಯತ್ನವಾಗಿ ಶುರುವಾಗುವ ಕನಸು ಮುಂದೆ ಮಹತ್ತದ ಸಾಧನೆಗೆ ದಾರಿ ಮಾಡಿಕೊಡಬಹುದು. ವಿದ್ಯಾರ್ಥಿಗಳಿಗೆ ತಮ್ಮ ಸೃಜನಶೀಲತೆಯನ್ನು ಅನ್ವೇಷಿಸಲು ಮತ್ತು ತಮ್ಮದೇ ಆದ ಚಿಂತನೆಗಳನ್ನು ಪರದೆಯಲ್ಲಿ ಮೂಡಿಸಲು ಅವಕಾಶ ಸಿಗುತ್ತಿರುವುದು ಸಂತೋಷದ ಸಂಗತಿ. ಕಿರುಚಿತ್ರಗಳು ನಟ, ನಿರ್ದೇಶಕರಿಗೆ ಮಾತ್ರವಲ್ಲ ಆಶಾವಾದವನ್ನು ಇಟ್ಟುಕೊಂಡು ಬರುವ ಚಲನಚಿತ್ರ ನಿರ್ಮಾಪಕರಿಗೆ ಪ್ರಯೋಗ ಮಾಡಲು, ಸಿನಿಮಾದ ವಾಸ್ತವಿಕ ಅನುಭವವನ್ನು ಪಡೆಯಲು ಉತ್ತಮ ವೇದಿಕೆಯಾಗಿವೆ. ಇಂತಹ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ವಿದ್ಯಾರ್ಥಿಗಳನ್ನು ಚಿತ್ರರಂಗದೊಂದಿಗೆ ಸಂಪರ್ಕಿಸಲು ಜೈನ್ ವಿವಿ ಕೈಗೊಂಡಿರುವ ಈ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಂಸ್ಥೆಯ ಉಪಕುಲಪತಿ ಡಾ. ದಿನೇಶ್ ನೀಲಕಂಠ ಮಾತನಾಡಿ, ಉತ್ತಮ ಪ್ರತಿಭೆಗಳು ದೊಡ್ಡ ಸ್ಟುಡಿಯೋಗಳಿಂದ ಅಲ್ಲ, ಕಾಲೇಜುಗಳು, ವಿವಿಗಳಿಂದಲೇ ಬೆಳೆಯುತ್ತವೆ. ನಾವು ಇಂತಹ ವೇದಿಕೆಗಳನ್ನು ನಿರ್ಮಿಸುತ್ತಿದ್ದೇವೆ. ಸಿನಿಮಾದಲ್ಲಿ ಬೆಳೆಯಲು ಕ್ರಿಯಾತ್ಮಕ ಅಂಶಗಳು ತುಂಬ ಅಗತ್ಯವಿದೆ ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಡಾ. ಭಾರ್ಗವಿ ಡಿ. ಹೆಮ್ಮಿಗೆ ಮಾತನಾಡಿ, ಈ ವರ್ಷದ ಚಿತ್ರೋತ್ಸವಕ್ಕೆ ಭಾರತದಾದ್ಯಂತ 90ಕ್ಕೂ ಹೆಚ್ಚು ಕಿರುಚಿತ್ರಗಳು ನೋಂದಣಿಯಾಗಿದೆ. ವಿಜಯ್ ಸೇತುಪತಿ ಪ್ರೊಡಕ್ಷನ್ಸ್, ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರಂತಹವರಿಂದ ಸಲ್ಲಿಕೆಗಳೂ ಬಂದಿವೆ ಎಂದರು. ಉಪ ಡೀನ್ (ಅಕಾಡೆಮಿಕ್ಸ್) ಡಾ. ಎಸ್. ಕಿರಣ್ ಮುಂತಾದವರು ಇದ್ದರು.

ಇಂದಿನ ಕಾಲದಲ್ಲಿ ಎರಡು ಅಥವಾ ಮೂರು ಗಂಟೆ ಕಾಲ ಸಿನಿಮಾ ನೋಡುವ ಅಭ್ಯಾಸ ಕಡಿಮೆಯಾಗುತ್ತಿದೆ. ಕಿರುಚಿತ್ರಗಳು ಈ ಕಲೆಯ ಭವಿಷ್ಯವಾಗಿವೆ. ಇದೀಗ 5-10 ಸೆಕೆಂಡ್ ಬರುವ ರೀಲ್ಸ್‌ಗಳ ಜಗತ್ತಾಗಿಬಿಟ್ಟಿದೆ. ಹೀಗಿರುವಾಗ 'ಶಾರ್ಟ್' ಅನ್ನುವ ಶಬ್ದಕ್ಕೆ ಮಹತ್ವ ಹೆಚ್ಚುತ್ತಿದೆ. ವಿದ್ಯಾರ್ಥಿಗಳ ಚಿಂತನೆಗಳು ಸೃಜನಾತ್ಮಕವಾಗಿರುವುದು ಅಷ್ಟೇ ಮುಖ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net