ಪತಿ ರಾಜ್ ನಿಡಿಮೋರು ಜೊತೆ ಪಿಕಲ್‌ಬಾಲ್ ಮ್ಯಾಚ್‌ನಲ್ಲಿ ಸಮಂತಾ ಮಿಂಚು: ವೈರಲ್ ಆಯ್ತು ನವಜೋಡಿಯ ಕ್ಯೂಟ್ ವಿಡಿಯೋ! Samantha Ruth Prabhu

ಸಮಂತಾ ರುತ್​ ಫ್ರಭು, ರಾಜ್​ ರಾಜ್ ನಿಡಿಮೋರು
ಸಮಂತಾ ರುತ್​ ಫ್ರಭು, ರಾಜ್​ ರಾಜ್ ನಿಡಿಮೋರು
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ವರ್ಷ ಹಸೆಮಣೆ ಏರಿದ್ದ ಸಮಂತಾ ರುತ್​ ಫ್ರಭು
  • ಪತಿ ರಾಜ್​ ರಾಜ್ ನಿಡಿಮೋರು ಜೊತೆಗೆ ಪಿಕಲ್‌ಬಾಲ್ ಮ್ಯಾಚ್‌ ನೋಡಲು ಬಂದ ಸಮಂತಾ
  • ಶ್ವ ಪಿಕಲ್‌ಬಾಲ್ ಲೀಗ್​ನ ಚೆನ್ನೈ ಸೂಪರ್ ಚಾಂಪಿಯನ್ಸ್ ತಂಡದ ಮಾಲೀಕರಾಗಿ ಆಗಮಿಸಿದ್ದ ನವ ಜೋಡಿ
ಮುಂಬೈ: ಸೌತ್ ಬ್ಯೂಟಿ ಸಮಂತಾ ರುತ್ ಪ್ರಭು (Samantha Ruth Prabhu) ಈಗ ವೈವಾಹಿಕ ಜೀವನದ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಅವರ ಜೊತೆ ಹಸೆಮಣೆ ಏರಿದ್ದ ಈ ನಟಿ, ಈಗ ಪತಿಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ 'ವಿಶ್ವ ಪಿಕಲ್‌ಬಾಲ್ ಲೀಗ್' ಪಂದ್ಯದಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

ತಮ್ಮದೇ ತಂಡಕ್ಕೆ ಚಿಯರ್ ಮಾಡಿದ ಸಮಂತಾ!

ಈ ಪಂದ್ಯಾವಳಿಗೆ ಕೇವಲ ವೀಕ್ಷಕಿಯಾಗಿ ಬರದ ಸಮಂತಾ, ಪಿಕಲ್‌ಬಾಲ್ ಲೀಗ್‌ನ 'ಚೆನ್ನೈ ಸೂಪರ್ ಚಾಂಪಿಯನ್ಸ್' ತಂಡದ ಮಾಲೀಕರಾಗಿ ಆಗಮಿಸಿದ್ದರು. ಹೀಗಾಗಿ, ತಮ್ಮ ತಂಡವನ್ನು ಹುರಿದುಂಬಿಸಲು ಪತಿ ರಾಜ್ ನಿಡಿಮೋರು ಅವರೊಂದಿಗೆ ಸ್ಟೇಡಿಯಂಗೆ ಬಂದಿದ್ದ ಸಮಂತಾ, ಬೂದು ಬಣ್ಣದ ಕ್ರಾಪ್ ಟಾಪ್, ಡೆನಿಮ್ ಜಾಕೆಟ್ ಹಾಗೂ ಜೀನ್ಸ್ ಧರಿಸಿ ಸಖತ್ ಸ್ಟೈಲಿಶ್ ಆಗಿ ಮಿಂಚುತ್ತಿದ್ದರೆ. ರಾಜ್ ನಿಡಿಮೋರು ಅವರು ಬೀಜ್ ಬಣ್ಣದ ಜಾಕೆಟ್‌ನಲ್ಲಿ ಕಾಣಿಸಿಕೊಂಡರು.
ಪಂದ್ಯದ ನಡುವೆ ಇಬ್ಬರೂ ತುಂಬಾ ಉತ್ಸಾಹದಿಂದ ಚರ್ಚೆ ನಡೆಸುತ್ತಿರುವ ವಿಡಿಯೋಗಳು ಮತ್ತು ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಇವರನ್ನು ನೋಡಿ ಫ್ಯಾನ್ಸ್ "ಪರ್ಫೆಕ್ಟ್ ಕಪಲ್" ಎಂದು ಕಮೆಂಟ್ ಮಾಡುತ್ತಿದ್ದಾರೆ.

ತಾರೆಗಳಿಂದ ಕಿಕ್ಕಿರಿದ ಕಾರ್ಯಕ್ರಮ

ಈ ಪಿಕಲ್‌ಬಾಲ್ ಲೀಗ್‌ನಲ್ಲಿ ಕೇವಲ ಸಮಂತಾ ಮಾತ್ರವಲ್ಲದೆ, ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್, ರಿತೇಶ್ ದೇಶಮುಖ್ ಮತ್ತು ಜೆನೆಲಿಯಾ ಡಿಸೋಜಾ ಸೇರಿದಂತೆ ಹಲವು ತಾರೆಯರು ಭಾಗವಹಿಸಿ ಕ್ರೀಡೆಯನ್ನು ಆನಂದಿಸಿದರು.

ಶೂಟಿಂಗ್ ಸೆಟ್‌ನಲ್ಲಿ ಶುರುವಾದ ಪ್ರೇಮಕಥೆ!

ಸಮಂತಾ ಮತ್ತು ರಾಜ್ ನಿಡಿಮೋರು ಅವರ ಪರಿಚಯವಾಗಿದ್ದು ಸೂಪರ್ ಹಿಟ್ ವೆಬ್​ ಸರಣಿ 'ದಿ ಫ್ಯಾಮಿಲಿ ಮ್ಯಾನ್ ಸೀಸನ್ 2' ಸೆಟ್‌ನಲ್ಲಿ. ಈ ಸರಣಿಯನ್ನು ರಾಜ್ ಅವರೇ ನಿರ್ದೇಶಿಸಿದ್ದು, ಸಮಂತಾ 'ರಾಜಿ' ಎಂಬ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದರು. ಕೆಲಸದ ನಡುವೆ ಬೆಳೆದ ಇವರ ಸ್ನೇಹ ನಂತರ ಪ್ರೀತಿಗೆ ತಿರುಗಿತ್ತು.

ಬೆಕ್‌ಹ್ಯಾಮ್‌ನಿಂದಲೂ ಬಂದಿತ್ತು ವಿಶ್!

ಕಳೆದ ವರ್ಷ ಡಿಸೆಂಬರ್ 1, 2025 ರಂದು ಆಪ್ತರ ಸಮ್ಮುಖದಲ್ಲಿ ಈ ಜೋಡಿ ಮದುವೆಯಾಗಿದ್ದರು. ಇವರ ಮದುವೆಯ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡಿದಾಗ, ಸಿನಿಮಾ ತಾರೆಯರಾದ ಆಲಿಯಾ ಭಟ್, ಶ್ರದ್ಧಾ ಕಪೂರ್, ತ್ರಿಶಾ ಕೃಷ್ಣನ್ ಮಾತ್ರವಲ್ಲದೆ, ಫುಟ್‌ಬಾಲ್ ದಿಗ್ಗಜ ಡೇವಿಡ್ ಬೆಕ್‌ಹ್ಯಾಮ್ ಕೂಡ ಈ ದಂಪತಿಗೆ ಶುಭ ಹಾರೈಸಿದ್ದು ವಿಶೇಷವಾಗಿತ್ತು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net