

ಪ್ರಮುಖ ಮುಖ್ಯಾಂಶಗಳು
ಈ ದೃಶ್ಯದ ಬಗ್ಗೆ ಅಭಿಮಾನಿಗಳು ಜಾಲತಾಣಗಳಲ್ಲಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ. "ರುಕ್ಮಿಣಿ, ಇದು ಏನ್ರೀ?" ಎಂದು ಒಬ್ಬ ಬಳಕೆದಾರರು ಬರೆದರೆ, "ಇಂತಹ ದೃಶ್ಯಗಳನ್ನು ನಾನು ಹೇಗೆ ಸ್ವೀಕರಿಸಲಿ? ರುಕ್ಮಿಣಿ, ನಿಮ್ಮಿಂದ ನಾನಿದನ್ನು ಖಂಡಿತ ನಿರೀಕ್ಷಿಸಿರಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಇದೆಲ್ಲಾ ಏನು? ಇಂತಹ ಕಳಪೆ ಸ್ಕ್ರಿಪ್ಟ್ ಯಾಕೆ?" ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.
ಈ ಸೀಕ್ವೆನ್ಸ್ನ ಹಿಂದಿನ ಕ್ರಿಯೇಟಿವ್ ಆಯ್ಕೆಯನ್ನು ಕೆಲವು ವೀಕ್ಷಕರು ಪ್ರಶ್ನಿಸಿದರೆ, ಇನ್ನು ಕೆಲವರು ಇದು ನಟಿಗೆ ಅಥವಾ ಅವರು ನಿರ್ವಹಿಸಿದ ಪಾತ್ರಕ್ಕೆ ಸರಿಹೋಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ ರುಕ್ಕು ಅಭಿಮಾನಿಗಳಿಗೆ ಆ ಬೆಡ್ ಸೀನ್ ಇಷ್ಟವಾಗಿಲ್ಲ. ಹೀಗಾಗಿ, ರುಕ್ಕು ಅವರನ್ನು ಜಾಲತಾಣ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ. ಅಂದಹಾಗೆ, ಈ ಚರ್ಚೆಯು ಆನ್ಲೈನ್ನಲ್ಲಿ ಎಲ್ಲ ಗಮನ ಸೆಳೆದಿದ್ದು, ರುಕ್ಕು ಅವರು ತಮ್ಮ ನಟನೆಯ ಹೊರತಾಗಿ ಇತರ ಕಾರಣಗಳಿಂದಲೂ ಸುದ್ದಿಯಾಗುತ್ತಿದ್ದಾರೆ.
ಹೇಗಿದೆ ಟಾಕ್ಸಿಕ್?