'Jailer 2' ಶೂಟಿಂಗ್ ವಿಡಿಯೋ ಲೀಕ್: ಕಿಡಿಗೇಡಿಗಳ ವಿರುದ್ಧ ಸನ್ ಪಿಕ್ಚರ್ಸ್ ತೆಗೆದುಕೊಂಡ ನಿರ್ಧಾರ ಇದು!

Jailer 2
Jailer 2
Published on

ಪ್ರಮುಖ ಮುಖ್ಯಾಂಶಗಳು

  • ಜೈಲರ್ 2 ಚಿತ್ರೀಕರಣದ ಸ್ಥಳದಿಂದ ಸೆರೆಹಿಡಿಯಲಾದ ವಿಡಿಯೋ ತುಣುಕುಗಳು ವೈರಲ್
  • ಶೂಟಿಂಗ್​ ವಿಡಿಯೋ ಹಂಚಿಕೊಳ್ಳುವ ಸೋಶಿಯಲ್​ ಮೀಡಿಯಾ ಖಾತೆಗಳಿಗೆ ತಡೆ
  • ಚಿತ್ರದಲ್ಲಿ ರಜನಿಕಾಂತ್, ಶಿವರಾಜ್‌ಕುಮಾರ್, ಮೋಹನ್‌ಲಾಲ್ ಮತ್ತು ಪವನ್ ಕಲ್ಯಾಣ್ ನಟನೆ
Jailer 2: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪೈರಸಿ(pairasi) ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನನಾಯಗನ್ ಸಿನಿಮಾ ಲೀಕ್ ನಂತರ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ 2 ಸಿನಿಮಾದ ಶೂಟಿಂಗ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ, ಕೂಡಲೇ ಕಾರ್ಯಪ್ರವೃತ್ತರಾದ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ತಮಿಳು ಚಿತ್ರರಂಗದಲ್ಲಿ ಇತ್ತೀಚೆಗೆ ದೊಡ್ಡ ಮಟ್ಟದ ಸಿನಿಮಾಗಳು, ಸಾಕಷ್ಟು ಹಿಟ್​ ಸಿನಿಮಾಗಳನ್ನು ಕೊಟ್ಟ ಸಿನಿ ತಾರೆಯರ ಚಿತ್ರದ ದೃಶ್ಯಗಳು ಲೀಕ್ ಆಗುತ್ತಿರುವುದು ನಿರ್ಮಾಪಕರಿಗೆ ತಲೆನೋವಾಗಿ ಪರಿಣಮಿಸಿದೆ. ಮೊನ್ನೆಯಷ್ಟೇ ದಳಪತಿ ವಿಜಯ್ ಅವರ 'ಜನ ನಾಯಕನ್' ಚಿತ್ರದ ತುಣುಕುಗಳು ಸೋರಿಕೆಯಾದ ಬೆನ್ನಲ್ಲೇ, ಈಗ 'ಜೈಲರ್ 2' ಸರದಿಯಾಗಿದೆ.

ಸನ್​ ಪಿಕ್ಚರ್ಸ್​ ಹೇಳಿದ್ದೇನು?

ಶೂಟಿಂಗ್ ಸೆಟ್‌ನಿಂದ ಲೀಕ್ ಆಗಿರುವ ಈ ವಿಡಿಯೋಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರೂ, ಚಿತ್ರತಂಡಕ್ಕೆ ಆಘಾತ ತಂದಿದೆ. ತಕ್ಷಣವೇ ಕಾರ್ಯಪ್ರವೃತ್ತವಾಗಿರುವ ಸನ್ ಪಿಕ್ಚರ್ಸ್, "ಸೋಷಿಯಲ್ ಮೀಡಿಯಾದಲ್ಲಿ ಜೈಲರ್ 2 ಗೆ ಸಂಬಂಧಿಸಿದ ವಿಡಿಯೋಗಳು ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ಆಂಟಿ-ಪೈರಸಿ ತಂಡವು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಲೀಕ್​ ಆದ ವಿಡಿಯೋ ಹಂಚಿಕೊಳ್ಳುವ ಖಾತೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು," ಎಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.
ಲೀಕ್​ ಆದ ವಿಡಿಯೋಗಳನ್ನು ಮರು ಹಂಚಿಕೆ ಮಾಡಿಕೊಳ್ಳಬೇಡಿ ಎಂದು ಸನ್​ ಪಿಕ್ಚರ್ಸ್​ ಮನವಿ ಮಾಡಿಕೊಂಡಿದೆ. ಅಕಸ್ಮಾತ್​ ಪೋಸ್ಟ್ ಮಾಡಿದರು ಅದರಿಂದ ಮುಂದೆ ಆಗುವ ಪರಿಣಾಮವನ್ನು ನೀವೆ ಭರಿಸಬೇಕು ಎಂದು ಎಚ್ಚರಿಕೆಯನ್ನು ಕೊಟ್ಟಿದೆ.

ಜೈಲರ್​2 ಕತೆ ಏನು?

ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ರಜನಿಕಾಂತ್ ಮತ್ತೆ ತೆರೆ ಮೇಲೆ ಅಬ್ಬರಿಸಲಿದ್ದಾರೆ. ಈ ಬಾರಿ ಚಿತ್ರದಲ್ಲಿ ಶಿವರಾಜ್‌ಕುಮಾರ್, ಮೋಹನ್‌ಲಾಲ್, ಪವನ್ ಕಲ್ಯಾಣ್, ಮಿಥುನ್ ಚಕ್ರವರ್ತಿ ಮತ್ತು ವಿದ್ಯಾ ಬಾಲನ್ ಅಂತಹ ದೊಡ್ಡ ತಾರಾಬಳಗವೇ ಇರಲಿದೆ. 2026ರ ಬೇಸಿಗೆಯ ಹೊತ್ತಿಗೆ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. 2023ರ ಬ್ಲಾಕ್‌ಬಸ್ಟರ್ 'ಜೈಲರ್' ಸಿನಿಮಾದ ಮುಂದುವರೆದ ಭಾಗ ಇದಾಗಿದೆ. (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net