ಹೊರಬಿತ್ತು ರಾಜಮೌಳಿ-ಮಹೇಶ್ ಬಾಬು ಚಿತ್ರದ ಟೈಟಲ್​! ಪ್ರಿನ್ಸ್​ ಲುಕ್​ಗೆ ಫ್ಯಾನ್ಸ್ ಫಿದಾ, ರಿಲೀಸ್​ ಸಮಯ ಘೋಷಣೆ

ಮಹೇಶ್ ಬಾಬು
ಮಹೇಶ್ ಬಾಬು
Published on

ಪ್ರಮುಖ ಮುಖ್ಯಾಂಶಗಳು

  • ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆ ಕಡೆಗೂ ಅನಾವರಣ
  • 'ವಾರಣಾಸಿ' ಎಂಬ ಟೈಟಲ್​ ಅನ್ನೇ ಫಿಕ್ಸ್ ಮಾಡಿದ ರಾಜಮೌಳಿ
  • ಪ್ರಿನ್ಸ್ ಲುಕ್​ಗೆ ಫ್ಯಾನ್ಸ್ ಫಿದಾ
ಆಂಧ್ರಪ್ರದೇಶ: ಟಾಲಿವುಡ್​ ಪ್ರಿನ್ಸ್ ಮಹೇಶ್ ಬಾಬು ಮತ್ತು ನಿರ್ದೇಶಕ ಎಸ್​.ಎಸ್​. ರಾಜಮೌಳಿ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆ ಕಡೆಗೂ ಅನಾವರಣಗೊಂಡಿದೆ.
ಈ ಹಿಂದೆ ಹರಿದಾಡುತ್ತಿದ್ದ 'ವಾರಣಾಸಿ' ಎಂಬ ಟೈಟಲ್​ ಅನ್ನೇ ರಾಜಮೌಳಿ ಫಿಕ್ಸ್ ಮಾಡಿದ್ದಾರೆ. ಇದೇ ಚಿತ್ರದ ಶೀರ್ಷಿಕೆಯಾಗಿದ್ದು, ಇದನ್ನೇ ಅಂತಿಮಗೊಳಿಸಲಾಗಿದೆ ಎಂದಿದ್ದಾರೆ. ಇದರೊಟ್ಟಿಗೆ ಮಹೇಶ್ ಬಾಬು ಅವರ ಪಾತ್ರವನ್ನು ಸಹ ಬಹಿರಂಗಪಡಿಸಲಾಗಿದೆ. ಕುದುರೆ ಏರಿ ಬರುತ್ತಿರುವ 'ರುದ್ರ'ನಾಗಿ ಪ್ರಿನ್ಸ್ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದಾರೆ. 
ಇಂದು ಹೈದರಾಬಾದ್​ನಲ್ಲಿ ನಡೆದ 'ಗ್ಲೋಬ್ ಟ್ರಾಟರ್' ಕಾರ್ಯಕ್ರಮದಲ್ಲಿ ವಿಶೇಷ ವಿಡಿಯೋ ರಿಲೀಸ್ ಮಾಡುವ ಮೂಲಕ ಮಹೇಶ್ ಬಾಬು ಅವರ ಪಾತ್ರ ಮತ್ತು ಟೈಟಲ್​ ಅನ್ನು ರಿವೀಲ್ ಮಾಡಲಾಯಿತು. ನಂದಿಯ ಮೇಲೆ ಕುಳಿತಿರುವ ಮಹೇಶ್ ಬಾಬು ಅವರ ನೋಟ ಅದ್ಭುತವಾಗಿ ಕಂಡುಬಂದಿದೆ. ನಂದಿಯ ವಾಹನದ ಮೇಲೆ ಉಗ್ರ ರೂಪದಲ್ಲಿ ಪ್ರಿನ್ಸ್ ಕಾಣಿಸಿಕೊಂಡಿರುವುದು ನಟನ ಫ್ಯಾನ್ಸ್​ಗಳ ಕುತೂಹಲವನ್ನು ಕೆರಳಿಸಿದೆ. 
ಮಹೇಶ್ ಅವರ ಫಸ್ಟ್​ ಲುಕ್​ ಜತೆಗೆ ಗ್ಲಿಂಪ್‌ಗಳನ್ನು ಸಹ ಬಿಡುಗಡೆ ಮಾಡಲಾಯಿತು. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಗ್ಲೋಬ್ ಟ್ರಾಟರ್ ಎಂಬ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿದ್ದ ಚಿತ್ರತಂಡ, ಇದೇ ವೇದಿಕೆಯಲ್ಲಿ ಸಿನಿಮಾದ ರಿಲೀಸ್​ ಸಮಯವನ್ನು ಘೋಷಿಸಿತು. 2027ರ ಆರಂಭದಲ್ಲಿ ಚಿತ್ರವನ್ನು ಜಾಗತಿಕವಾಗಿ ಬಿಡುಗಡೆಗೊಳಿಸುವುದಾಗಿ ಚಿತ್ರ ತಯಾರಕರು ಹೇಳಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net