ನರಸಿಂಹನ ಬಳಿಕ ಇದೀಗ ಪರಶುರಾಮನ ಅವತಾರ: ಹೊಂಬಾಳೆ ಫಿಲ್ಮ್ಸ್‌ನಿಂದ 'ಮಹಾವತಾರ ಪರಶುರಾಮ' ಘೋಷಣೆ! Mahavatar Cinematic Universe

ನರಸಿಂಹನ ಬಳಿಕ ಇದೀಗ ಪರಶುರಾಮನ ಅವತಾರ: ಹೊಂಬಾಳೆ ಫಿಲ್ಮ್ಸ್‌ನಿಂದ 'ಮಹಾವತಾರ ಪರಶುರಾಮ್' ಘೋಷಣೆ! Mahavatar Cinematic Universe
ನರಸಿಂಹನ ಬಳಿಕ ಇದೀಗ ಪರಶುರಾಮನ ಅವತಾರ: ಹೊಂಬಾಳೆ ಫಿಲ್ಮ್ಸ್‌ನಿಂದ 'ಮಹಾವತಾರ ಪರಶುರಾಮ್' ಘೋಷಣೆ! Mahavatar Cinematic Universe
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಸಿನಿಮಾ ರಂಗದಲ್ಲಿ ಬಿಗ್ ಬಜೆಟ್​ ಸಿನಿಮಾಗಳಿಗೆ ಜನಪ್ರಿಯವಾಗಿರುವ ಹೊಂಬಾಳೆ ಫಿಲ್ಮ್ಸ್
  • ಮತ್ತೊಂದು ಅದ್ಭುತ ಅಪ್​ಡೇಟ್​ನೊಂದಿಗೆ ಸಿನಿಪ್ರಿಯರ ಮುಂದೆ ಬಂದಿದೆ ಕನ್ನಡದ ಸಿನಿಮಾ ನಿರ್ಮಾಣ ಸಂಸ್ಥೆ
  • ಮಹಾವತಾರ ಸಿನಿಮ್ಯಾಟಿಕ್​ ಯೂನಿವರ್ಸ್ ಅಡಿಯಲ್ಲಿ ಹೊಂಬಾಳೆ ಫಿಲ್ಮ್ಸ್​ನಿಂದ​ ಎರಡನೇ ಅನಿಮೇಟೆಡ್​ ಚಿತ್ರ
  • ನರಸಿಂಹನ ಅವತಾರದ ಬಳಿಕ ಈ ಬಾರಿ ಪರುಶುರಾಮನ ಪರಾಕ್ರಮವನ್ನು ಸಿನಿ ಪ್ರಿಯರಿಗೆ ಪರಿಚಯಿಸಲಿದೆ
Mahavatar Cinematic Universe : ಭಾರತೀಯ ಸಿನಿಮಾ ರಂಗದಲ್ಲಿ ಬಿಗ್ ಬಜೆಟ್​ ಸಿನಿಮಾಗಳಿಗೆ ಜನಪ್ರಿಯವಾಗಿರುವ ಹೊಂಬಾಳೆ ಫಿಲ್ಮ್ಸ್, ಮತ್ತೊಂದು ಅದ್ಭುತ ಅಪ್​ಡೇಟ್​ನೊಂದಿಗೆ ಇಂದು (ಏಪ್ರಿಲ್​ 19) ಸಿನಿಪ್ರಿಯರ ಮುಂದೆ ಬಂದಿದೆ. 
ಕಳೆದ ವರ್ಷ ಬಿಡುಗಡೆಯಾದ 'ಮಹಾವತಾರ: ನರಸಿಂಹ' ಅನಿಮೇಟೆಡ್​ ಚಿತ್ರದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಈ ಸಿನಿಮಾ 2025, ಜುಲೈ 25ರಂದು ದೇಶಾದ್ಯಂತ ಬಿಡುಗಡೆಯಾಗಿ, ಬಾಕ್ಸ್ ಆಫೀಸ್ ಭರ್ಜರಿ ಯಶಸ್ಸು ಗಳಿಸಿತು. ಸಿನಿ ಮೂಲಗಳ ಪ್ರಕಾರ ಈ ಸಿನಿಮಾ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ.​ ಇದೀಗ, ಮಹಾವತಾರ ಸಿನಿಮ್ಯಾಟಿಕ್​ ಯೂನಿವರ್ಸ್ ಅಡಿಯಲ್ಲಿ ಹೊಂಬಾಳೆ ಫಿಲ್ಮ್ಸ್​ ಎರಡನೇ ಅನಿಮೇಟೆಡ್​ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿದೆ.
ಈ ಹಿಂದೆ ನರಸಿಂಹನ ಅವತಾರವನ್ನು ಬೆಳ್ಳಿ ತೆರೆಯ ಮೇಲೆ ಭರ್ಜರಿಯಾಗಿ ತೋರಿಸಿದ ಹೊಂಬಾಳೆ ಫಿಲ್ಸ್ಮ್​ ಈ ಬಾರಿ ವಿಷ್ಣುವಿನ ಆರನೇ ಅವತಾರವೆಂದು ಪರಿಗಣಿಸಲಾದ ಪರುಶುರಾಮನ ಪರಾಕ್ರಮವನ್ನು ಸಿನಿ ಪ್ರಿಯರಿಗೆ ಪರಿಚಯಿಸಲಿದೆ. ತಮ್ಮ ಮುಂದಿನ ಸಿನಿಮಾಗೆ 'ಮಹಾವತಾರ ಪರಶುರಾಮ್' ಎಂದು ಟೈಟಲ್​ ಇಡಲಾಗಿದೆ.

2027ರ ಡಿಸೆಂಬರ್​ಗೆ ರಿಲೀಸ್​

ಅಂದಹಾಗೆ, ಹೊಂಬಾಳೆ ಫಿಲ್ಮ್ಸ್ ಮತ್ತು ಕ್ಲೀಮ್ ಪ್ರೊಡಕ್ಷನ್ಸ್ ಜಂಟಿಯಾಗಿ ಭಗವಾನ್ ವಿಷ್ಣುವಿನ ದಶಾವತಾರಗಳನ್ನು ಆಧರಿಸಿ ಒಟ್ಟು 7 ಚಲನಚಿತ್ರಗಳನ್ನು ನಿರ್ಮಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಮಹತ್ವಾಕಾಂಕ್ಷೆಯ ಸಿನಿಮಾ ಪ್ರಯಾಣವು 2025ರಲ್ಲಿ ತೆರೆಕಂಡ 'ನರಸಿಂಹ' ಚಿತ್ರದ ಮೂಲಕ ಅದ್ಧೂರಿಯಾಗಿ ಆರಂಭಗೊಂಡಿತ್ತು. ಇದೀಗ ಈ ಸರಣಿಯ ಎರಡನೇ ಭಾಗವಾಗಿ ಭಗವಾನ್ ಪರಶುರಾಮನ ಅವತಾರದ ಕುರಿತು ಸಿನಿಮಾ ಸಿದ್ಧವಾಗುತ್ತಿದೆ. ಈ ಪ್ರತಿಷ್ಠಿತ ಚಿತ್ರವು 2027ರ ಡಿಸೆಂಬರ್‌ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ.
ಈ ಸಿನಿಮಾದ ಘೋಷಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಪೋಸ್ಟರ್ ಅತ್ಯಂತ ಭಯಾನಕವಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಯಾವಾಗ ಧರ್ಮವು ಪತನಗೊಳ್ಳುತ್ತದೆಯೋ, ಆಗ ಪರಶು (ಕೊಡಲಿ) ಏಳುತ್ತದೆ (When Dharma falls, Parashu rises) ಎಂಬ ಟ್ಯಾಗ್ ಲೈನ್‌ನೊಂದಿಗೆ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಭಾರತೀಯ ಪುರಾಣಗಳನ್ನು ಆಧರಿಸಿದ ಈ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿಸುವ ನಿರೀಕ್ಷೆಯಿದೆ.
ನಿರ್ದೇಶಕ ಅಶ್ವಿನ್ ಕುಮಾರ್ ಅವರು ಅನ್ಯಾಯವನ್ನು ಕೊನೆಗೊಳಿಸಿ ಜಗತ್ತಿನಲ್ಲಿ ಧರ್ಮವನ್ನು ಸ್ಥಾಪಿಸುವ ಪರಶುರಾಮನ ಪಾತ್ರವನ್ನು ಅತ್ಯಂತ ರೋಚಕ ರೀತಿಯಲ್ಲಿ ಚಿತ್ರಿಸುತ್ತಿದ್ದಾರೆ. ಈ ಅನಿಮೇಟೆಡ್ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದ ದೃಶ್ಯಗಳೊಂದಿಗೆ ನಿರ್ಮಿಸಲಾಗುತ್ತಿದ್ದು, ಮಕ್ಕಳನ್ನು ಮಾತ್ರವಲ್ಲದೆ ವಯಸ್ಕರನ್ನೂ ರಂಜಿಸಲಿದೆ ಎಂದು ಹೇಳಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net