ಹೀಗಿದ್ದ ಲವ್​ ಮಾಕ್ಟೇಲ್​ "ರೋಸ್" ಈಗ ಹೇಗಾಗಿದ್ದಾರೆ ನೋಡಿ: ಯಾವ ಹೀರೋಯಿನ್​ಗೂ ಕಮ್ಮಿ ಇಲ್ಲ... Love Mocktail

ಹೀಗಿದ್ದ ಲವ್​ ಮಾಕ್ಟೇಲ್​ "ರೋಸ್" ಈಗ ಹೇಗಾಗಿದ್ದಾರೆ ನೋಡಿ: ಯಾವ ಹೀರೋಯಿನ್​ಗೂ ಕಮ್ಮಿ ಇಲ್ಲ... Love Mocktail
ಹೀಗಿದ್ದ ಲವ್​ ಮಾಕ್ಟೇಲ್​ "ರೋಸ್" ಈಗ ಹೇಗಾಗಿದ್ದಾರೆ ನೋಡಿ: ಯಾವ ಹೀರೋಯಿನ್​ಗೂ ಕಮ್ಮಿ ಇಲ್ಲ... Love Mocktail
Published on

ಪ್ರಮುಖ ಮುಖ್ಯಾಂಶಗಳು

  • 2020ರಲ್ಲಿ ಶುರುವಾದ ಲವ್​ ಮಾಕ್ಟೇಲ್​ ಸಿನಿಮಾ ಜರ್ನಿ ಇಂದು ಮೂರನೇ ಭಾಗದ ಬಿಡುಗಡೆಯೊಂದಿಗೆ ಯಶಸ್ವಿ
  • ಲವ್​ ಮಾಕ್ಟೇಲ್​ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದ ಡಾರ್ಲಿಂಗ್​ ಕೃಷ್ಣ ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು
  • ಯುಗಾದಿ (ಮಾರ್ಚ್​ 19) ಹಬ್ಬದಂದು 3ನೇ ಭಾಗ ಬಿಡುಗಡೆಯಾಗಿದ್ದು, ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
Love Mocktail : ಲವ್​ ಮಾಕ್ಟೇಲ್​ ಸಿನಿಮಾ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. 2020ರಲ್ಲಿ ಶುರುವಾದ ಲವ್​ ಮಾಕ್ಟೇಲ್​ ಸಿನಿಮಾ ಜರ್ನಿ ಇಂದು ಮೂರನೇ ಭಾಗದ ಬಿಡುಗಡೆಯೊಂದಿಗೆ ಚಂದನವನದಲ್ಲಿ ತನ್ನದೇಯಾದ ವಿಶೇಷ ಮುದ್ರೆ ಒತ್ತಿದೆ. ಲವ್​ ಮಾಕ್ಟೇಲ್​ ಸಿನಿಮಾ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದ ಡಾರ್ಲಿಂಗ್​ ಕೃಷ್ಣ, ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಪಡೆದರು. ಈ ಸಿನಿಮಾ ತೆಲುಗಿಗೂ ರಿಮೇಕ್​ ಆಯಿತು. ಇದೇ ಯಶಸ್ಸಿನೊಂದಿಗೆ 2022ರಲ್ಲಿ ತೆರೆಕಂಡ ಎರಡನೇ ಭಾಗವು ಕೂಡ ಸದ್ದು ಮಾಡಿತು. ಇದೀಗ ಯುಗಾದಿ (ಮಾರ್ಚ್​ 19) ಹಬ್ಬದಂದು 3ನೇ ಭಾಗ ಬಿಡುಗಡೆಯಾಗಿದ್ದು, ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
ಅಂದಹಾಗೆ, ಇತ್ತೀಚೆಗೆ ನಡೆದ ಲವ್​ ಮಾಕ್ಟೇಲ್​ 3 ಸಿನಿಮಾದ ಪ್ರೀಮಿಯರ್​ ಶೋ ವೇಳೆ ಓರ್ವ ವ್ಯಕ್ತಿ ವಿಶೇಷ ಗಮನ ಸೆಳೆದರು. ಆ ವ್ಯಕ್ತಿ ಯಾರೆಂದರೆ ಲವ್​ ಮಾಕ್ಟೇಲ್​ 1 ಸಿನಿಮಾದಲ್ಲಿ ರೋಸ್​ ಪಾತ್ರಧಾರಿಯಾಗಿ ಮಿಂಚಿದ್ದ ಹುಡುಗಿ. ಮೊದಲ ಭಾಗದಲ್ಲಿ ನಾಯಕ ಡಾರ್ಲಿಂಗ್​ ಕೃಷ್ಣರ ಹೈಸ್ಕೂಲ್​ ಲವ್​. ಅಂದರೆ, ಟ್ಯೂಷನ್ ಹೇಳಿ ಕೊಡುವ ಜಾಗದಲ್ಲಿ ರೋಸ್​ ಮೇಲೆ ನಾಯಕನಿಗೆ ಲವ್​ ಆಗುತ್ತದೆ. ಈ ಲವ್​ ಸ್ಟೋರಿ ಪ್ರೇಕ್ಷಕರ ಗಮನವನ್ನು ಸೆಳೆದಿತ್ತು.
ರೋಸ್​ ಪಾತ್ರವನ್ನು ನೆನೆಸಿಕೊಂಡರೆ ಒಂದು ಡೈಲಾಗ್​ ನೆನಪಾಗುತ್ತದೆ ಅದೇನೆಂದರೆ, ಹೂತರ ಇದ್ದಳು ಇದೀಗ ಹೂಕೋಸ್​ ಆಗಿದ್ದಾಳೆ ಎಂಬ ಡೈಲಾಗ್​. ಇದು ತುಂಬಾ ಜನಪ್ರಿಯತೆ ಪಡೆದುಕೊಂಡಿತು. ಇದೇ ರೋಸ್​ ಪಾತ್ರಧಾರಿ ಸುಮಾರು 6 ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಂಡಿದ್ದಾರೆ. ಲವ್​ ಮಾಕ್ಟೇಲ್​ 3 ಸಿನಿಮಾದ ಪ್ರೀಮಿಯರ್​ ಶೋ ವೇಳೆ ರೋಸ್​ ಪಾತ್ರಧಾರಿ ಹುಡುಗಿ ಹಾಜರಾಗಿದ್ದಳು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ವೈರಲ್​ ವಿಡಿಯೋ ನೋಡಿದವರು ಇವಳೇನಾ ಆ ರೋಸ್​ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಲವ್​ ಮಾಕ್ಟೇಲ್​ ಸಿನಿಮಾದಲ್ಲಿ ಕಣ್ಣಿಗೆ ಕನ್ನಡಕ ಹಾಕಿಕೊಂಡು ಪುಟ್ಟು ಹುಡುಗಿಯಂತೆ ಕಾಣುತ್ತಿದ್ದ ರೋಸ್​ ಇಂದು ಎಷ್ಟೊಂದು ಚೆನ್ನಾಗಿ ಕಾಣುತ್ತಿದ್ದಾಳೆ ನೋಡಿ ಎಂದು ವಿಡಿಯೋ ನೋಡಿದವರು ಹುಬ್ಬೇರಿಸುತ್ತಿದ್ದಾರೆ. ರೋಸ್​ ನಿಜವಾಗಿಯೂ ಈಗ ರೋಸ್​ ರೀತಿ ಇದಾರೆ. ನಾಯಕಿಯಾಗುವ ಎಲ್ಲ ಲಕ್ಷಣಗಳು ಇವೆ ಎಂದು ವೈರಲ್​ ವಿಡಿಯೋಗೆ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. 
ಅಂದಹಾಗೆ, 2020ರಲ್ಲಿ ಬಿಡುಗಡೆಯಾದ ಲವ್​ ಮಾಕ್ಟೇಲ್​ ಸಿನಿಮಾ ಸಾಕಷ್ಟು ಹೆಸರು ಮಾಡಿತು. ಇದೇ ಯಶಸ್ಸಿನ ಅಡಿಯಲ್ಲಿ 2022ರಲ್ಲಿ ಲವ್​ ಮಾಕ್ಟೇಲ್ 2​ ಸಿನಿಮಾ ಬಿಡುಗಡೆಯಾಯಿತು. ಇದು ಹೇಳಿಕೊಳ್ಳುವಷ್ಟು ಹಿಟ್​ ಆಗದಿದ್ದರೂ ಸಾಧಾರಣ ಗೆಲುವು ಸಾಧಿಸಿತು. ಇದೀಗ ಲವ್​ ಮಾಕ್ಟೇಲ್​ 3 ಬಿಡುಗಡೆಯಾಗಿದೆ. ಸಿನಿಮಾದಲ್ಲಿ ತಂದೆ-ಮಗಳ ಭಾವುಕ ಪಯಣಕ್ಕೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net