ಟಾಕ್ಸಿಕ್ ಸಿನಿಮಾ ವಿವಾದದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ನಿರ್ದೇಶಕಿ ಗೀತು ಮೋಹನ್‌ದಾಸ್! Toxic

ಟಾಕ್ಸಿಕ್ ಸಿನಿಮಾ ವಿವಾದದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ನಿರ್ದೇಶಕಿ ಗೀತು ಮೋಹನ್‌ದಾಸ್! Toxic
ಟಾಕ್ಸಿಕ್ ಸಿನಿಮಾ ವಿವಾದದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ನಿರ್ದೇಶಕಿ ಗೀತು ಮೋಹನ್‌ದಾಸ್! Toxic
Published on

ಪ್ರಮುಖ ಮುಖ್ಯಾಂಶಗಳು

  • ಟಾಕ್ಸಿಕ್ ಸಿನಿಮಾದಲ್ಲಿ ಮಹಿಳಾ ಪಾತ್ರಗಳ ಬಿಂಬಿಸುವಿಕೆ ಕುರಿತು ತೀವ್ರ ವಿವಾದ ಹಾಗೂ ಟೀಕೆ ವ್ಯಕ್ತವಾಗಿದೆ
  • ಸಿನಿಮಾದಲ್ಲಿ ಮಹಿಳೆಯರನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂಬ ಮಾತನ್ನು ಒಪ್ಪುವುದಿಲ್ಲ ಎಂದು ನಿರ್ದೇಶಕಿ ಗೀತು ಸ್ಪಷ್ಟಪಡಿಸಿದ್ದಾರೆ
  • ಪ್ರೇಕ್ಷಕರು ಯಾವುದೇ ಪೂರ್ವಾಗ್ರಹವಿಲ್ಲದೆ ಮೊದಲು ಥಿಯೇಟರ್‌ಗೆ ಹೋಗಿ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ
  • ಸಿನಿಮಾದ ಸುತ್ತ ಹರಿದಾಡುತ್ತಿರುವ ಆಕ್ರೋಶಗಳು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ರೇಜ್ ಬೇಟಿಂಗ್ ತಂತ್ರಗಳಾಗಿವೆ ಎಂದಿದ್ದಾರೆ
Toxic : ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಬಿಡುಗಡೆಯ ಬೆನ್ನಲ್ಲೇ, ಚಿತ್ರದಲ್ಲಿ ಮಹಿಳಾ ಪಾತ್ರಗಳನ್ನು ಬಿಂಬಿಸುವಿರುವ ಬಗ್ಗೆ ತೀವ್ರ ವಿವಾದಗಳು ಹಾಗೂ ಟೀಕೆಗಳು ವ್ಯಕ್ತವಾಗಿವೆ. ಈ ಹಿಂದೆ ಸಿನಿಮಾಗಳಲ್ಲಿ ಸ್ತ್ರೀ ಪಾತ್ರಗಳನ್ನು ಅಪ್ರಯೋಜಕವಾಗಿ ಅಥವಾ ಕೇವಲ ಗ್ಲಾಮರ್‌ಗಾಗಿ ಬಳಸುವುದನ್ನು ಸತತವಾಗಿ ವಿರೋಧಿಸುತ್ತ ಬಂದಿದ್ದ ಗೀತು ಮೋಹನ್‌ದಾಸ್, ಇದೀಗ ತಮ್ಮದೇ ಸಿನಿಮಾದಲ್ಲಿ ಇದನ್ನು ನಿರ್ಲಕ್ಷಿಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಎಲ್ಲಾ ವಿವಾದಗಳು ಮತ್ತು ಚರ್ಚೆಗಳ ಕುರಿತು ನಿರ್ದೇಶಕಿ ಗೀತು ಮೋಹನ್‌ದಾಸ್ ಮೊದಲ ಬಾರಿಗೆ ಮುಕ್ತವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕೊಚ್ಚಿಯಲ್ಲಿ ನಡೆದ 'ಟಾಕ್ಸಿಕ್' ಸಿನಿಮಾ ಸಂಬಂಧದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ರಂಜಿನಿ ಹರಿದಾಸ್ ಎತ್ತಿದ ಪ್ರಶ್ನೆಗಳಿಗೆ ನಿರ್ದೇಶಕಿ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾದಲ್ಲಿ ಮಹಿಳೆಯರನ್ನು ತಪ್ಪಾಗಿ ಚಿತ್ರಿಸಲಾಗಿದೆ ಅಥವಾ ವಸ್ತುರೂಪವಾಗಿ ತೋರಿಸಲಾಗಿದೆ ಎಂಬ ಮಾತನ್ನು ತಾವು ಒಪ್ಪುವುದಿಲ್ಲ ಎಂದು ಗೀತು ಸ್ಪಷ್ಟಪಡಿಸಿದ್ದಾರೆ. ಪ್ರೇಕ್ಷಕರು ಯಾವುದೇ ಪೂರ್ವಾಗ್ರಹವಿಲ್ಲದೆ ಮೊದಲು ಥಿಯೇಟರ್‌ಗೆ ಹೋಗಿ ಸಿನಿಮಾ ವೀಕ್ಷಿಸಬೇಕು, ಆ ಬಳಿಕವಷ್ಟೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸಿನಿಮಾದ ಸುತ್ತ ಹರಿದಾಡುತ್ತಿರುವ ಅನೇಕ ಟೀಕೆಗಳು ಮತ್ತು ಆಕ್ರೋಶಗಳು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ 'ರೇಜ್ ಬೇಟಿಂಗ್' ತಂತ್ರಗಳಾಗಿವೆ ಎಂದು ಗೀತು ಗಂಭೀರ ಆರೋಪ ಮಾಡಿದ್ದಾರೆ. ಸಿನಿಮಾದ ಬಗ್ಗೆ ಜನರನ್ನು ಆಕರ್ಷಿಸಲು ಈ ರೀತಿಯ ಪ್ರಚಾರಗಳು ಹೇಗೆ ಸೃಷ್ಟಿಯಾಗುತ್ತಿವೆ ಎಂಬುದರ ಸ್ಪಷ್ಟ ಅರಿವು ತಮಗಿದೆ ಎಂದಿರುವ ಅವರು, ಈ ರೀತಿಯ ವಿವಾದದ ಮೂಲಕ ಜನರನ್ನು ಥಿಯೇಟರ್‌ಗಳಿಗೆ ಬರುವಂತೆ ಪ್ರೇರೇಪಿಸಲು ತಾವೇ ಬಯಸಿದ್ದಾಗಿ ತಿಳಿಸಿದ್ದಾರೆ. ತಮ್ಮ ಸಿನಿಮಾ ನಿಲುವು ಹಾಗೂ ವೈಯಕ್ತಿಕ ವ್ಯಕ್ತಿತ್ವದ ಬಗ್ಗೆ ತಮಗೆ ಸಂಪೂರ್ಣ ಸ್ಪಷ್ಟತೆಯಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇನ್ನೂ ಈ ವಿವಾದವನ್ನು ತಾವು ಅತ್ಯಂತ ಸಕಾರಾತ್ಮಕವಾಗಿ ಸ್ವೀಕರಿಸಿರುವುದಾಗಿ ತಿಳಿಸಿರುವ ಗೀತು ಮೋಹನ್‌ದಾಸ್, ಪ್ರತಿಯೊಬ್ಬರೂ ಇದನ್ನು ಒಂದು ದೊಡ್ಡ ಚರ್ಚೆಯ ವಿಷಯವನ್ನಾಗಿ ಪರಿವರ್ತಿಸುತ್ತಿರುವುದಕ್ಕೆ ಬಹಳ ಉತ್ಸುಕರಾಗಿದ್ದೇನೆ ಎಂದಿದ್ದಾರೆ. ಕಲೆಯು ಸದಾ ಆಲೋಚನೆಗಳನ್ನು ಕೆರಳಿಸುವಂತಿರಬೇಕು ಮತ್ತು ಅದು ಕಂಫರ್ಟ್ ಜೋನ್‌ನಲ್ಲಿರುವವರನ್ನು ಇನ್ನಷ್ಟು ಅಸುರಕ್ಷಿತರಾಗಿಸುವ ಅಥವಾ ಆಲೋಚನೆಗೆ ಹಚ್ಚುವ ಶಕ್ತಿ ಹೊಂದಿರಬೇಕು ಎಂದು ಅವರು ತಮ್ಮ ಕಲಾ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ.
ಚಿತ್ರದೊಳಗಿನ ಅಂಶಗಳ ಬಗ್ಗೆ ಮುಕ್ತ ಚರ್ಚೆ ನಡೆಸಲು ತಾವು ಸದಾ ಸಿದ್ಧರಿರುವುದಾಗಿ ಗೀತು ಮೋಹನ್‌ದಾಸ್ ತಿಳಿಸಿದ್ದಾರೆ. ಒಟ್ಟಾರೆಯಾಗಿ, ಸಿನಿಮಾ ಬಿಡುಗಡೆಯ ಆರಂಭಿಕ ಹಂತದಲ್ಲೇ ಉಂಟಾಗಿರುವ ಈ ವಿವಾದಗಳು ಮತ್ತು ವಿರೋಧಾಭಾಸಗಳು ಚಿತ್ರದ ಸುತ್ತ ಗಾಸಿಪ್ ಮತ್ತು ಚರ್ಚೆಗಳನ್ನು ಹೆಚ್ಚಿಸಿದ್ದು, ಗೀತು ಅವರ ದಿಟ್ಟ ಪ್ರತಿಕ್ರಿಯೆಯು ಈಗ ಸಿನಿರಂಗದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net