ಮನೆಯವರಿಗೂ ತಿಳಿಸದೆ ದಾವೂದ್ ಪಾತ್ರ ಮಾಡಿದೆ! ಧುರಂಧರ್ 2 ಬಗ್ಗೆ ಮೌನ ಮುರಿದ ಬಡೇ ಸಾಬ್ ಡ್ಯಾನಿಶ್ ಇಕ್ಬಾಲ್! Dhurandhar 2 Dawood Ibrahim
ಬಡೇ ಸಾಬ್ ಪಾತ್ರದ ಕುರಿತು ನನ್ನ ಮನೆಯವರಿಗೂ ತಿಳಿಸಿರಲಿಲ್ಲ ಎಂದ ಡ್ಯಾನಿಶ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಾಕ್ಸ್ ಆಫೀಸ್ನಲ್ಲಿ ಧುರಂಧರ್ ಕಮಾಲ್
ಈ ಸಿನಿಮಾದಲ್ಲಿ ದಾವೂದ್ ಇಬ್ರಾಹಿಂ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡ್ಯಾನಿಶ್ ಇಕ್ಬಾಲ್
ಬಡೇ ಸಾಬ್ ಪಾತ್ರದ ಕುರಿತು ನನ್ನ ಮನೆಯವರಿಗೂ ತಿಳಿಸಿರಲಿಲ್ಲ ಎಂದ ಡ್ಯಾನಿಶ್
ಮುಂಬೈ: ಮಾರ್ಚ್ 19 ರಂದು ತೆರೆಕಂಡ ಧುರಂಧರ್ 2: ದಿ ರಿವೆಂಜ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಾ ಬಿಡುಗಡೆಯಾದ ಐದೇ ದಿನಗಳಲ್ಲಿ ಸಾವಿರದ ಗಡಿ ತಲುಪಿದೆ. ಈ ಸಿನಿಮಾದಲ್ಲಿ ನಿಜ ಜೀವದಲ್ಲಿ ಬದುಕಿರುವ ಹಾಗೂ ಸಾವನ್ನಪ್ಪಿರುವ ವ್ಯಕ್ತಿಗಳ ಪಾತ್ರಗಳನ್ನು ಸೃಷ್ಟಿಸಿದ ಕಾರಣದಿಂದಲೇ ಈ ಸಿನಿಮಾ ಇಷ್ಟೊಂದು ಯಶಸ್ಸು ಕಂಡಿದೆ ಎಂದರೆ ತಪ್ಪಾಗಲಾರದು.
ಈ ಸಿನಿಮಾದ ಮೊದಲ ಭಾಗ ಬಿಡುಗಡೆಯಾದಾಗನಿಂದ ಈ ಚಿತ್ರದಲ್ಲಿ ಹೇಳಿರುವ ಬಡೇ ಸಾಬ್ (Dhurandhar 2 Dawood Ibrahim) ಯಾರ ಕುರಿತಾದ ಪಾತ್ರ? ಮತ್ತು ಈ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬ ಪ್ರಶ್ನೆ ಪ್ರೇಕ್ಷಕರ ಮನಸ್ಸಿನಲ್ಲಿ ಕಾಡುತ್ತಿತ್ತು. ಈಗ ಸಿನಿಮಾದ ಎರಡನೇ ಭಾಗ ಬಿಡುಗಡೆಯಾದ ನಂತರ ಈ ಬಡೇ ಸಾಬ್ ಪಾತ್ರ ಭೂಗತ ಪಾತಕಿ ದಾವೂದ್ ಇಬ್ರಾಹಿಂನದ್ದು ಎನ್ನುವುದು ಜಗಜ್ಜಾಹಿರವಾಗಿದೆ.
ಈ ಬಡೇ ಸಾಬ್ ಅಂದರೆ ದಾವೂದ್ ಇಬ್ರಾಹಿಂನ ಪಾತ್ರದಲ್ಲಿ ಮಿಂಚಿರುವ ಡ್ಯಾನಿಶ್ ಇಕ್ಬಾಲ್ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ತಮ್ಮ ಪಾತ್ರದ ಕುರಿತು ಮೌನ ಮುರಿದಿದ್ದಾರೆ.
ನನಗೆ ಆದಿತ್ಯ ಧರ್ ನೀವು ನನ್ನ ಸಿನಿಮಾದಲ್ಲಿ ಒಂದು ಪಾತ್ರವನ್ನು ಮಾಡಬೇಕೆಂದಷ್ಟೆ ತಿಳಿಸಿದ್ದರು. ನಂತರ ಸಿನಿಮಾದ ಕಥೆ ಕೇಳಿದ ಬಳಿಕ ನನಗೆ ನೀವು ಸಿನಿಮಾದಲ್ಲಿ ಬರುವ ಬಡೇ ಸಾಬ್ (ದಾವೂದ್ ಪಾತ್ರ) ಪಾತ್ರವನ್ನು ನಿರ್ವಹಿಸಬೇಕೆಂದು ಹೇಳಿದರು. ಹಾಗೆಯೇ ಈ ಕುರಿತು ಕೆಲವು ಅರ್ಗಿಮೆಂಟ್ಗಳನ್ನು ಮಾಡಿಕೊಂಡು ಈ ಪಾತ್ರದ ಬಗ್ಗೆ ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಎಲ್ಲಿಯೂ ಯಾವುದೇ ರಹಸ್ಯವನ್ನು ಬಿಟ್ಟುಕೊಡಬಾರದೆಂದು ಆದಿತ್ಯ ತಿಳಿಸಿದ್ದ.
ಹಾಗೆಯೇ ನಾನು ವೃತ್ತಿ ಧರ್ಮಕ್ಕೆ ಬೆಲೆ ಕೊಟ್ಟು ನಾನು ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಕುರಿತು ಮನೆಯವರಿಗೂ ಸಹ ಏನನ್ನು ತಿಳಿಸಿರಲಿಲ್ಲ ಎಂದು ಡ್ಯಾನಿಶ್ ಇಕ್ಬಾಲ್ ತಿಳಿಸಿದ್ದಾರೆ. ಈಗ ಈ ಸಿನಿಮಾ ಅದ್ಭುತವಾಗಿ ಮೂಡಿಬಂದಿದ್ದು, ನನ್ನ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗುತ್ತಿರುವುದು ನನಗೆ ಸಹ ತುಂಬಾ ಖುಷಿಯನ್ನು ತಂದುಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
ಯಾರು ಈ ಡ್ಯಾನಿಶ್ ಇಕ್ಬಾಲ್?
ಡ್ಯಾನಿಶ್ ಇಕ್ಬಾಲ್ ಒಬ್ಬ ನಟ, ರಂಗಭೂಮಿ ನಿರ್ದೇಶಕ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ವಿದ್ಯಾರ್ಥಿಯಾಗಿದ್ದು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಾಟಕಕಾರರಾಗಿದ್ದಾರೆ. ಅಷ್ಟೇ ಅಲ್ಲದೇ ಡ್ಯಾನಿಶ್ ಇಕ್ಬಾಲ್, ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಸಮೂಹ ಸಂವಹನ ಸಂಶೋಧನಾ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಧುರಂಧರ್ 2 ನಲ್ಲಿ ಬಡೇ ಸಾಬ್ ಪಾತ್ರವನ್ನು ನಿರ್ವಹಿಸುವ ಮೊದಲು ಫರ್ಜ, ಹಕ್, ಭಕ್ಷಕ್ ಹಾಗೂ ಹಾಲಿವುಡ್ನ ದಿ ಮೈಟಿ ಹಾರ್ಟ್ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಧುರಂಧರ್ 2 ಇದು ಧುರಂಧರ್ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ರಾಕೇಶ್ ಬೇಡಿ, ಆರ್.ಮಾಧವನ್, ಅರ್ಜುನ್ ರಾಂಪಾಲ್, ಡ್ಯಾನಿಶ್ ಇಕ್ಬಾಲ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್).