ಸನಾತನ ಧರ್ಮವು ತನಗೆ ಧೈರ್ಯವಾಗಿರಲು, ಸತ್ಯದ ಪರ ನಿಲ್ಲಲು ಮತ್ತು ಇತರರನ್ನು ಗೌರವಿಸಲು ಕಲಿಸಿದೆ ಎಂದು ತಿಳಿಸಿರುವ ಅನಸೂಯಾ, ತಮ್ಮ ಧರ್ಮ, ನಂಬಿಕೆ ಮತ್ತು ಮೌಲ್ಯಗಳು ಚೆನ್ನಾಗಿ ತಿಳಿದಿವೆ ಎಂದಿದ್ದಾರೆ. ಈ ವಿಚಾರದಲ್ಲಿ ನಾನು ಯಾರಿಗೂ ಕ್ಷಮೆ ಯಾಚಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಅನಸೂಯಾ, ತಾನೊಬ್ಬ ಹನುಮಂತನ ಮಗಳು ಎಂದು ಹೇಳಿಕೊಳ್ಳುವುದೇ ನನಗೆ ಹೆಮ್ಮೆ ಎಂದು ಬಣ್ಣಿಸಿದ್ದಾರೆ.