ಚಿತ್ರತಂಡವು ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಪಡೆದಿದ್ದರೂ ಏಕಸದಸ್ಯ ಪೀಠವು 15 ದಿನಗಳವರೆಗೆ ತಡೆಯಾಜ್ಞೆ ನೀಡಿರುವ ಕಾನೂನು ಕ್ರಮವನ್ನು ವಿಭಾಗೀಯ ಪೀಠ ಪರಿಶೀಲನೆ ನಡೆಸಿತು. ಅಲ್ಲದೆ, ತನ್ನ ವಿಚಾರಣೆಯ ಸಮಯದಲ್ಲಿ, ಚಿತ್ರದ ಪ್ರಮಾಣಪತ್ರವನ್ನು ವಿರೋಧಿಸುವ ಅರ್ಜಿಗಳು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳಂತೆ ಕಂಡುಬಂದಿರುವುದನ್ನು ಗಮನಿಸಿದ ನ್ಯಾಯಾಲಯ, ಇನ್ನೂ ಸಿನಿಮಾನೇ ಬಿಡುಗಡೆಯಾಗಿಲ್ಲ, ಹೀಗಿರುವ ಆರಂಭಿಕ ಹಂತದಲ್ಲೇ ಇಂತಹ ಅರ್ಜಿಗಳನ್ನು ಹೇಗೆ ಪರಿಗಣಿಸಲಾಗುತ್ತದೆ ಎಂದು ಪ್ರಶ್ನೆ ಮಾಡಿತು. ಅಂತಿಮವಾಗಿ ವಿಭಾಗೀಯ ಪೀಠ ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಮುಂಬರುವ ಆದೇಶದ ಮೇಲೆ ಕೇರಳ ಸ್ಟೋರಿ-2 ಚಿತ್ರದ ಬಿಡುಗಡೆ ಭವಿಷ್ಯ ನಿರ್ಧಾರವಾಗಲಿದೆ.