Gen Z : ಸಿನಿಮಾ ಜಗತ್ತು ವೀಕ್ಷಕರ ಅಭಿರುಚಿ ಹಾಗೂ ಕಾಲಕ್ಕೆ ತಕ್ಕಂತೆ ವೇಗವಾಗಿ ಬದಲಾಗುತ್ತಿದ್ದು, ಇಂದಿನ ಮನರಂಜನಾ ಜಗತ್ತಿನಲ್ಲಿ 'ಜೆನ್ ಜೀ' (Gen Z) ಯುವ ಪೀಳಿಗೆಯದ್ದೇ ಎಲ್ಲೆಡೆ ಹವಾ ಮುಂದುವರಿದಿದೆ. ಒಂದು ಕಾಲದಲ್ಲಿ ಕೇವಲ ಫೈಟ್ಸ್, ಲವ್ ಸಾಂಗ್ಸ್ ಹಾಗೂ ಕಾಮಿಡಿ ಇದ್ದರೆ ಸಾಕು ಚಿತ್ರಗಳು ಸೂಪರ್ ಹಿಟ್ ಆಗುತ್ತಿದ್ದವು. ಆದರೆ, ಇಂದಿನ ಸ್ಮಾರ್ಟ್ ಪ್ರೇಕ್ಷಕ ವರ್ಗವು ಕೇವಲ ಮೇಲ್ಮೈ ಮನರಂಜನೆಗೆ ತೃಪ್ತಿಪಡದೆ, ಸಿನಿಮಾದ ಕಥೆಯನ್ನು ಅತ್ಯಂತ ಆಳವಾಗಿ ವಿಶ್ಲೇಷಿಸುತ್ತಿದೆ.