46 ಕೋಟಿ ರೂ. ಮೌಲ್ಯದ ಚೆಕ್​ ವಂಚನೆ ಆರೋಪ: ಸಹೋದರಿ ರಾಧಾಗೆ ಖಡಕ್ ವಾರ್ನಿಂಗ್ ಕೊಟ್ಟ ನಟಿ ಅಂಬಿಕಾ | Radha vs Ambika

ಸಹೋದರಿ ಅಂಬಿಕಾ ಮತ್ತು ಸಹೋದರ ಮಲ್ಲಿಕಾರ್ಜುನ್ ವಿರುದ್ಧ ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ದಾಖಲಿಸಿ, ಸುದ್ದಿಗೋಷ್ಠಿಯಲ್ಲಿ ವಂಚನೆ ಕುರಿತು ರಾಧಾ ಓಪನ್​ ಆಗಿ ಮಾತನಾಡಿದ್ದಾರೆ.
Radha vs Ambika
46 ಕೋಟಿ ರೂ. ಮೌಲ್ಯದ ಚೆಕ್​ ವಂಚನೆ ಆರೋಪ
Published on

Radha vs Ambika: ಕನ್ನಡದಲ್ಲಿ ಚಲಿಸುವ ಮೋಡಗಳು, ಚಕ್ರವ್ಯೂಹ ಸೇರಿದಂತೆ ಹಲವಾರು ಸೂಪರ್​ಹಿಟ್​ ಚಿತ್ರಗಳಲ್ಲಿ ನಟಿಸಿರುವ ಹಿರಿಯ ನಟಿ, ಬಹುಭಾಷಾ ತಾರೆ ಅಂಬಿಕಾ ವಿರುದ್ಧ ಅವರ ಸಹೋದರಿಯೇ 46 ಕೋಟಿ ರೂ. ಚೆಕ್​ ವಂಚನೆ ಆರೋಪ ಎಸಗಿರುವುದು ಸದ್ಯ ಚಿತ್ರೋದ್ಯಮದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.

ವೃತ್ತಿಯಲ್ಲಿ ನಟಿಯೇ ಆಗಿರುವ ರಾಧಾ, ತಮ್ಮ ಕುಟುಂಬದಲ್ಲಿ ಆಸ್ತಿ, ವ್ಯವಹಾರ ಮತ್ತು ಚಿನ್ನದ ವಹಿವಾಟಿಗೆ ಸಂಬಂಧಿಸಿದ ವಿವಾದವನ್ನು ಪೊಲೀಸ್​ ಠಾಣೆ ಮೆಟ್ಟಿಲಿಗೆ ತಂದಿರುವುದು ಇದೀಗ ಬಹಿರಂಗವಾಗಿದೆ. ಸಹೋದರಿ ಅಂಬಿಕಾ ಮತ್ತು ಸಹೋದರ ಮಲ್ಲಿಕಾರ್ಜುನ್ ವಿರುದ್ಧ ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ದಾಖಲಿಸಿ, ಸುದ್ದಿಗೋಷ್ಠಿಯಲ್ಲಿ ವಂಚನೆ ಕುರಿತು ರಾಧಾ ಓಪನ್​ ಆಗಿ ಮಾತನಾಡಿದ್ದಾರೆ.

ಎನ್​ಟಿವಿ ಸಿನಿ ವರದಿ ಪ್ರಕಾರ, ಅಂಬಿಕಾ ಮತ್ತು ಸಹೋದರ ಸೇರಿ ನನ್ನ ರೂಮ್​ನಲ್ಲಿದ್ದ ಸಹಿ ಹಾಕಿದ್ದ ಖಾಲಿ ಚೆಕ್‌ಗಳನ್ನು ಕದ್ದು 46 ಕೋಟಿ ರೂಪಾಯಿ ಲಪಟಾಯಿಸಲು ಯತ್ನಿಸಿದ್ದಾರೆ. ಪೊಲೀಸರು ಈ ಪ್ರಕರಣದ ಸಮಗ್ರ ತನಿಖೆ ನಡೆಸಿ, ಇಬ್ಬರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಎಂದು ರಾಧಾ ದೂರಿನಲ್ಲಿ ಒತ್ತಿ ಹೇಳಿದ್ದಾರೆ. ರಾಧಾ ಅವರ ಬಹಿರಂಗ ಆರೋಪದ ಬಗ್ಗೆ ಇದೀಗ ಅಂಬಿಕಾ ಕೊನೆಗೂ ಮೌನ ಮುರಿದಿದ್ದಾರೆ.

ರಾಧಾ ಮಾಡಿರುವ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಹಿರಿಯ ನಟಿ, ನಾನು ಯಾವುದೇ ಚೆಕ್‌ಗಳನ್ನು ಕಳ್ಳತನ ಮಾಡಿಲ್ಲ. ರಾಧಾ ನನಗೆ ಐದು ಚೆಕ್‌ಗಳನ್ನು ಕೊಟ್ಟಿದ್ದರು. ಕುಟುಂಬದ ಆಸ್ತಿ, ವ್ಯವಹಾರ, ಚಿನ್ನಾಭರಣದ ವಿವಾದಗಳನ್ನು ಬಗೆಹರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ರಾಧಾ ಕಡೆಯಿಂದ ನನಗೆ ಈ ಚೆಕ್‌ಗಳು ಬಂದಿದ್ದು. ಮಧುರವಾಯಲ್‌ನ 50 ಸೆಂಟ್ಸ್ ನಿವೇಶನ, ಎಆರ್‌ಎಸ್ ಗಾರ್ಡನ್ಸ್‌ನಲ್ಲಿನ 50 ಸೆಂಟ್ಸ್ ಪ್ಲಾಟ್ ಮತ್ತು ಚಿನ್ನದ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದ ಜುಲೈನಲ್ಲಿ ನಾನು ಈ ವಿಷಯಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಅಂಬಿಕಾ ಹೇಳಿದ್ದಾರೆ.

ಕೌಟುಂಬಿಕ ಕಲಹ ಬಗೆಹರಿಸುವ ಒಪ್ಪಂದದಂತೆ ರಾಧಾ ಅವರು ಐದು ಚೆಕ್‌ಗಳನ್ನು ನೀಡಿದ್ದಾರೆ. ಆದರೆ, ಈಗ ಅದೇ ಚೆಕ್‌ಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. 46 ಕೋಟಿ ರೂ. ಚೆಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲಿರುವ ಆರೋಪ ನಿಜವಲ್ಲ. ರಾಧಾ ನೀಡಿದ ಚೆಕ್‌ಗಳನ್ನು ಬ್ಯಾಂಕ್ ತಿರಸ್ಕರಿಸಿದರೆ, ಆಕೆಯ ವಿರುದ್ಧ ನಾನೂ ಪೊಲೀಸ್ ದೂರು ನೀಡುತ್ತೇನೆ ಎಂದು ಅಂಬಿಕಾ ಎಚ್ಚರಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net