ದರ್ಶನ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​: ಇನ್ನು ಮೂರೇ ತಿಂಗಳಲ್ಲಿ ದಚ್ಚುಗೆ ಜೈಲಿನಿಂದ ಬಿಡುಗಡೆ ಭಾಗ್ಯ! Actor Darshan

ಮೂರೇ ತಿಂಗಳಲ್ಲಿ ನಟ ದರ್ಶನ್​ ( Actor Darshan ) ಗೆಜೈಲಿನಿಂದ ಬಿಡುಗಡೆ ಭಾಗ್ಯ!
ಮೂರೇ ತಿಂಗಳಲ್ಲಿ ನಟ ದರ್ಶನ್​ ( Actor Darshan ) ಗೆಜೈಲಿನಿಂದ ಬಿಡುಗಡೆ ಭಾಗ್ಯ!
Published on

ಪ್ರಮುಖ ಮುಖ್ಯಾಂಶಗಳು

  • ನಟ ದರ್ಶನ್​ ಜೈಲಿನಿಂದ ಯಾವಾಗ ಬಿಡುಗಡೆಯಾಗುತ್ತಾರೆ ಅಂತ ಎದುರು ನೋಡುತ್ತಿರುವ ಅಭಿಮಾನಿಗಳು
  • ಮೊನ್ನೆಯಷ್ಟೇ 49ನೇ ವಸಂತಕ್ಕೆ ಕಾಲಿಟ್ಟ ದರ್ಶನ್​ ಆದರೆ ನೆಚ್ಚಿನ ನೋಡಲಾಗದೇ ಫ್ಯಾನ್ಸ್​ ಬೇಸರ
  • ಇನ್ನು ಮೂರೇ ತಿಂಗಳಲ್ಲಿ ದರ್ಶನ್​ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರಂತೆ
  • ನಟ ರವಿಚಂದ್ರನ್​ ಕೂಡ ಇನ್ನೂ ಎರಡೇ ತಿಂಗಳಲ್ಲಿ ನಟ ದರ್ಶನ್ ಬಿಡುಗಡೆಯಾಗುತ್ತಾರೆ ಎಂದಿದ್ದಾರೆ
ಬೆಂಗಳೂರು: ತಮ್ಮ ನೆಚ್ಚಿನ ನಟ ಯಾವಾಗ ಜೈಲಿನಿಂದ ಬಿಡುಗಡೆಯಾಗುತ್ತಾರೆ ಅಂತ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ( Actor Darshan ) ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ದರ್ಶನ್​, ಕಷ್ಟದ ದಿನಗಳನ್ನು ಕಳೆಯುತ್ತಿದ್ದಾರೆ. ಹೊರಗಡೆ ರಾಜನಂತಿದ್ದ ದಚ್ಚು, ಇಂದು ಆರೋಪಿಯಾಗಿ, ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇತ್ತ ಅಭಿಮಾನಿಗಳು ನಮ್​ ಬಾಸ್​ ಯಾವಾಗ ಬಿಡುಗಡೆಯಾಗುತ್ತಾರೆ ಅಂತ ಕಾಯುತ್ತಿದ್ದಾರೆ. ಇದರ ನಡುವೆ ಫ್ಯಾನ್ಸ್​ಗೆ ಒಂದು ಗುಡ್​ ನ್ಯೂಸ್​ ಸಿಕ್ಕಿದೆ. ಅದೇನೆಂದರೆ, ಇನ್ನು ಮೂರೇ ತಿಂಗಳಲ್ಲಿ ದರ್ಶನ್​ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರಂತೆ!
ಹೌದು, ಇಂಥದ್ದೊಂದು ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಪ್ರಶಾಂತ್​ ಕಿಣಿ ನುಡಿದಿದ್ದಾರೆ. ಅಲ್ಲದೆ, ಕ್ರೇಜಿಸ್ಟಾರ್​ ರವಿಚಂದ್ರನ್​ ಕೂಡ ಇನ್ನೂ ಎರಡೇ ತಿಂಗಳಲ್ಲಿ ನಟ ದರ್ಶನ್ ಬಿಡುಗಡೆಯಾಗುತ್ತಾರೆ ಎಂಬ ಮಾತುಗಳನ್ನಾಡಿದ್ದಾರೆ. ಹೀಗಾಗಿ, ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿದೆ. 
ಮೊನ್ನೆಯಷ್ಟೇ (ಫೆ.16) ನಟ ದರ್ಶನ್​ 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.​ ಇಷ್ಟು ವರ್ಷ ದಚ್ಚು ಹುಟ್ಟುಹಬ್ಬದ ದಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತಿತ್ತು. ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಮನೆ ಮುಂದೆ ಸೇರುತ್ತಿದ್ದರು. ಇಡೀ ದಿನ ಹಬ್ಬ ಮಾಡುತ್ತಿದ್ದರು. ಆದರೆ, ಈ ಬಾರಿ ದರ್ಶನ್​ ಜೈಲು ಸೇರಿರುವುದರಿಂದ ಮನೆಯ ಮುಂದೆ ನೀರವ ಮೌನ ಆವರಿಸಿದೆ. ತಮ್ಮ ನೆಚ್ಚಿನ ನಟ ಆದಷ್ಟು ಬೇಗ ಬಿಡುಗಡೆಯಾಗಲಿ ಎಂದು ದೇವರ ಬಳಿ ಅಭಿಮಾನಿಗಳು ಪಾರ್ಥಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಅಭಿಮಾನಿಗಳಿಗೆ ಒಂದು ಗುಡ್​ ನ್ಯೂಸ್​ ಬಂದಿದೆ. ಅದೇನೆಂದರೆ, ಇನ್ನೂ ಕೆಲವೇ ತಿಂಗಳಲ್ಲಿ ದರ್ಶನ್​ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ರವಿಚಂದ್ರನ್​ ಹೇಳಿದ್ದಾರೆ. 

ರವಿಚಂದ್ರನ್​ ಹೇಳಿದ್ದೇನು?

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಕುಣಿಗಲ್ ಬಿದನಗೆರೆ ಪಂಚಮುಖಿ ಆಂಜನೇಯ ಶಿವರಾತ್ರಿ ಸ್ವರಾಭಿಷೇಕ ಸಮಾರಂಭದಲ್ಲಿ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಗಳು "ಡಿಬಾಸ್" ಎಂದು ಘೋಷಣೆ ಕೂಗಿದಾಗ, ವೇದಿಕೆಯ ಮೇಲೆಯೇ ರವಿಮಾಮ ಪ್ರತಿಕ್ರಿಯಿಸಿದರು. ಡಿಬಾಸ್ ಬರ್ತಾರ್ ಬಿಡ್ರೋ, ಇನ್ನೊಂದು ಎರಡು ತಿಂಗಳಲ್ಲಿ ಆಚೆ ಬರ್ತಾರಂತೆ. ನಿಮಗೆ ಡಿ ಬಾಸ್ ಆದ್ರೆ ನನಗೆ ಮಗ ಎಂದರು. ಇದನ್ನು ಕೇಳಿ ದರ್ಶನ್​ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ.

ಜ್ಯೋತಿಷಿ ಭವಿಷ್ಯವಾಣಿ

ದರ್ಶನ್​ ಅವರು ಇನ್ನೂ ಮೂರು ತಿಂಗಳಲ್ಲಿ ಬಿಡುಗಡೆಯಾಗುತ್ತಾರೆ ಎಂದು ಖ್ಯಾತ ಜ್ಯೋತಿಷಿ ಪ್ರಶಾಂತ್​ ಕಿಣಿ ಕೂಡ ಭವಿಷ್ಯ ನುಡಿದಿದ್ದಾರೆ. ದರ್ಶನ್​ ಅವರಿಗೆ 2026 ಜನವರಿ ತಿಂಗಳಲ್ಲಿ ಜಾಮೀನು ಸಿಗಲಿದೆ. ಒಂದು ವೇಳೆ ಜನವರಿಯಲ್ಲಿ ತಪ್ಪಿದರೆ, ಜೂನ್​ ತಿಂಗಳಲ್ಲಿ ಸಿಗಲಿದೆ ಎಂದು 2025, ಸೆಪ್ಟೆಂಬರ್​ 1ರಂದು ಪ್ರಶಾಂತ್​ ಕಿಣಿ ತಮ್ಮ ಎಕ್ಸ್​ ಖಾತೆಯಲ್ಲಿ ಟ್ವೀಟ್​ ಮಾಡಿದ್ದರು. ಅದೇ ಟ್ವೀಟ್​ ಅನ್ನು ಫೆ.17ರಂದು ರಿಟ್ವೀಟ್​ ಮಾಡಿರುವ ಕಿಣಿ, ದರ್ಶನ್​ ಅವರಿಗೆ 2026, ಜೂನ್​ ತಿಂಗಳಲ್ಲಿ ಜಾಮೀನು ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 
ಸದ್ದು ಮಾಡಿತ್ತು ಕಿಣಿ ಭವಿಷ್ಯ
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್​ ಪವಾರ್ ಸಾವಿನ ವಿಚಾರದಲ್ಲಿ ಈ ಹಿಂದೆ ಕಿಣಿ ಭವಿಷ್ಯ ಸಾಕಷ್ಟು ಸದ್ದು ಮಾಡಿತ್ತು. 2025, ನವೆಂಬರ್ 8ರಂದು ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಒಂದು ಪೋಸ್ಟ್​ ಮಾಡಿದ್ದರು. ಆ ಪೋಸ್ಟ್​ನಲ್ಲಿ ಏನಿತ್ತು ಅಂದರೆ, ಒಮ್ಮೆ ಮುಖ್ಯಮಂತ್ರಿ ಅಥವಾ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಕೆಲವು ಭಾರತೀಯ ಅನುಭವಿ ರಾಜಕಾರಣಿಗಳು ಡಿಸೆಂಬರ್ 2025 ರಿಂದ ಫೆಬ್ರವರಿ 2026 ರ ನಡುವೆ ನಿಧನರಾಗಬಹುದು ಎಂದು ಬರೆಯಲಾಗಿತ್ತು. ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿನ ಬೆನ್ನಲ್ಲೇ ತಮ್ಮ ಭವಿಷ್ಯ ನಿಜವಾಯಿತು ಎಂದು ಪ್ರಶಾಂತ್​ ಕಿಣಿ ಅವರು ಹೇಳಿಕೊಂಡಿದ್ದಾರೆ. 2025ರ ಡಿಸೆಂಬರ್​ನಿಂದ 2026ರ ಫೆಬ್ರವರಿ ನಡುವೆ ಓರ್ವ ಹಿರಿಯ ರಾಜಕಾರಣಿ ಸಾಯುತ್ತಾರೆ ಎಂದು ನಾನು ಭವಿಷ್ಯ ನುಡಿದಿದ್ದೆ. ಇದೀಗ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾದರು ಎಂದು ಇತ್ತೀಚಿನ ಪೋಸ್ಟ್​ನಲ್ಲಿ ಪ್ರಶಾಂತ್​ ಕಿಣಿ ಬರೆದುಕೊಂಡಿದ್ದರು. ಇದು ಭಾರಿ ಚರ್ಚೆಗೆ ಗ್ರಾಸವಾಯಿತು. ಅಂದಹಾಗೆ, ಜನವರಿ 28ರ ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ಲಘು ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ನಿಧನರಾದರು. 
ಅಂದಹಾಗೆ, ನಟ ದರ್ಶನ್, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿದ ನಂತರ 2025, ಆಗಸ್ಟ್ 14 ಮತ್ತೆ ಜೈಲು ಸೇರಿದರು. ಇಂದಿಗೆ (ಫೆ. 18) ಸುಮಾರು 188 ದಿನಗಳು ಆಗಿವೆ. ಒಂದೆಡೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೆ, ಇನ್ನೊಂದೆಡೆ ನೆಚ್ಚಿನ ನಟನ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಆದಷ್ಟು ಬೇಗ ದರ್ಶನ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಸಿಗುತ್ತಾ ಅಂತ ಕಾದು ನೋಡಬೇಕಿದೆ, (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net