ಸಂಗೀತಾ ಡಿವೋರ್ಸ್​ಗಾಗಿ ಮೆಟ್ಟಿಲೇರಲು ಆ ಒಂದು ಸಿನಿಮಾನೇ ಕಾರಣ: ಎಲ್ಲಾ ಶುರುವಾಗಿದ್ದೇ ಅಲ್ಲಿಂದ! Actor Vijay

ಸಂಗೀತಾ ಡಿವೋರ್ಸ್​ಗಾಗಿ ಮೆಟ್ಟಿಲೇರಲು ಆ ಒಂದು ಸಿನಿಮಾನೇ ಕಾರಣ: ಎಲ್ಲಾ ಶುರುವಾಗಿದ್ದೇ ಅಲ್ಲಿಂದ! Actor Vijay
ಸಂಗೀತಾ ಡಿವೋರ್ಸ್​ಗಾಗಿ ಮೆಟ್ಟಿಲೇರಲು ಆ ಒಂದು ಸಿನಿಮಾನೇ ಕಾರಣ: ಎಲ್ಲಾ ಶುರುವಾಗಿದ್ದೇ ಅಲ್ಲಿಂದ! Actor Vijay
Published on

ಪ್ರಮುಖ ಮುಖ್ಯಾಂಶಗಳು

  • ಭಾರತದ ಚಲನಚಿತ್ರೋದ್ಯಮದಲ್ಲಿ ಭಾರಿ ಚರ್ಚೆಯ ವಿಷಯವಾದ ನಟ ವಿಜಯ್​ ವಿಚ್ಛೇದನದ ಸುದ್ದಿ
  • ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ ಸ್ವರ್ಣಲಿಂಗಂ
  • ನಟಿಯೊಂದಿಗಿನ ವಿವಾಹೇತರ ಸಂಬಂಧ ಉಲ್ಲೇಖಿಸಿ ವಿಚ್ಛೇದನ ಅರ್ಜಿ ಸಲ್ಲಿಸಿದ ಸಂಗೀತಾ
Actor Vijay : ತಮಿಳು ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ವಿಜಯ್ ಅವರ ವಿಚ್ಛೇದನ ಸುದ್ದಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ. ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿಯಿಂದ ಈ ಒಂದು ಚರ್ಚೆ ಹುಟ್ಟಿಕೊಂಡಿತು. ನಟಿಯೊಂದಿಗಿನ ವಿವಾಹೇತರ ಸಂಬಂಧವನ್ನು ಉಲ್ಲೇಖಿಸಿ ಸಂಗೀತಾ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಟಿವಿಕೆ ಮೂಲಕ ರಾಜಕೀಯ ಪ್ರವೇಶಿಸಿ, ತಮಿಳುನಾಡು ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ವಿಜಯ್‌ಗೆ ಈ ಡಿವೋರ್ಸ್​ ಪ್ರಕರಣ ಒಂದು ಸವಾಲಾಗಲಿದೆ ಎಂಬ ಪ್ರಚಾರಗಳು ತಮಿಳುನಾಡಿನಲ್ಲಿಯೂ ನಡೆಯುತ್ತಿವೆ. ತಮ್ಮ ವೃತ್ತಿಜೀವನದಲ್ಲಿ ಒಂದು ಚಿತ್ರಕ್ಕಾಗಿ 250 ಕೋಟಿ ರೂ.ವರೆಗೆ ಸಂಭಾವನೆ ಪಡೆದಿರುವ ನಟ ವಿಜಯ್ ವಿರುದ್ಧ ಕೇಳಿಬಂದಿರುವ ಆರೋಪಗಳು ಮುಂಬರುವ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
ಅಂದಹಾಗೆ, ವಿಜಯ್ ಮತ್ತು ಸಹೋದ್ಯೋಗಿ ನಟಿಯ ನಡುವಿನ ಆತ್ಮೀಯತೆ ಎಲ್ಲಾ ಮಿತಿಗಳನ್ನು ಮೀರಿದ್ದು, ಇದರಿಂದ ಮನನೊಂದಿರುವ ಸಂಗೀತಾ ತನ್ನಿಬ್ಬರು ಮಕ್ಕಳೊಂದಿಗೆ ವಿದೇಶದಲ್ಲಿ ತನ್ನ ಸ್ವಂತ ಮನೆಗೆ ತೆರಳಿದ್ದಾರೆ ಎಂಬ ಮಾಹಿತಿಯು ಹೊರಬಂದಿದೆ. ಆರಂಭದಲ್ಲಿ ಈ ಆರೋಪಗಳಿಗೆ ವಿಜಯ್ ಆಗಲಿ, ಅವರ ಪತ್ನಿ ಅಥವಾ ನಟಿಯಾಗಿ ಪ್ರತಿಕ್ರಿಯಿಸದ ಕಾರಣ, ಮೊದಲಿಗೆ ಚಿತ್ರರಂಗದಲ್ಲಿ ಯಾವುದೇ ದೊಡ್ಡ ಚರ್ಚೆ ನಡೆಯಲಿಲ್ಲ. ಆದರೆ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಈ ವಿಷಯ ಮತ್ತೆ ಚರ್ಚೆಗೆ ಬಂದಿದೆ.
ಕಳೆದ ಐದು ವರ್ಷಗಳಿಂದ ನಾನು ಮತ್ತು ವಿಜಯ್ ಬೇರೆ ಬೇರೆಯಾಗಿ ವಾಸಿಸುತ್ತಿದ್ದೇವೆ ಮತ್ತು ಈಗ ವಿಚ್ಛೇದನ ಬಯಸುತ್ತಿದ್ದೇವೆ ಎಂದು ಸಂಗೀತಾ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಇನ್ನು ಕೌಟುಂಬಿಕ ಸಂಬಂಧಗಳನ್ನು ಬಹಳವಾಗಿ ಗೌರವಿಸುವ ವಿಜಯ್ ಅವರ ಜೀವನದಲ್ಲಿ ಕೆಲವು ವಿಷಯಗಳು ಇದ್ದಕ್ಕಿದ್ದಂತೆ ಸಂಭವಿಸಿವೆ. ಆರೋಪ ಎದುರಿಸುತ್ತಿರುವ ನಟಿ ಮತ್ತು ವಿಜಯ್ ವರ್ಷಗಳಿಂದ ಒಟ್ಟಿಗೆ ನಟಿಸುತ್ತಿದ್ದಾರೆ. ಅವರು, ತಮ್ಮ ಯುವ ವಯಸ್ಸಿನಲ್ಲಿಯೂ ಒಟ್ಟಿಗೆ ನಟಿಸಿದ್ದಾರೆ. ಆದರೆ, ಆ ಸಮಯದಲ್ಲಿ ಯಾವುದೇ ಗಾಸಿಪ್‌ಗಳು ಇರಲಿಲ್ಲ. ಆದರೆ, ಸ್ವಲ್ಪ ಸಮಯದ ಹಿಂದೆ, ಇಬ್ಬರೂ ಮತ್ತೆ ಒಂದು ಚಿತ್ರದಲ್ಲಿ ಒಟ್ಟಿಗೆ ನಟಿಸಿದ ಬಳಿಕ ವಿವಾಹೇತರ ಸಂಬಂಧಗಳ ಚರ್ಚೆ ಹುಟ್ಟಿಕೊಂಡವು. ಇಬ್ಬರು ಮಾನಸಿಕವಾಗಿ ತುಂಬಾ ಹತ್ತಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. 40 ವರ್ಷಗಳ ನಂತರವೂ ಮದುವೆಯಾಗದ ಆ ನಟಿ, ನಟ ವಿಜಯ್ ಅವರನ್ನು ಪ್ರೀತಿಸುತ್ತಿದ್ದಾರೆ ಮತ್ತು ವಿಜಯ್ ಕೂಡ ಆ ನಟಿಯನ್ನು ಪ್ರೀತಿಸುತ್ತಿದ್ದಾರೆ ಸುದ್ದಿಗಳು ಹರಿದಾಡುತ್ತಿವೆ.
ಸಂಗೀತಾರನ್ನು ಯುಕೆಗೆ ಬಲವಂತವಾಗಿ ಕಳುಹಿಸಲು ವಿಜಯ್ ಪ್ರಯತ್ನಿಸಿದರು. ಆಕೆ, ಹೋಗಲು ನಿರಾಕರಿಸಿದಾಗ ಮಾನಸಿಕವಾಗಿ ಹಿಂಸಿಸಲು ಪ್ರಯತ್ನಿಸಿದರು ಎಂಬ ಚರ್ಚೆ ಕಾಲಿವುಡ್​ ಗಲ್ಲಿಯಲ್ಲಿ ನಡೆಯುತ್ತಿದೆ. ಸದ್ಯ ವಿಜಯ್​ ಅವರ ಡಿವೋರ್ಸ್​ ಪ್ರಕರಣ ಕಾಲಿವುಡ್​ನಲ್ಲಿ ಚರ್ಚೆಯ ವಿಷಯವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net