ಮುಂಬೈ: ಬಾಲಿವುಡ್ನ ಗ್ಲಾಮರ್ ಲೋಕದ ಹಿಂದೆ ಅಡಗಿರುವ ಕರಾಳ ಮುಖದ ಬಗ್ಗೆ ನಟಿ ತನುಶ್ರೀ ದತ್ತಾ ಮತ್ತೊಮ್ಮೆ ಬಾಂಬ್ ಸಿಡಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಮತ್ತು ಜಿಯಾ ಖಾನ್ (Jiah Khan) ಅವರ ಅಕಾಲಿಕ ಸಾವು ಕೇವಲ ಆಕಸ್ಮಿಕವಲ್ಲ, ಅದರ ಹಿಂದೆ ಚಿತ್ರೋದ್ಯಮದಲ್ಲಿರುವ ಸಿನಿಮಾ ಮಾಫಿಯಾದ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ತನುಶ್ರೀ, ಬಾಲಿವುಡ್ನಲ್ಲಿ ನಡೆಯುತ್ತಿರುವ ವ್ಯವಸ್ಥಿತ ಕಿರುಕುಳ ಮತ್ತು ಯುವ ಪ್ರತಿಭೆಗಳನ್ನು ತುಳಿಯುವ ತಂತ್ರಗಳ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.