ನಗ್ನ ಫೋಟೊ ಕಳಿಸು: ಅಕ್ಷಯ್​ ಕುಮಾರ್​ ಪುತ್ರಿ ಸೈಬರ್​ ಕಿರುಕುಳ ಪ್ರಕರಣ; ಆರೋಪಿಯನ್ನು ಬಂಧಿಸಿದ ಖಾಕಿ ಪಡೆ!Akshay Kumar Daughter

ಅಕ್ಷಯ್​ ಪುತ್ರಿ ನಗ್ನ ಫೋಟೊ ಕೇಳಿದ್ದ ಆರೋಪಿ
ಅಕ್ಷಯ್​ ಪುತ್ರಿ ನಗ್ನ ಫೋಟೊ ಕೇಳಿದ್ದ ಆರೋಪಿ
Published on

ಪ್ರಮುಖ ಮುಖ್ಯಾಂಶಗಳು

  • ಅಕ್ಷಯ್​ ಪುತ್ರಿ ನಗ್ನ ಫೋಟೊ ಕೇಳಿದ್ದ ಆರೋಪಿ
  • ಆನ್​ಲೈನ್​ ಗೇಮ್​ ಮೂಲಕ ಪರಿಚಯವಾಗಿದ್ದ ವ್ಯಕ್ತಿ
  • ಮಹಾರಾಷ್ಟ್ರ ಸೈಬರ್​ ಪೊಲೀಸರ ವಶಕ್ಕೆ ಆರೋಪಿ
ಮುಂಬೈ: ಭಾರತದಲ್ಲಿ ಇಂರ್ಟನೆಟ್​ ಕ್ರಾಂತಿಯಾಗಿ, ಯಾವಾಗ ಎಲ್ಲರ ಕೈಯಲ್ಲಿ ಸ್ಮಾರ್ಟ್​ಫೋನ್​ಗಳು ಬಂದವೋ ಆಗ, ಇದರ ಉಪಯೋಗಕ್ಕಿಂತ ಆಘಾತಕಾತಿ ಸಂಗತಿಗಳೇ ಹೆಚ್ಚು ನಡೆಯತೊಡಗಿದವು ಎಂದರೆ ತಪ್ಪಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರಿಗೆ ಮಾನಸಿಕ ಹಿಂಸೆ ನೀಡುವುದರಿಂದ ಹಿಡಿದು ಲೈಗಿಂಕ ದೌರ್ಜನ್ಯ ನಡೆಸಲು ಈ ಸೋಷಿಯಲ್​ ಮೀಡಿಯಾ ವೇದಿಕೆಗಳನ್ನು ಬಳಸಿಕೊಂಡ ಉದಾಹರಣೆ ಬಹಳಷ್ಟಿದೆ.
ಈಗ ಇಂತಹದ್ದೆ ಒಂದು ಸೈಬರ್​ ಬುಲ್ಲಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಒಬ್ಬನನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಅಕ್ಷಯ್​ ಕುಮಾರ್​ ಮಗಳ ನಗ್ನ ಫೋಟೊ ಕೇಳಿದ್ದ ಪಾಪಿ!

ಕಳೆದ ವರ್ಷ ಅಕ್ಟೋಬರ್​ನಲ್ಲಿ ಬಾಲಿವುಡ್​ ನಟ ಅಕ್ಷಯ್​ ಕುಮಾರ (Akshay Kumar Daughter), ತಮ್ಮ 13 ವರ್ಷದ ಮಗಳು, ನಿತಾರಾಗೆ ಆನ್​ಲೈನ್​ ಗೇಮ್​ನಲ್ಲಿ ಒಬ್ಬ ವ್ಯಕ್ತಿ ಆಕೆಯ ನಗ್ನ ಫೋಟೊ ಕಳಿಸುವಂತೆ ಒತ್ತಾಯ ಮಾಡುತ್ತಿದ್ದಾಗಿ ಸೈಬರ್​ ವಿಂಗ್​ನಲ್ಲಿ ದೂರನ್ನು ದಾಖಲಿಸಿದ್ದರು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಸೈಬರ್​ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನನ್ನು ಬಂಧಿಸಿದ್ದೆವೆ: ಸೈಬರ್​ ಪೊಲೀಸ್​
ಅಕ್ಷಯ್​ ಕುಮಾರ್​ ಅವರ ದೂರನ್ನು ಆಧರಿಸಿ ತನಿಖೆ ನಡೆಸಿದ ಮಹಾರಾಷ್ಟ್ರ ಸೈಬರ್​ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿರುವುದಾಗಿ ಮಹಾರಾಷ್ಟ್ರ ಸೈಬರ್​ ಮುಖ್ಯಸ್ಥ ಯಶಸ್ವಿ ಯಾದವ್​ ತಿಳಿಸಿದ್ದಾರೆ.
ಬಂಧಿತ ಆರೋಪಿಯ ಹೆಸರನ್ನು ಬಹಿರಂಗ ಪಡಿಸದ ಅವರು, ಬಂಧಿತನ ವಿರುದ್ಧ ನಟ ಅಕ್ಷಯ್​ ಕುಮಾರ್​ ಮಗಳಾದ ನಿರಾತಾಗೆ ಗೇಮಿಂಗ್​ ಮೂಲಕ ಪರಿಚಯವಾಗಿ, ನಂತರ ಆಕೆ ಜೊತೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪಗಳಿವೆ, ನಾವು ತನಿಖೆ ನಡೆಸುತ್ತಿದ್ದು, ತಪ್ಪು ಮಾಡಿದ್ದು ಕಂಡು ಬಂದಲ್ಲಿ ಕಠಿಣ ಶಿಕ್ಷೆ ನೀಡಲಿದ್ದೆವೆ ಎಂದು ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net