ಬಿಡುಗಡೆಗೆ ಕೆಲವೇ ಕ್ಷಣ ಬಾಕಿ.... ಏಕಾಏಕಿ 'ರಾಮಾಯಣ' ಟ್ರೇಲರ್​ ಮುಂದೂಡಿಕೆ! ದಿಢೀರ್​ ನಿರ್ಧಾರದ ಅಸಲಿ ಸತ್ಯ ಬಿಚ್ಚಿಟ್ಟ ನಿರ್ಮಾಪಕ ಮಲೋತ್ರಾ! Ramayana Trailer Postponed

 ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಮುಂದೂಡಿಕೆ
ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಮುಂದೂಡಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಮುಂದೂಡಿಕೆ
  • ರಣಬೀರ್ ಕಪೂರ್ ಮತ್ತು ಯಶ್ ಸೋನಿ ಪಿಕ್ಚರ್ಸ್ ಜೊತೆ ನಡೆಸುತ್ತಿರುವ ಪ್ರಮುಖ ಮಾತುಕತೆಯಿಂದಾಗಿ ಈ ನಿರ್ಧಾರ
  • ಮುಂದೂಡಿಕೆಯ ಅಸಲಿ ಕಾರಣ ಬಿಚ್ಚಿಟ್ಟ ನಿರ್ಮಾಪಕ ನಮಿತ್ ಮಲ್ಹೋತ್ರಾ
ಮುಂಬೈ: ಇಂದು (ಶುಕ್ರವಾರ, ಜು.24) ಬೆಳಿಗ್ಗೆ 8 ಗಂಟೆಗೆ ಬಿಡುಗಡೆಯಾಗಬೇಕಿದ್ದ ಬಹು ನೀರಿಕ್ಷಿತ ಸಿನಿಮಾ ರಾಮಾಯಣದ ಟ್ರೇಲರ್​​ (Ramayana Trailer Postponed) ಅನ್ನು ಸಿನಿಮಾ ತಂಡ ಮುಂದೂಡಿದೆ.
ಸಿನಿಮಾ ತಂಡ ಈ ಮೊದಲು ತಿಳಿಸಿದ್ದ ಸಮಯಕ್ಕಿಂತ ಕೆಲ ಗಂಟೆಗಳ ಮೊದಲು ಸಿನಿಮಾ ತಂಡ ಹಾಗೂ ಅಂತಾರಾಷ್ಟ್ರೀಯ ಹಂಚಿಕೆದಾರರ ಜೊತೆ ಮಾತುಕತೆ ನಡೆಸುತ್ತಿರುವ ಹಿನ್ನಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಿನಿ ತಂಡ ತಿಳಿಸಿದೆ.

ಯಶ್​​-ರಣಬೀರ್​ ಮಾತುಕತೆ ನಡೆಸುತ್ತಿದ್ದಾರೆ!

ಟ್ರೇಲರ್​ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಸಿನಿಮಾ ನಿರ್ಮಾಪಕ ನಮಿತ್​ ಮಲೋತ್ರಾ ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಣಬೀರ್​ ಕಪೂರ್​ ಸೋನಿ ಪಿಕ್ಚರ್ಸ್ ಜೊತೆಗೆ ಮಾತುಕತೆ ನಡೆಸುತ್ತಿರುವ ಹಿನ್ನಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಬಿಡುಗಡೆ ದಿನಾಂಕವನ್ನು ತಿಳಿಸುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸಿನಿಮಾ ವಿಶ್ವಮಟ್ಟದಲ್ಲಿ ಮಿಂಚಬೇಕು!

ಭಾರದ ಸಿನಿಮಾದ ನೂರು ವರ್ಷಗಳ ಇತಿಹಾಸದಲ್ಲಿ ಈ ರೀತಿಯ ಸಿನಿಮಾ ಇಲ್ಲಿವರೆಗೆ ನಿರ್ಮಾಣವಾಗಿಲ್ಲ. ಹೀಗಾಗಿ ಈ ಸಿನಿಮಾವನ್ನು ಭಾರತಕ್ಕೆ ಮಾತ್ರವಲ್ಲ, ಪ್ರಪಂಚದ ಪ್ರತಿ ಮೂಲೆಗೆ ನಮ್ಮ ಮಣ್ಣಿನ ಕಥೆಯನ್ನು ಹೇಳಲು ನಾವು ಹೊರಟಿದ್ದೇವೆ. ಹೀಗಾಗಿ ಬಿಡುಗಡೆ ದಿನಾಂಕದಲ್ಲಿ ಸ್ವಲ್ಪ ವ್ಯತ್ಯಯವಾಗಿದೆ.
ನಮ್ಮ ದೇಶದ ಇತಿಹಾಸ, ಸಂಸ್ಕೃತಿಯನ್ನು ಈಗ ಪ್ರಪಂಚಕ್ಕೆ ಪರಿಚಯಿಸುವ ಸಮಯ ಕೂಡಿ ಬಂದಿದ್ದು, ಈ ಸಿನಿಮಾ ಭಾರತದ ಸಿನಿಮಾ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ಮಾಡಲಿದೆ ಎಂದು ನಿರ್ಮಾಪಕ ಮಲೋತ್ರಾ ಬರೆದುಕೊಂಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net