ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜವಾನ್ ನಟಿ: ಬಹುಕಾಲದ ಗೆಳೆಯ ರಾಗ್ ಸೇಠಿ ಕೈಹಿಡಿದ ಸಂಜೀತಾ ಭಟ್ಟಾಚಾರ್ಯ! Sanjeeta Bhattacharya Weds Raag Sethi
Sanjeeta Bhattacharya Weds Raag Sethi
Published on:
Copied
Follow Us
ಕಲ್ಕತ್ತಾ: ಶಾರುಖ್ ಖಾನ್ ಅಭಿನಯದ ಅಟ್ಲೀ ನಿರ್ದೇಶನದ ಜವಾನ್ ಸಿನಿಮಾದಲ್ಲಿ ಶಾರುಖ್ ಅವರ ಗರ್ಲ್ ಗ್ಯಾಂಗ್ನಲ್ಲಿ ಒಬ್ಬಳಾಗಿ, ಮುದ್ದಾದ ಗುಂಗುರು ಕೂದಲಿನಿಂದ ಪ್ರೇಕ್ಷಕರ ಮನ ಗೆದ್ದಿದ್ದ ಹೆಲೆನಾ ಅಲಿಯಾಸ್ ಸಂಜೀತಾ ಭಟ್ಟಾಚಾರ್ಯ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘಕಾಲದ ಗೆಳೆಯ ಹಾಗೂ ಸಂಗೀತ ನಿರ್ಮಾಪಕ ರಾಗ್ ಸೇಠಿ ಅವರೊಂದಿಗೆ ಸಂಜೀತಾ ಸಪ್ತಪದಿ (Sanjeeta Bhattacharya Weds Raag Sethi) ತುಳಿದಿದ್ದಾರೆ.
ಬೆಂಗಾಲಿ ವಧುವಾಗಿ ಸಂಜೀತಾ ಕಮಾಲ್!
ಜಿಂದಾ ಬಂದಾ ಹಾಡಿಗೆ ಜವಾನ್ ಹುಡುಗಿಯರ ಡ್ಯಾನ್ಸ್
ಸಂಜೀತಾ ಅವರ ಮದುವೆಯ ಸಂಭ್ರಮದಲ್ಲಿ ಜವಾನ್ ಚಿತ್ರದ ಅವರ ಸಹ ನಟಿಯರು ಭರ್ಜರಿ ಹಾಜರಿ ಹಾಕಿದ್ದರು. ಮದುವೆಗೂ ಮುನ್ನ ನಡೆದ ಸಂಗೀತ ಮತ್ತು ಮೆಹೆಂದಿ ಕಾರ್ಯಕ್ರಮದಲ್ಲಿ ಜವಾನ್ ತಂಡದ ಹುಡುಗಿಯರು ಶಾರುಖ್ ಖಾನ್ ಅವರ ಸೂಪರ್ ಹಿಟ್ ಜಿಂದಾ ಬಂದಾ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಜವಾನ್ ಗರ್ಲ್ಸ್ ರಾಕಿಂಗ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸಂಗೀತದ ಮೂಲಕ ಶುರುವಾದ ಪ್ರೇಮಕಥೆ
ಸಂಜೀತಾ ಅವರ ಪತಿ ರಾಗ್ ಸೇಠಿ ಅಹಮದಾಬಾದ್ ಮೂಲದ ಖ್ಯಾತ ಸಂಗೀತಗಾರ. ಕೆಲಸದ ನಿಮಿತ್ತ ಭೇಟಿಯಾದಾಗ ಈ ಜೋಡಿಯ ಪ್ರೇಮಕಥೆ ಶುರುವಾಗಿದೆ. ಪರಸ್ಪರ ಪರಿಚಯವಾಗಿ, ಪ್ರೀತಿಗೆ ಬಿದ್ದ ಈ ಜೋಡಿ ಕಳೆದ ವರ್ಷ ಉದಯಪುರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಗಸ್ಟ್ 2025 ರಲ್ಲಿ ಸಂಜೀತಾ ತಮ್ಮ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡು, ನಾವು ಲೆಗೊ ಪೀಸ್ಗಳಂತೆ ಒಬ್ಬರಿಗೊಬ್ಬರು ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತೇವೆ ಎಂದು ಬರೆದುಕೊಂಡಿದ್ದರು.
ಬಹುಮುಖ ಪ್ರತಿಭೆ ಸಂಜೀತಾ
ಸಂಜೀತಾ ಕೇವಲ ನಟಿ ಮಾತ್ರವಲ್ಲ, ಅವರು ಅದ್ಭುತ ಗಾಯಕಿ ಮತ್ತು ಸಾಹಿತ್ಯಗಾರ್ತಿ ಕೂಡ ಹೌದು. ಜವಾನ್ ಚಿತ್ರದ ಮೂಲಕ ಮನೆಮಾತಾದ ಅವರು, ಇತ್ತೀಚೆಗೆ ನೆಟ್ಫ್ಲಿಕ್ಸ್ನ ಅಕ್ಯೂಸ್ಡ್ ಸರಣಿಯಲ್ಲಿ ಕೊಂಕಣ ಸೇನ್ಶರ್ಮ ಅವರೊಂದಿಗೆ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ,(ಏಜನ್ಸೀಸ್).