'Ek Din'​ ರಿಲೀಸ್​ ಆಗಲು 39 ದಿನ ಬಾಕಿ ಇರುವಾಗ್ಲೇ ಟಿಕೆಟ್ ಬುಕಿಂಗ್​ ತೆರೆದ ಅಮೀರ್​ ಖಾನ್​; ಸ್ಟ್ರಾಟಜಿ ಬಗ್ಗೆ ಮಿಸ್ಟರ್​​ ಪರ್ಫೆಕ್ಟ್ ಹೇಳಿದ್ದಿಷ್ಟು!

 Ek Din Movie
Ek Din Movie
Published on

ಪ್ರಮುಖ ಮುಖ್ಯಾಂಶಗಳು

  • ಥಾಯ್​ನ ಒನ್​ ಡೇ ರಿಮೇಕ್​ ಈ ಏಕ್​ ದಿನ್ ಸಿನಿಮಾ
  • ಜುನೈದ್​ ಖಾನ್​ ನಟನೆಯ ಮೊದಲ ಸಿನಿಮಾ ಏಕ್​ ದಿನ್​
  • 39 ದಿನಕ್ಕೂ ಮೊದಲೇ ಟಿಕೆಟ್​ ಬುಕ್ಕಿಂಗ್​ ಆರಂಭಿಸಿದ್ದು ಈ ಕಾರಣಕ್ಕಂತೆ
Ek Din: ಸುನೀಲ್​ ಪಾಂಡೆ ನಿರ್ದೇಶನದ ಹಿಂದಿ ರೊಮ್ಯಾಂಟಿಕ್​ ಸಿನಿಮಾ ಏಕ್​ ದಿನ್​​​ ರೀಲೀಸ್​ಗಾಗಿ ಸಿನಿಮಾ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಮೀರ್​ ಖಾನ್ ಪುತ್ರ ಜುನೈದ್​ ಖಾನ್​ ಮತ್ತು ಸಾಯಿ ಪಲ್ಲವಿ ನಟನೆಯ ಮಿಂಚಿದ್ದಾರೆ. 2016ರ ಥಾಯ್​ನ ಒನ್​ ಡೇ ರಿಮೇಕ್​​​​ ಆಗಿದ್ದು, ಅಮೀರ್​​ ಖಾನ್​ರ ಪ್ರೊಡಕ್ಷನ್​ ನಿರ್ಮಿಸಿದ ಚಿತ್ರ ಇದಾಗಿದೆ.
 ಡಿನೋ ಪಾತ್ರದಲ್ಲಿ ಜುನೈದ್​ ಮತ್ತು ಮೀರಾ ಪಾತ್ರದಲ್ಲಿ  ಸಾಯಿಪಲ್ಲವಿ ಬಣ್ಣ ಹಚ್ಚಿದ್ದು, ಮೇ1ರಂದು ಈ ಸಿನಿಮಾ ರಿಲೀಸ್​ ಆಗಲಿದೆ. ಸದ್ಯ ಚರ್ಚಾಸ್ಪದಕ್ಕೆ ಕಾರಣವಾಗಿರುವ ವಿಚಾರ ಎಂದರೆ,  ಮಿಸ್ಟರ್​ ಪರ್ಫೆಕ್ಟ್​ ಅಮೀರ್​ಖಾನ್​ ಅವರು,  ಚಿತ್ರ ರಿಲೀಸ್​ ಆಗಲು 39 ದಿನ ಬಾಕಿ ಇರುವಾಗಕೇ ಟಿಕೆಟ್​ ಬುಕ್ಕಿಂಗ್​  ಆರಂಭಿಸಿರುವ ಬಗ್ಗೆ.

ಮಿಸ್ಟರ್​ ಪರ್ಫೆಕ್ಟ್​ ಹೇಳಿದ್ದಿಷ್ಟು..!

ಹೌದು, ಮಿಸ್ಟರ್​ ಪರ್ಫೆಕ್ಸ್ ಅಮೀರ್​ ಖಾನ್​ ಅವರು ತಮ್ಮ ಪರಿಕಲ್ಪನೆ ಬಗ್ಗೆ ಜಸ್ಟ್​ ಟೂ ಫಿಲ್ಮಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಹೊಸ ಮುಖಗಳನ್ನು ಪರಿಚಯಿಸಲಾಗಿದೆ. ಈ ಸಿನಿಮಾದ ಮೂಲಕ  ಜುನೈದ್ ಖಾನ್​​ ಏಕ್​ ದಿನ್​ ಮೂಲಕ ಸಿನಿಮಾ ರಂಗ ಪ್ರವೇಶಿಸುತ್ತಿದ್ದರೆ, ಸಾಯಿಪಲ್ಲವಿ ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಇಬ್ಬರು ಹೊಸಬರೇ ಎಂದು ಅಮೀರ್​ ಹೇಳಿದ್ದಾರೆ.
ಮುಂದುವರೆದು, ಏಕ್​ ದಿನ್​ ಸಿನಿಮಾ ರಿಲೀಸ್​ ಆಗುವ 39 ದಿನದ ಮೊದಲೇ ಟಿಕೆಟ್​ ಬುಕ್ಕಿಂಗ್​ಗೆ ಅವಕಾಶ ಕೊಟ್ಟಿದ್ದಾರೆ. ಇದು "ಸೈಕಲಾಜಿಕಲ್ ರಿಲೀಸ್ ಸ್ಟ್ರಾಟಜಿ" ಬಳಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದರೆ, ಸಿನಿಮಾ ಬಿಡುಗಡೆಗೂ ಮುನ್ನವೇ ಜನರ ಕುತೂಹಲ ಹೇಗಿದೆ. ಯಾವ ರೀತಿ ರಿಯಾಕ್ಷನ್ಸ್​ ಇದೆ. ಎಷ್ಟು ಟಿಕೆಟ್​ ಬುಕ್​ ಆಗ್ತಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಉದ್ದೇಶವಾಗಿದೆ. 

520ಕ್ಕೂ ಹೆಚ್ಚು ಟಿಕೆಟ್ ಮಾರಾಟ

ಇದು ಕೇವಲ ಟಿಕೆಟ್​ ಮಾರಾಟ ಮಾಡುವ ವಿಚಾರವಲ್ಲ ಬದಲಿಗೆ ಸಿನಿಮಾ ಬಗ್ಗೆ ಚರ್ಚೆಗಳನ್ನು ಹುಟ್ಟು ಹಾಕುವ ತಂತ್ರವಾಗಿದೆ. ಈಗಾಗಲೇ ದೇಶದಾದ್ಯಂತ 520ಕ್ಕೂ ಹೆಚ್ಚು ಟಿಕೆಟ್​ ಮಾರಾಟವಾಗಿದೆ. ಇದು ಸಿನಿಮಾಕ್ಕೆ ಒಂದೊಳ್ಳೆ ರೆಸ್ಪಾನ್ಸ್​ ಸಿಕ್ಕಂತೆ ಎಂದು ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net