ಸಿನಿಮಾ ರಿಲೀಸ್ ಮುನ್ನವೇ ಬಾಕ್ಸ್ ಆಫೀಸ್ ಧೂಳಿಪಟ: ಧುರಂಧರ್ 2 ಅಡ್ವಾನ್ಸ್ ಬುಕ್ಕಿಂಗ್ ಕಂಡು ಬೆಚ್ಚಿಬಿದ್ದ ಬಾಲಿವುಡ್! Dhurandhar 2
ಭಾರತದ ಬಹು ನಿರೀಕ್ಷಿತ ಸಿನಿಮಾ ಧುರಂಧರ್ 2 (Dhurandhar 2)
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಭಾರತದ ಬಹು ನಿರೀಕ್ಷಿತ ಸಿನಿಮಾ ಧುರಂಧರ್ 2
ಬಿಡುಗಡೆ ಮುನ್ನವೇ 18 ಕೋಟಿ ರೂಪಾಯಿ ಟಿಕೆಟ್ ಮಾರಿದ ಸಿನಿಮಾ
ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನ ಸಿನಿಮಾ ಧುರಂಧರ್ 2
ಬಾಲಿವುಡ್: ಭಾರತದಾದ್ಯಂತ ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು ಧುರಂಧರ್ 2 (Dhurandhar 2). ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ಹಾಗೂ ಅದಿತ್ಯ ಧರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ. ಆದರೆ ಈ ಚಿತ್ರ ಬಿಡಗಡೆ ಮೊದಲೇ ಸಿನಿಮಾ ನೋಡಲು 18 ಕೋಟಿ ರೂಪಾಯಿ ಮುಂಗಡ ಬುಕ್ಕಿಂಗ್ ಆಗಿದೆ ಎಂದು ತಿಳಿದುಬಂದಿದೆ.
ಅಮೆರಿಕದಲ್ಲೇ ಅತಿ ಹೆಚ್ಚು ಬುಕ್ಕಿಂಗ್!
ಧುರಂಧರ್ ಹವಾ ಕೇವಲ ಭಾರತಕ್ಕೆ ಸೀಮಿತವಾಗಿರದೆ, ಪ್ರಪಂಚದಾದ್ಯಂತ ಕ್ರೆಜ್ ಹೆಚ್ಚುತ್ತಿದ್ದು, ಅಮೆರಿಕದಲ್ಲಿ ಪ್ರೀಮಿಯರ್ ಶೋ ನೋಡಲು ಸುಮಾರು 6,18,911 ಡಾಲರ್ ಅಂದರೆ ಸರಿ ಸುಮಾರು 5 ಕೋಟಿ ರೂಪಾಯಿಗಳ ಟಿಕೆಟ್ ಮಾರಾಟವಾಗಿದೆ. ಅಮೆರಿಕಸ ಒಟ್ಟು 557 ಸ್ಥಳಗಳಲ್ಲಿ ಸುಮಾರು 1036 ಶೋಗಳನ್ನು ನೋಡಲು ಈ ಬುಕ್ಕಿಂಗ್ ನಡೆದಿದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಹೆಚ್ಚಾದ ಧುರಂಧರ್ ಕ್ರೇಜ್
ಭಾರತದಲ್ಲಿ ಸಹ ಧುರಂಧರ್ ಜ್ವರ ನೆತ್ತಿಗೇರುತ್ತಿದ್ದು, ಮಾ.18 ನಡೆಯಲಿರುವ ಪೇಯ್ಡ್ ಶೋ ನೋಡಲು ಇಲ್ಲಿವರೆಗೆ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಟಿಕೆಟ್ಗಳು ಮಾರಾಟವಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಮುಂಗಡ ಬುಕ್ಕಿಂಗ್ ರೆಕಾರ್ಡ್ ಮುರಿದ ಧುರಂಧರ್ 2
ಭಾರತದ ಸಿನಿಮಾ ಇತಿಹಾಸದಲ್ಲಿ ಪೂರ್ವವೀಕ್ಷಣೆ ಪ್ರದರ್ಶನ (Preview Shows) ಕ್ಕಾಗಿ ಅತೀ ಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆ ಸ್ರ್ತೀ 2 ಸಿನಿಮಾದಾಗಿತ್ತು. ಈ ಸಿನಿಮಾವು ಸುಮಾರು 10 ಕೋಟಿ ಮೌಲ್ಯದ ಪೂರ್ವವೀಕ್ಷಣೆ ಪ್ರದರ್ಶನ ಟಿಕೆಟ್ಗಳನ್ನು ಮಾರಾಟ ಮಾಡಿತ್ತು. ಅದರೆ ಈದೀಗ ಸುಮಾರು 18 ಕೋಟಿ ಮೌಲ್ಯದ ಟಿಕೆಟ್ಗಳನ್ನು ಮಾರಾಟ ಮಾಡುವ ಮೂಲಕ ಈ ದಾಖಲೆಯನ್ನು ಧುರಂಧರ್ 2 ಪುಡಿಪುಡಿ ಮಾಡಿದೆ.
ಧುರಂಧರ್ ಇದೊಂದು ಸ್ಪೈ-ತ್ರಿಲ್ಲರ್ ಸಿನಿಮಾವಾಗಿದ್ದು, ಪಾಕಿಸ್ತಾನದಲ್ಲಿ ಭಾರತೀಯ ಗೂಢಚರ ಹೇಗೆ ಕೆಲಸ ಮಾಡುತ್ತಾನೆ ಎನ್ನುವುದೇ ಈ ಸಿನಿಮಾದ ಕಥಾ ವಸ್ತುವಾಗಿದೆ. ಈ ಸಿನಿಮಾದ ಮೊದಲ ಭಾಗವು 2025 ರ ಡಿಸೆಂಬರ್ನಲ್ಲಿ ತೆರೆಕಂಡು ಸುಮಾರು 1,000 ಕೋಟಿ ಕಲೆಕ್ಷನ್ ಮಾಡಿತ್ತು.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಅಕ್ಷನ್ ಖನ್ನಾ,ಆರ್.ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್ತ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಉರಿ ಖ್ಯಾತಿಯ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ,(ಏಜನ್ಸೀಸ್).