Google Pay and PhonePe : ಭಾರತದಲ್ಲಿ ಯುಪಿಐ (UPI) ವ್ಯವಸ್ಥೆಯು ಆರಂಭದಲ್ಲಿ ಗೂಗಲ್ ಪೇ (Google Pay) ಹೆಸರಿನೊಂದಿಗೆ ಎಷ್ಟು ಜನಪ್ರಿಯವಾಯಿತೆಂದರೆ, ಸಾಮಾನ್ಯ ಜನರಿಗೆ ಹಣ ವರ್ಗಾವಣೆ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದೆಂದರೆ ಅದು ಗೂಗಲ್ ಪೇ ಎಂದೇ ಅರ್ಥವಾಗಿಬಿಟ್ಟಿತ್ತು. ಆ ಬಳಿಕ ಫೋನ್ ಪೇ (PhonePe) ಸಹ ಈ ರಂಗಕ್ಕೆ ಲಗ್ಗೆ ಇಟ್ಟು, ಇವೆರಡೂ ಕಂಪನಿಗಳು ಒಟ್ಟಾಗಿ ದೇಶದ ಒಟ್ಟು ಯುಪಿಐ ವಹಿವಾಟಿನ ಶೇ. 95 ರಷ್ಟನ್ನು ನಿಯಂತ್ರಿಸುವ ಮೂಲಕ ಸಂಪೂರ್ಣ ಏಕಸ್ವಾಮ್ಯ ಸಾಧಿಸಿದ್ದವು. ಆದರೆ, ಮಾರುಕಟ್ಟೆಯಲ್ಲಿ ಕೇವಲ ಒಂದೆರಡು ಸಂಸ್ಥೆಗಳ ಆಧಿಪತ್ಯವನ್ನು ತಡೆಯಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜಾರಿಗೆ ತರಲು ಉದ್ದೇಶಿಸಿರುವ ಶೇ. 30 ರ ಮಾರುಕಟ್ಟೆ ಮಿತಿ ನಿಯಮ ಮತ್ತು ನವಿ, ಸೂಪರ್.ಮನಿ ಹಾಗೂ ವಾಟ್ಸ್ಆ್ಯಪ್ ಪೇ ನಂತಹ ಹೊಸ ಮತ್ತು ಸಣ್ಣ ಸಂಸ್ಥೆಗಳ ತೀವ್ರ ಪೈಪೋಟಿಯಿಂದಾಗಿ ಈ ದೈತ್ಯ ಕಂಪನಿಗಳ ಹಾದಿ ಈಗ ಸುಲಭವಾಗಿ ಉಳಿದಿಲ್ಲ.