ಇದು ಅವರ ಛಲಕ್ಕೆ ಸಿಕ್ಕ ಪ್ರತಿಫಲ.. ಮಂಧಾನ ಮಾನಸಿಕ ಹೋರಾಟಕ್ಕೆ ಸಲಾಂ ಎಂದ ಶ್ರೇಯಾಂಕಾ ಪಾಟೀಲ್ | Shreyanka Patil
Shreyanka Patil | ಆರ್ಸಿಬಿ ಸ್ಪಿನ್ನರ್ ಶ್ರೇಯಾಂಕ ಪಾಟೀಲ್
Published on:
Copied
Follow Us
Shreyanka Patil: ವಡೋದರಾದಲ್ಲಿ ಗುರುವಾರ (ಫೆ-06) ನಡೆದ 2026ರ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (WPL) ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ ನೇತೃತ್ವದ ಆರ್ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಚಾಂಪಿಯನ್ ಪಟ್ಟ ತನ್ನಲ್ಲೇ ಉಳಿಸಿಕೊಂಡಿದೆ.
ಈ ಐತಿಹಾಸಿಕ ಗೆಲುವಿನ ಹಿಂದೆ ಕೇವಲ ಆಟದ ಕೌಶಲ್ಯ ಮಾತ್ರವಲ್ಲದೆ, ಭಾವನಾತ್ಮಕ ಹೋರಾಟವು ಇದೆ, ನಾಯಕತ್ವದ ಶಕ್ತಿಯೂ ಅಡಗಿದೆ. ಫೈನಲ್ ಪಂದ್ಯದ ಬಳಿಕ ಮಾತನಾಡಿದ ಸ್ಪಿನ್ನರ್ ಶ್ರೇಯಾಂಕ ಪಾಟೀಲ್, ನಾಯಕಿ ಸ್ಮೃತಿ ಮಂಧಾನಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.
ಈ ಪ್ರಶಸ್ತಿಯನ್ನು ತಮ್ಮ ನಾಯಕಿ ಸ್ಮೃತಿ ಮಂಧಾನಗೆ ಅರ್ಪಿಸಿದ ಶ್ರೇಯಾಂಕಾ, ಕಳೆದ ಕೆಲವು ತಿಂಗಳುಗಳಿಂದ ಸ್ಮೃತಿ ಎದುರಿಸಿದ ವೈಯಕ್ತಿಕ ಜೀವನದ ಏರಿಳಿತಗಳನ್ನು ಉಲ್ಲೇಖಿಸಿದರು.
ಸ್ಮೃತಿ ಕಳೆದ ಕೆಲವು ಸಮಯದಿಂದ ಮಾನಸಿಕವಾಗಿ ತುಂಬಾ ನೋವು ಅನುಭವಿಸುತ್ತಿದ್ದರು. ಆದರೆ ಅದನ್ನು ತಂಡದ ಮೇಲೆ ಪ್ರಭಾವ ಬೀರಲು ಬಿಡದೆ ಮುನ್ನುಗ್ಗಿದರು. ಅದು ತಂಡದ ಮೇಲೆ ಸಕಾರಾತ್ಮಕ ಬೀರಿತು. ಈ ಗೆಲುವು ಅವರ ಹಠ ಮತ್ತು ಛಲಕ್ಕೆ ಸಂದ ಜಯ ಎಂದು ಶ್ರೇಯಾಂಕಾ ಪಾಟೀಲ ಹೇಳಿದರು.
ಶ್ರೇಯಾಂಕಾ ಪ್ರದರ್ಶನ
ವಡೋದರಾದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಲಿಷ್ಠ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿಯುವಲ್ಲಿ ಶ್ರೇಯಾಂಕ ಪಾಟೀಲ್ ಸ್ಪಿನ್ ದಾಳಿ ಪ್ರಮುಖ ಪಾತ್ರ ವಹಿಸಿತು. ನಿರ್ಣಾಯಕ ಹಂತದಲ್ಲಿ ವಿಕೆಟ್ ಪಡೆಯುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು.
ಶ್ರೇಯಾಂಕಾ ಪಂದ್ಯದ ಬಳಿಕ ಕಣ್ಣೀರು ಹಾಕುತ್ತಾ ಸ್ಮೃತಿ ಅವರನ್ನು ಅಪ್ಪಿಕೊಂಡಿದ್ದು, ಇಬ್ಬರ ನಡುವಿನ ಬಾಂಧವ್ಯ ಮತ್ತು ನಾಯಕಿಯ ಮೇಲಿರುವ ಗೌರವವನ್ನು ಎತ್ತಿ ತೋರಿಸಿತು. ಒಂಬತ್ತು ಇನ್ನಿಂಗ್ಸ್ಗಳಲ್ಲಿ 11 ವಿಕೆಟ್ಗಳೊಂದಿಗೆ 2026 ರ ಅಭಿಯಾನವನ್ನು ಮುಗಿಸಿದರು(ಏಜೆನ್ಸೀಸ್).