ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಮೊಹಮ್ಮದ್ ಯೂಸುಫ್, "15 ವರ್ಷದ ಕ್ರಿಕೆಟ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ನನಗೆ ಯುವ ದಿನಗಳ ಶಾಹಿದ್ ಅಫ್ರಿದಿಯನ್ನು ನೆನಪಿಸುತ್ತಿದ್ದಾನೆ. ಆತನಲ್ಲಿ ಯಾವುದೇ ಭಯವಿಲ್ಲ, ಆಟ ಅತ್ಯಂತ ವಿನಾಶಕಾರಿಯಾಗಿದೆ ಮತ್ತು ಆತ ಅಪಾರ ಸಾಮರ್ಥ್ಯದಿಂದ ತುಂಬಿದ್ದಾನೆ. ಕ್ರಿಕೆಟ್ನ ಭವಿಷ್ಯ ಇಲ್ಲಿದೆ!" ಎಂದು ಬರೆದುಕೊಂಡಿದ್ದಾರೆ. ಯೂಸುಫ್ ಅವರ ಈ ಪೋಸ್ಟ್ ನೋಡಿದ ಕ್ರಿಕೆಟ್ ಅಭಿಮಾನಿಗಳು "ಇದೊಂದು ಹುಚ್ಚು ಹೋಲಿಕೆ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.