ಆರ್‌ಆರ್ ತಂಡ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತ ನೈಟ್ ರೈಡರ್ಸ್ ತಂಡ, 19.4 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 156 ರನ್‌ಗಳ ಗುರಿಯನ್ನು ತಲುಪಿತು. ಕೆಕೆಆರ್ ಪರ ರಿಂಕು ಸಿಂಗ್ (ಅಜೇಯ 53 ರನ್, 34 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕ ಗಳಿಸಿದರು. ರಿಂಕು ಬಿಟ್ಟರೆ, ಅನುಕುಲ್ ರಾಯ್ (ಅಜೇಯ 29) ಮತ್ತು ಕ್ಯಾಮರೂನ್ ಗ್ರೀನ್ (27) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ರಾಜಸ್ಥಾನ ರಾಯಲ್ಸ್ ಪರ ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ಯಶ್ ರಾಜ್ ಮತ್ತು ರವಿ ಬಿಷ್ಣೋಯ್ ತಲಾ ಒಂದು ವಿಕೆಟ್ ಪಡೆದರು.