ಬಿಸಿಸಿಐನಿಂದ ಬಂತು ನೋಟಿಸ್​... ಕದ್ದು ನೋಡಿ RR​ ತಂಡದ ಮ್ಯಾನೇಜರ್​ಗೆ ಸಂಕಷ್ಟ ತಂದಿಟ್ಟ ವೈಭವ್​! Vaibhav Sooryavanshi

ಬಿಸಿಸಿಐನಿಂದ ಬಂತು ನೋಟಿಸ್​... ಕದ್ದು ನೋಡಿ RR​ ತಂಡದ ಮ್ಯಾನೇಜರ್​ಗೆ ಸಂಕಷ್ಟ ತಂದಿಟ್ಟ ವೈಭವ್​! Vaibhav Sooryavanshi
ಬಿಸಿಸಿಐನಿಂದ ಬಂತು ನೋಟಿಸ್​... ಕದ್ದು ನೋಡಿ RR​ ತಂಡದ ಮ್ಯಾನೇಜರ್​ಗೆ ಸಂಕಷ್ಟ ತಂದಿಟ್ಟ ವೈಭವ್​! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಬಿಸಿಸಿಐ ಅಂಗಳ ತಲುಪಿದ ರಾಜಸ್ಥಾನ ರಾಯಲ್ಸ್​ ತಂಡದ ಮ್ಯಾನೇಜರ್​ ರೋಮಿ ಭಿಂದರ್​ ಫೋನ್​ ಬಳಕೆ ವಿವಾದ
  • ನಿಯಮ ಉಲ್ಲಂಘಿಸಿದ ರೋಮಿ ಭಿಂದರ್​ಗೆ 48 ಗಂಟೆಗಳೊಳಗೆ ಉತ್ತರಿಸುವಂತೆ ಬಿಸಿಸಿಐ ನೋಟಿಸ್
  • ಭಿಂದರ್ ಯಾವುದೇ ಕರೆ ಮಾಡಿಲ್ಲ, ಕೇವಲ ಫೋನ್ ಸ್ಕ್ರೋಲ್ ಮಾಡುತ್ತಿದ್ದರು ಎಂದು ಆರ್​ಆರ್​ ತಂಡದ ಸ್ಪಷ್ಟನೆ
  • ವೈರಲ್​ ವಿಡಿಯೋ ನೋಡಿ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಅವರಿಂದ ಭಿಂದರ್​ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
Vaibhav Sooryavanshi : ಆರ್‌ಸಿಬಿ ವಿರುದ್ಧದ ಹೈವೋಲ್ಟೇಜ್ ಪಂದ್ಯದ ವೇಳೆ ಡಗೌಟ್‌ನಲ್ಲಿ ಕುಳಿತು ಮೊಬೈಲ್ ಬಳಸುವ ಮೂಲಕ ಆಂಟಿ-ಕರಪ್ಷನ್ ಪ್ರೋಟೋಕಾಲ್ (ಭ್ರಷ್ಟಾಚಾರ ವಿರೋಧಿ ನಿಯಮ) ಉಲ್ಲಂಘಿಸಿದ ಆರೋಪದ ಮೇಲೆ ರಾಜಸ್ಥಾನ ರಾಯಲ್ಸ್ ( RR ) ತಂಡದ ಮ್ಯಾನೇಜರ್ ರೋಮಿ ಭಿಂದರ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಯುವ ಆಟಗಾರ ವೈಭವ್ ಸೂರ್ಯವಂಶಿ ಪಕ್ಕದಲ್ಲೇ ಕುಳಿತು ಫೋನ್ ಬಳಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾಜಿ ಐಪಿಎಲ್ ಚೇರ್ಮನ್ ಲಲಿತ್ ಮೋದಿ ಕೂಡ ಈ ಬಗ್ಗೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಗಂಭೀರ ಲೋಪದ ಬಗ್ಗೆ ಈಗ ಬಿಸಿಸಿಐ ತನಿಖೆಯ ಮೊದಲ ಹೆಜ್ಜೆಯನ್ನು ಇಟ್ಟಿದ್ದು, ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ನ್ಯೂ ಇಂಡಿಯನ್​ ಎಕ್ಸ್​ಪ್ರೆಸ್​ ವರದಿಯ ಪ್ರಕಾರ, ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ACSU) ಭಿಂದರ್ ಅವರಿಗೆ ನೋಟಿಸ್ ಕಳುಹಿಸಿದೆ. ತನಿಖೆಯ ಭಾಗವಾಗಿ ಮುಂದಿನ 48 ಗಂಟೆಗಳ ಗಡುವು ನೀಡಿದ್ದು, ಡಗೌಟ್​ನಲ್ಲಿ ಕುಳಿತು ಫೋನ್ ಬಳಸಿದ್ದಕ್ಕೆ ಸೂಕ್ತ​ ಉತ್ತರ ನೀಡುವಂತೆ ಕೋರಿದೆ. ಈ ಬಗ್ಗೆ ಮಾತನಾಡಿರುವ ಐಪಿಎಲ್​ ಆಡಳಿತ ಮಂಡಳಿಯ ಅಧ್ಯಕ್ಷ ಅರುಣ್​ ಧುಮಾಲ್​, ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಾವು ACSU ಗೆ ಕೇಳಿದ್ದೇವೆ ಎಂದು ಹೇಳಿದ್ದಾರೆ.
ಇನ್ನೂ ಭಿಂದರ್ ಅವರು ಫೋನ್ ಬಳಸಲು ಅವರಿಗಿರುವ ಆರೋಗ್ಯ ಸಮಸ್ಯೆಯೇ ಕಾರಣ ಎನ್ನಲಾಗಿದೆ. ಆರ್‌ಆರ್ ತಂಡದ ವ್ಯವಸ್ಥಾಪಕರಾಗಿರುವ ಭಿಂದರ್​, ಈ ಹಿಂದೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು ಎಂದು ವರದಿಯಾಗಿದೆ. ಶ್ವಾಸಕೋಶದ ಸಮಸ್ಯೆಯಿಂದಾಗಿ ಅವರನ್ನು ದೀರ್ಘಕಾಲದವರೆಗೆ ನಾಗ್ಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಕಾರಣಗಳಿಂದಾಗಿ ಭಿಂದರ್ ತನ್ನ ಫೋನ್ ಅನ್ನು ಡಗೌಟ್‌ಗೆ ಕೊಂಡೊಯ್ಯಲು ಅನುಮತಿಸಲಾಗಿದೆ. ಆದರೆ, ಅಲ್ಲಿ ಕುಳಿತಿರುವಾಗ ತನ್ನ ಫೋನ್ ಬಳಸಲು ಅಗತ್ಯವಿರುವ ವಿನಾಯಿತಿಯನ್ನು ಅವರಿಗೆ ನೀಡಿರಲಿಲ್ಲ. ಹೀಗಾಗಿ, ಮೊಬೈಲ್​ ಬಳಸಿದ್ದರಿಂದ ಭಿಂದರ್​ ಅವರಿಗೆ ಸಂಕಷ್ಟು ಎದುರಾಗಿದೆ.
ಆರೋಗ್ಯ ಸಮಸ್ಯೆಗಳಿಂದಾಗಿ ಭಿಂದರ್​ ಅವರು 10 ಕೆಜಿಗಿಂತ ಹೆಚ್ಚು ತೂಕ ಇಳಿಸಿಕೊಂಡಿದ್ದಾರೆ. ಅವರಿಗೆ ಆಸ್ತಮಾ ಕೂಡ ಇದೆ. ಆದ್ದರಿಂದ ಅವರು ಹೆಚ್ಚು ದೂರ ನಡೆಯಬಾರದು ಅಥವಾ ಆಗಾಗ ಮೆಟ್ಟಿಲುಗಳನ್ನು ಹತ್ತಬಾರದು ಎಂದು ವೈದ್ಯರು ಸೂಚಿಸಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಭಿಂದರ್​ ತಮ್ಮ ತಂಡದಲ್ಲಿ ಸಕ್ರಿಯರಾಗಿದ್ದಾರೆ. ಅವರು ತಮ್ಮ ಫ್ರಾಂಚೈಸಿಗಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾರೆ. ಆದ್ದರಿಂದ, ಭಿಂದರ್​ ಆರ್​ಆರ್​ ತಂಡಕ್ಕೆ ತುಂಬಾ ಮುಖ್ಯ. ಅವರಿಗೆ ಐಪಿಎಲ್​ನ ನಿಯಮಗಳು ಚೆನ್ನಾಗಿ ತಿಳಿದಿವೆ. ವೈದ್ಯಕೀಯ ಕಾರಣಗಳಿಂದಾಗಿ ಮಾತ್ರ ಫೋನ್ ಅವರ ಬಳಿ ಇತ್ತು. ಇದಲ್ಲದೆ, ಶಿಷ್ಟಾಚಾರದ ಪ್ರಕಾರ ಡಗೌಟ್‌ನಲ್ಲಿ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಹೊಂದಲು ಅನುಮತಿಸಲಾಗಿದೆ. ಆದರೆ, ಬಳಕೆ ಮಾಡುವಂತಿಲ್ಲ. ಇಲ್ಲಿ ಭಿಂದರ್​ ಬಳಕೆ ಮಾಡಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಮುಖ್ಯವಾಗಿ ಇಲ್ಲಿ ಭಿಂದರ್​ ಅವರು ಕಾಲ್​ ಮಾಡುವುದಾಗಲಿ ಅಥವಾ ಕಾಲ್​ ರಿಸೀವ್​ ಮಾಡುವುದಾಗಲಿ ಮಾಡುತ್ತಿರಲಿಲ್ಲ. ಅವರು ತಮ್ಮ ಫೋನ್ ಅನ್ನು ಸ್ಕ್ರೋಲ್ ಮಾಡುತ್ತಿದ್ದರು. ಸದ್ಯ ಅವರಿಗೆ ಉತ್ತರ ನೀಡಲು ಸಮಯವಿದ್ದು, ACSU ಅಧಿಕಾರಿಗಳಿಗೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಆರ್​ಆರ್​ ತಂಡಗಳ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ACSU ಅಧಿಕಾರಿಗಳು ರೋಮಿಯ ವೈದ್ಯಕೀಯ ಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಸೂಕ್ತ ತೀರ್ಮಾನಕ್ಕೆ ಬರುತ್ತಾರೆಂದು ನಾವು ಭಾವಿಸುತ್ತೇವೆ. ಸಮಸ್ಯೆ ಏನೆಂದರೆ, ಡ್ರೆಸ್ಸಿಂಗ್ ಕೋಣೆಯನ್ನು ತಲುಪಲು ಡಗೌಟ್​ನಿಂದ ಸಾಕಷ್ಟು ಮೆಟ್ಟಿಲಗಳನ್ನು ಹತ್ತಬೇಕಿತ್ತು. ಆದರೆ, ಆರೋಗ್ಯ ಸಮಸ್ಯೆ ಕಾರಣ ಭಿಂದರ್​ ಅವರು ಡಗೌಟ್​ನಲ್ಲೇ ಈ ರೀತಿ ಮಾಡಿರಬಹುದು. ಅವರ ವೈದ್ಯಕೀಯ ಸ್ಥಿತಿಯನ್ನು ಅರಿತು ACSU ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಭಾವಿಸಿದ್ದೇವೆ ಎಂದು ಆರ್​ಆರ್​ ತಂಡ ಹೇಳಿರುವುದಾಗಿ ವರದಿಯಾಗಿದೆ.

ವೈಭವ್​ರಿಂದ ಸಿಕ್ಕಿಬಿದ್ದ ಭಿಂದರ್​

ವಾಸ್ತವವಾಗಿ ಭಿಂದರ್​ ಅವರು ಕ್ಯಾಮೆರಾ ಕಣ್ಣಿಗೆ ಬೀಳುತ್ತಿರಲಿಲ್ಲ. ತಮ್ಮ ಪಕ್ಕದಲ್ಲಿ ವೈಭವ್​ ಇದ್ದಿದ್ದರಿಂದ ಭಿಂದರ್​ ಸಿಕ್ಕಿಹಾಕಿಕೊಂಡರು. ಪ್ರಸ್ತುತ ವೈಭವ್​ ಐಪಿಎಲ್​ನಲ್ಲಿ ತಮ್ಮ ಬಿರುಗಾಳಿ ಇನ್ನಿಂಗ್ಸ್​ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೇವಲ 15 ವರ್ಷದ ಬಾಲಕ ಪ್ರತಿ ಪಂದ್ಯದಲ್ಲೂ ಅಬ್ಬರಿಸಿ, ಬೊಬ್ಬಿರಿಯುತ್ತಿದ್ದಾನೆ. ವಿಶ್ವ ದರ್ಜೆಯ ಬೌಲರ್​ಗಳಿಗೆ ಬೆವರಿಳಿಸುತ್ತಿದ್ದಾನೆ. ಹೀಗಾಗಿ, ಆರ್​ಆರ್​ ತಂಡದ ಪಂದ್ಯವಿದ್ದಾಗಲೆಲ್ಲ ಕ್ಯಾಮೆರಾಮೆನ್​ ವೈಭವ್​ ಅವರನ್ನು ಹೆಚ್ಚು ಫೋಕಸ್​ ಮಾಡುತ್ತಾರೆ. ಆರ್​ಸಿಬಿ ವಿರುದ್ಧದ ಪಂದ್ಯದಲ್ಲೂ ಕ್ಯಾಮೆರಾಮೆನ್​ ವೈಭವ್​ ಅವರನ್ನು ಸಾಕಷ್ಟು ಬಾರಿ ಸರೆಹಿಡಿದರು. ಈ ವೇಳೆ ಭಿಂದರ್​ ಫೋನ್​ ಬಳಸುವುದು ಕೂಡ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆದ ಬಳಿಕ ಸಾಕಷ್ಟು ಮಂದಿ ಡಗೌಟ್​ನಲ್ಲಿ ಫೋನ್​ ಬಳಸಬಹುದೇ? ಇದು ನಿಯಮ ಉಲ್ಲಂಘನೆ ಅಲ್ಲವೇ? ಎಂದು ಪ್ರಶ್ನೆ ಎತ್ತಿದರು. ಹೀಗಾಗಿ, ಇದೀಗ ಬಿಸಿಸಿಐ ನೋಟಿಸ್​ ನೀಡಿದೆ. ಇದಕ್ಕೆ ಭಿಂದರ್​ ಯಾವ ಉತ್ತರ ನೀಡುತ್ತಾರೆಂದು ಕಾದು ನೋಡಬೇಕಾಗಿದೆ.
ಬಿಸಿಸಿಐ ನಿಯಮಗಳೇನು?
* ಮೊಬೈಲ್ ಫೋನ್‌ಗಳು ಮತ್ತು ಸಂವಹನ ಸಾಧನಗಳನ್ನು ಡಗೌಟ್‌ನಲ್ಲಿ ಅನುಮತಿಸಲಾಗುವುದಿಲ್ಲ’

* ತಂಡದ ವ್ಯವಸ್ಥಾಪಕರು ಫೋನ್ ಅನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ ಮಾತ್ರ ಬಳಸಬಹುದು ಮತ್ತು ಡಗೌಟ್‌ನಲ್ಲಿ ಅಲ್ಲ

* ವಿಶ್ಲೇಷಕರು ಕಂಪ್ಯೂಟರ್‌ಗಳನ್ನು ಬಳಸಬಹುದು, ಆದರೆ ವಿಶೇಷವಾಗಿ ಗೊತ್ತುಪಡಿಸಿದ ವಿಶ್ಲೇಷಕ ಟೇಬಲ್‌ನಲ್ಲಿ ಮಾತ್ರ

* ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕ್ರೀಡಾಂಗಣಕ್ಕೆ ಪ್ರವೇಶಿಸಿದ ತಕ್ಷಣ ತಮ್ಮ ಸಾಧನಗಳನ್ನು ಆಫ್ ಮಾಡಿ ಸುರಕ್ಷಿತವಾಗಿ ಇಡಬೇಕು

* ಪರಿಚಾರಕರು ಮತ್ತು ಅಡುಗೆ ಕೆಲಸಗಾರರಂತಹ ಸಿಬ್ಬಂದಿಗಳು ಸಂವಹನ ಸಾಧನಗಳನ್ನು ತರಲು ಸಹ ಅನುಮತಿಸಲಾಗುವುದಿಲ್ಲ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net