ಆತನೇ ನಮ್ಮ ಸೋಲಿಗೆ ಕಾರಣ! ಆರ್​ಆರ್​ ಎದುರು ಹೀನಾಯ ಸೋಲುಂಡ ಬೆನ್ನಲ್ಲೇ ರಜತ್ ಪಾಟಿದಾರ್ ಅಚ್ಚರಿ ಹೇಳಿಕೆ | RR vs RCB

ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್​
ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್​
Published on

ಪ್ರಮುಖ ಮುಖ್ಯಾಂಶಗಳು

  • ಈ ಸೀಸನ್​ನಲ್ಲಿ ಸೋಲಿನ ರುಚಿ ನೋಡಿದ ಆರ್​ಸಿಬಿ
  • ರಾಜಸ್ಥಾನ ರಾಯಲ್ಸ್ ಎದುರು 6 ವಿಕೆಟ್‌ಗಳಿಂದ ಸೋಲು
  • ಎರಡು ಪಂದ್ಯಗಳನ್ನು ಗೆದ್ದು ಬೀಗಿದ್ದ ಆರ್​ಸಿಬಿಯ ಸೋಲಿಗೆ ಆತನೇ ಕಾರಣ ಎಂದ ಕ್ಯಾಪ್ಟನ್ ರಜತ್ ಪಾಟಿದಾರ್​
RR vs RCB: ನಿನ್ನೆ (ಏ.10) ಅಸ್ಸಾಂನ ಗುವಾಹಟಿಯಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಐಪಿಎಲ್​ 19ನೇ ಪಂದ್ಯದಲ್ಲಿ ಆರ್​ಸಿಬಿ ಮೊದಲ ಸೋಲು ಕಂಡಿತು.​ 6 ವಿಕೆಟ್​ಗಳ ಅಂತರದಲ್ಲಿ ಹೀನಾಯ ಸೋಲುಂಡ ರಜತ್ ಪಾಟಿದಾರ್​ ಪಡೆಗೆ ಇದು 19ನೇ ಆವೃತ್ತಿಯಲ್ಲಿ ಮೊದಲ ಲಾಸ್​.
ಪಂದ್ಯ ಸೋತ ಬೆನ್ನಲ್ಲೇ ಬೇಸರದಿಂದ ಮಾತನಾಡಿದ ಆರ್​ಸಿಬಿ ನಾಯಕ ರಜತ್ ಪಾಟಿದಾರ್​, ನಾವು ಪಂದ್ಯವನ್ನು ಸೋತರೂ ಸಹ ಕೆಲವು ಪಾಸಿಟಿವ್​ ಅಂಶಗಳಿವೆ. ಪವರ್ ಪ್ಲೇನಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದೆವು. ಮತ್ತು ಆರಂಭದಲ್ಲಿ ವಿಕೆಟ್ ಕಳೆದುಕೊಂಡ ನಂತರವೂ 202 ರನ್​ಗಳ ಗುರಿಯನ್ನು ಕೊಟ್ಟೆವು. ಅದೇ ರೀತಿ, ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್‌ಗಳು, ವಿಶೇಷವಾಗಿ ವೈಭವ್ ಸೂರ್ಯವಂಶಿ, ಪವರ್ ಪ್ಲೇನಲ್ಲಿ ಬ್ಯಾಟಿಂಗ್ ಮಾಡಿದ ರೀತಿ ನಮ್ಮ ಗೆಲುವಿನ ಲೆಕ್ಕಾಚಾರಗಳನ್ನು ಬದಲಿಸಿತು ಎಂದರು.
ವೈಭವ್​ ಸೂರ್ಯವಂಶಿ ನಮ್ಮಿಂದ ಗೆಲುವನ್ನು ಕಸಿದುಕೊಂಡರು. ಹಿಂದಿನ ಪಂದ್ಯಗಳಲ್ಲಿ ನಾವು ಆಡಿದ ರೀತಿ ತುಂಬಾ ಚೆನ್ನಾಗಿತ್ತು. ಆದರೆ, ಈ ಸೋಲಿನಿಂದ ಕಲಿಯಲು ಹಲವು ವಿಷಯಗಳಿವೆ ಎಂದರು. ಇನ್ನು ಸುಯಾಶ್​ ಶರ್ಮ ಅವರನ್ನು ಏಕೆ ಆಡಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ರಜತ್​, ಬೌಲಿಂಗ್ ಬದಲಾವಣೆಗಳ ಬಗ್ಗೆ ನಾವು ಹೆಚ್ಚು ಯೋಚಿಸಲಿಲ್ಲ. ಕಾರಣ, ವೆಂಕಟೇಶ್ ಅಯ್ಯರ್, ಶೆಫರ್ಡ್ ಮತ್ತು ಕೃನಾಲ್ ಅವರಿಗೆ ಓವರ್‌ಗಳನ್ನು ಕೊಟ್ಟಿದ್ದೆವು. ಇದೇನು ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿಲ್ಲ. ಈ ಪಂದ್ಯದಿಂದ ನಾವು ಬಹಳಷ್ಟು ಕಲಿಯುತ್ತೇವೆ ಮತ್ತು ಮುಂದುವರಿಯುತ್ತೇವೆ. ಮುಂದಿನ ಪಂದ್ಯಕ್ಕೆ ಖಂಡಿತ ಕಮ್​ಬ್ಯಾಕ್​ ಮಾಡುತ್ತೇವೆ ಎಂದು ಹೇಳಿದರು,(ಏಜೆನ್ಸೀಸ್).

ಪಂದ್ಯದ ವಿವರ

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 201 ರನ್ ಗಳಿಸಿತು. ತಂಡದ ಪರ ರಜತ್ ಪಟಿದಾರ್ (63 ರನ್​, 40 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್) ಅರ್ಧಶತಕ ಗಳಿಸಿದರು. ಇನ್ನು 32 ರನ್ ಬಾರಿಸಿದ ವಿರಾಟ್​ ಕೊಹ್ಲಿ​, 16 ಎಸೆತಗಳಲ್ಲಿ 7 ಬೌಂಡರಿ ಸಿಡಿಸಿದರು. ರಾಜಸ್ಥಾನ ಪರ ಜೋಫ್ರಾ ಆರ್ಚರ್, ರವಿ ಬಿಷ್ಣೋಯ್ ಮತ್ತು ಬ್ರಿಜೇಶ್ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ಸಂದೀಪ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಈ ಗುರಿಯನ್ನು ಬೆನ್ನತ್ತಿದ ಆರ್​ಆರ್​ಗೆ ವೈಭವ್ ಸೂರ್ಯವಂಶಿ (78 ರನ್​, 26 ಎಸೆತ, 8 ಬೌಂಡರಿ, 7 ಸಿಕ್ಸರ್) ಮತ್ತು ಧ್ರುವ್ ಜುರೆಲ್ ( ಅಜೇಯ 81 ರನ್​, 43 ಎಸೆತ, 8 ಬೌಂಡರಿ, 3 ಸಿಕ್ಸರ್) ಅದ್ಭುತ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ 18 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ಗಳ ನಷ್ಟಕ್ಕೆ 202 ರನ್​ಗಳ ಟಾರ್ಗೆಟ್​ ಅನ್ನು ತಲುಪಿತು. ಆರ್‌ಸಿಬಿ ಪರ, ಜೋಶ್ ಹೇಜಲ್‌ವುಡ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net