ಉತ್ತಮ ಫಾರ್ಮ್‌ನಲ್ಲಿದ್ದ ಕೊಹ್ಲಿ, ದೊಡ್ಡ ಸ್ಕೋರ್ ಮಾಡುವ ಗುರಿಯೊಂದಿಗೆ ಆಡುವಾಗ ಅನಿರೀಕ್ಷಿತವಾಗಿ ಔಟ್ ಆಗಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ, ತಮ್ಮ ತಂಡವು ಕೂಡ ಬೃಹತ್ ಕಲೆಹಾಕುವ ಹಾದಿಯಲ್ಲಿ ಸಾಗುತ್ತಿತ್ತು. ಆರಂಭದಲ್ಲಿ ಬಿರುಸಿನ ಆಟವಾಡಿದ ಕೊಹ್ಲಿ ನಂತರದಲ್ಲಿ ಸಾಕಷ್ಟು ಬಾಲ್ಗಳನ್ನು ತೆಗೆದುಕೊಂಡರು. ಹೇಗಾದರೂ ಮಾಡಿ ಗೇರ್ ಬದಲಿಸಿ, ಸ್ಫೋಟಕ ಇನ್ನಿಂಗ್ಸ್ ಆಡಬೇಕು ಅನ್ನುವಷ್ಟರಲ್ಲಿ ಔಟ್ ಆಗಿದ್ದು ಕೊಹ್ಲಿಗೆ ತುಂಬಾ ಬೇಸರ ಮೂಡಿಸಿತು. ನನ್ನಿಂದ ಸ್ಫೋಟಕ ಆಟವಾಡಲು ಸಾಧ್ಯವಾಗಲಿಲ್ಲವಲ್ಲ ನಿರಾಸೆ ಮೂಡಿತು. ಹೀಗಾಗಿ, ಪೆವಿಲಿಯನ್ ಕಡೆಗೆ ನಡೆಯುತ್ತಿದ್ದಾಗ, ಕೊಹ್ಲಿ ತಮ್ಮ ಕೈಗವಸುಗಳನ್ನು ಹಾಗೂ ಹೆಲ್ಮೆಟ್ ಅನ್ನು ನೆಲದ ಮೇಲೆ ಎಸೆದರು ಅಸಮಾಧಾನ ಹೊರಹಾಕಿದರು. ಫಿನಿಷರ್ ಪಾತ್ರದಲ್ಲಿ ತಮ್ಮ ಇನ್ನಿಂಗ್ಸ್ ಅನ್ನು ಸೂಕ್ತವಾಗಿ ಕೊನೆಗೊಳಿಸಲು ಸಾಧ್ಯವಾಗದ ಬೇಸರ ಕೊಹ್ಲಿ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸಿತು.