2026ರ ಐಪಿಎಲ್ ಟೂರ್ನಿಯ ಹೈ-ವೋಲ್ಟೇಜ್ ಫೈನಲ್ ಕದನದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ, ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ಐತಿಹಾಸಿಕ ಗೆಲುವಿನ ಸುದೀರ್ಘ ಸಂಭ್ರಮಾಚರಣೆ ನಡುವೆ, ಸುಮಾರು ಒಂದು ವಾರದ ಬಳಿಕ ಆರ್ಸಿಬಿ ತಂಡದ ಮಾಜಿ ನಾಯಕ ಹಾಗೂ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಇಡೀ ಸೀಸನ್ನ ರೋಚಕ ಪಯಣವನ್ನು ನೆನಪು ಮಾಡಿಕೊಂಡಿದ್ದಾರೆ. ಟ್ರೋಫಿ ಗೆಲುವಿನ ಹಿನ್ನೆಲೆಯಲ್ಲಿ ಇಡೀ ತಂಡ ನಡೆದುಬಂದ ಹಾದಿ, ಅನುಭವಿಸಿದ ಏರಿಳಿತಗಳು ಮತ್ತು ಒತ್ತಡದ ಕ್ಷಣಗಳನ್ನು ಮೆಲುಕು ಹಾಕುತ್ತಾ ಕೊಹ್ಲಿ ಹಂಚಿಕೊಂಡಿರುವ ಈ ವಿಶೇಷ ಪೋಸ್ಟ್, ಇದೀಗ ಕ್ರಿಕೆಟ್ ವಲಯದಲ್ಲಿ ಅಕ್ಷರಶಃ ಸದ್ದು ಮಾಡುತ್ತಿದೆ.