ಸಿಗರೇಟ್ ಸೇದುವ ವಿಚಾರಕ್ಕೆ ರಿಯಾಲಿಟಿ ಶೋ ಸ್ಫರ್ಧಿಯ ಕಿರಿಕ್‌: ದೂರು ದಾಖಲು

Celebrity
Published on

ಬೆಂಗಳೂರು: ಸಿಗರೇಟ್​ ಸೇದುವ ವಿಚಾರಕ್ಕೆ ಸೆಲೆಬ್ರಿಟಿಯೊಬ್ಬ ಕಿರಿಕ್​ ಮಾಡಿಕೊಂಡಿರುವ ಘಟನೆ ಬಸವೇಶ್ವರ ನಗರ ಸಾಣೆಗುರವನಹಳ್ಳಿ ಸರ್ಕಲ್​ನಲ್ಲಿ ನಡೆದಿದೆ.

ಡ್ಯಾನ್ಸ್ ರಿಯಾಲಿಟಿ ಶೋ ಸ್ಫರ್ಧಿ ರಜತ್​ ವಿರುದ್ಧ ಕಿರಿಕ್ ಮಾಡಿರುವ ಆರೋಪ ಕೇಳಿಬಂದಿದೆ. ಧೂಮಪಾನ ಮಾಡಲು ಅಂಗಡಿಯ ಬಾಗಿಲ ಮುಂದೆಯೇ ತನ್ನ ಐಷಾರಾಮಿ ಕಾರ್ ಪಾರ್ಕಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅಂಗಡಿಯವನ ಮೇಲೆ ಹಲ್ಲೆ ಮಾಡಿದ್ದಾರೆನ್ನಲಾಗಿದೆ.

ರಜತ್​ ಕನ್ನಡ ಕಿರುತೆರೆಯ ಕೆಲವು ರಿಯಾಲಿಟಿ ಶೋ ನಲ್ಲಿ ಸ್ಫರ್ಧಿಯಾಗಿದ್ದರು. ವ್ಯಾಪಾರದ ಸಮಯದಲ್ಲಿ ಅಂಗಡಿ ಮುಂದೆ ಕಾರ್ ಪಾರ್ಕ್ ಮಾಡಿ ಧೂಮಪಾನ ಮಾಡಲು ಪಕ್ಕಕ್ಕೆ ಹೋಗಿದ್ದರಂತೆ. ಈ ವೇಳೆ ಕಾರ್ ಸೈಡಿಗೆ ಹಾಕಿ ಎಂದು ಅಂಗಡಿ ಮಾಲೀಕ ಕಿರಣ್​ ರಾಜ್​ ಹೇಳಿದ್ದಕ್ಕೆ ಕಿರಣ್ ಮತ್ತು ಅವರ ತಾಯಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಘಟನೆ ಸಂಬಂಧ ಸದ್ಯ ನಗರದ ಬಸವೇಶ್ವರನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net