ಚಿರು ಅಭಿಮಾನಿಗಳ ವಿರುದ್ಧ ನಾಲ್ಕು ಪೊಲೀಸ್​ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲು

Chiru - Cremation Final
Published on

ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ ಹರಡುವ ಸಂದರ್ಭದಲ್ಲೇ ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ನಿಧನರಾದರು. ನಟನ ಅಂತಿಮ ದರ್ಶನ ಪಡೆಯಲು ಕರೊನಾ ಮಾರ್ಗಸೂಚಿಯನ್ನು ಅನುಸರಿಸದೇ ಆಗಮಿಸಿದ್ದ ಚಿರು ಅಭಿಮಾನಿಗಳ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಚಿರು ಪಾರ್ಥೀವ ಶರೀರವನ್ನು ಸಾವಿರಾರು ಅಭಿಮಾನಿಗಳು ವೀಕ್ಷಿಸಿದ್ದರು. ಹೀಗಾಗಿ ಕರೋನಾ ರೋಗ ನಿಯಂತ್ರಣದ ನಿಯಮ‌ ಉಲ್ಲಂಘನೆ ಆರೋಪ ಕೇಳಿಬಂದಿದ್ದು, ಸರ್ಜಾ ಕುಟುಂಬದ ಅಭಿಮಾನಿಗಳ ವಿರುದ್ದ ನಾಲ್ಕು ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಜೇನು ನೊಣಗಳಿಗೆ ಇನ್ನಿಲ್ಲದ ಕೆಲಸ ನೀಡಿದ ಲಾಕ್​ಡೌನ್​….!

ಜಯನಗರ, ತಲಘಟ್ಟಪುರ, ಕುಮಾರಸ್ವಾಮಿ ಲೇಔಟ್ ಹಾಗೂ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಎನ್​ಡಿಎಂಎ ಕಾಯ್ದೆಯನ್ವಯ ಒಟ್ಟು 59 ಪ್ರಕರಣಗಳು ದಾಖಲಾಗಿವೆ. ಸರ್ಜಾ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಸಲ್ಲಿಕೆಯಾಗಿವೆ.

ವ್ಯಕ್ತಿಯೊಬ್ಬರು ಸರ್ಜಾ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೋರ್ಟ್ ಆದೇಶದ ಬಳಿಕ ದಕ್ಷಿಣ ವಿಭಾಗದ ಪೊಲೀಸರು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಚಿರಂಜಿವಿ ಸರ್ಜಾ ಸಾವಿನ ಬಳಿಕ ಪೊಲೀಸರು ಪ್ರತಿ ಹಂತದಲ್ಲೂ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.

ಜಯನಗರ ಠಾಣಾ ವ್ಯಾಪ್ತಿಯ ಆಸ್ಪತ್ರೆಯಲ್ಲಿ ಚಿರಂಜಿವಿ ಸರ್ಜಾರ ಮೃತದೇಹವಿದ್ದ ವೇಳೆ ನೂರಾರು ಅಭಿಮಾನಿಗಳು ಸೇರಿದ್ದರು. ಬನಶಂಕರಿ ಠಾಣಾ ವ್ಯಾಪ್ತಿಯ ಚಿರು ನಿವಾಸದ ಎದುರು ಅಂತಿಮ ದರ್ಶನಕ್ಕೆ ನೂರಾರು ಜನ ಸೇರಿದ್ದರು. ತಲಘಟ್ಟಪುರ ಹಾಗೂ ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯ ಮಾರ್ಗವಾಗಿ ಮೃತದೇಹದ ಜತೆ ಮೆರವಣಿಗೆಯಲ್ಲಿ ಅನೇಕ ಜನರು ಸಾಗಿದ್ದರು. ಇದನ್ನೂ ಓದಿ: ಒಂದಿಡೀ ದಿನವಾದರೂ ಬೇಯಲಿಲ್ಲ ಕರೊನಾಪೀಡಿತನ ಶವ…!

ಈ ಹಿನ್ನೆಲೆಯಲ್ಲಿ ಪೊಲೀಸರು ಎನ್​ಡಿಎಂಎ ಆಕ್ಟ್ ಅಡಿಯಲ್ಲಿ ಕೇಸ್‌ ದಾಖಲಿಸಲು ಕೋರ್ಟ್ ಅನುಮತಿ ಕೇಳಿದ್ದರು. ಇದೀಗ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ನಾಲ್ಕು ಪ್ರತ್ಯೇಕ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net