"ನಿನ್ನ ಜೀವನ ನನ್ನ ಚಪ್ಪಲಿ..." ಹಾಟ್​ ಬ್ಯೂಟಿ ಡಿಂಪಲ್​ ಹಯಾತಿ, ಆಕೆಯ ಪತಿ ವಿರುದ್ಧ ದಾಖಲಾಯ್ತು ಕ್ರಿಮಿನಲ್ ಕೇಸ್ | Dimple Hayathi

ವಿಜಯವಾಣಿ (5)
Published on

Dimple Hayathi​: ಟಾಲಿವುಡ್​ ಮತ್ತು ಕಾಲಿವುಡ್​ನಲ್ಲಿ ತನ್ನದೇ ಅಭಿಮಾನಿಗಳನ್ನು ಹೊಂದಿರುವ ಹಾಟ್​ ಬ್ಯೂಟಿ ಡಿಂಪಲ್​ ಹಯಾತಿ ಮತ್ತು ಆಕೆಯ ಪತಿ ವಿರುದ್ಧ ಇದೀಗ ಕ್ರಿಮಿನಲ್ ಕೇಸ್​ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ತನ್ನ ಮೈಮಾಟ ಮತ್ತು ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಡಿಂಪಲ್​ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಮನೆ ಕೆಲಸದಾಕೆಗೆ ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆ ನಡೆಸಿದ್ದಲ್ಲದೇ, ಹಿಂಸೆ ನೀಡಿದ್ದಾಗಿ ಪೊಲೀಸ್​ ಠಾಣೆಯಲ್ಲಿ ನಟಿ ಮತ್ತು ಆಕೆಯ ಪತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಪೊಲೀಸರ ಪ್ರಕಾರ, ಒಡಿಶಾದ ರಾಯಗಡ ಮೂಲದ ಪ್ರಿಯಾಂಕಾ ಬಿಬರ್ ಎಂಬ ಯುವತಿ, ಸೆಪ್ಟೆಂಬರ್ 22ರಂದು ಉದ್ಯೋಗ ಅರಸಿ ಹೈದರಾಬಾದ್‌ಗೆ ಬಂದಿದ್ದಳು. ಅದೇ ದಿನ, ಆಕೆಗೆ ವೆಸ್ಟ್‌ವುಡ್ ಅಪಾರ್ಟ್‌ಮೆಂಟ್‌ನಲ್ಲಿರುವ ನಟಿ ಡಿಂಪಲ್ ಹಯಾತಿ ನಿವಾಸದಲ್ಲಿ ಮನೆಗೆಲಸ ಮಾಡುವ ಕೆಲಸ ಸಿಕ್ಕಿತು. ಆದರೆ, ದಿನ ಕಳೆದಂತೆ ಸಣ್ಣ ಸಣ್ಣ ವಿಚಾರಕ್ಕೆ ಜಗಳ ತೆಗೆಯುತ್ತಿದ್ದ ದಂಪತಿ, ಮಾಡಿದ ಕೆಲಸಕ್ಕೆ ಕೂಲಿಯೂ ಕೊಡದೆ, ಮನಬಂದಂತೆ ಬೈಯುವುದು ಮತ್ತು ಹಲ್ಲೆ ಮಾಡಿದ್ದಾರೆ. ಇಷ್ಟಲ್ಲದೇ, ನಿನ್ನ ಜೀವನ ನನ್ನ ಚಪ್ಪಲಿಗೂ ಸಮವಿಲ್ಲ ಎಂದು ಕೀಳಾಗಿ ಕಂಡಿದ್ದಾಗಿ ಆರೋಪಿಸಿದ್ದಾರೆ.

ತನ್ನೊಂದಿಗೆ ಹಯಾತಿ ಮತ್ತು ಆಕೆಯ ಪತಿ ಕೆಟ್ಟದಾಗಿ ವರ್ತಿಸಿದ್ದಾರೆ ಮತ್ತು ಕಿರುಕುಳ ನೀಡಿದ್ದಾರೆ. ತಮ್ಮ ಸಾಕು ನಾಯಿ ಬೊಗಳಿದಾಗಲ್ಲೆ, ನನ್ನ ಮೇಲೆ ನಿರ್ಲಕ್ಷ್ಯದ ಆರೋಪ ಹೊರಿಸಿ, ಅವಾಚ್ಯ ಪದಗಳಿಂದ ಬೈದಿದ್ದಾರೆ. ಇದನ್ನೂ ಮೀರಿ, ನನ್ನನ್ನು ವಿವಸ್ತ್ರಗೊಳಿಸಿ ಥಳಿಸಲು ಮುಂದಾದರು. ನನ್ನ ಪತಿ ವಕೀಲ. ನಿನ್ನನ್ನು ಹೇಗೆ ನೋಡ್ಕೊಬೇಕು ಅನ್ನೋದು ಚೆನ್ನಾಗಿ ಗೊತ್ತಿದೆ ಎಂದು ಬೆದರಿಸುತ್ತಾರೆ. ಇದರಿಂದ ನನಗೆ ಭಾರೀ ಭಯ ಕಾಡಿತು ಎಂದು ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net